ಅದು ಅವರು ಮದುವೆಯಾದ ದಿನವಾಗಿತ್ತು.

ಅದು ಅವರು ಮದುವೆಯಾದ ದಿನವಾಗಿತ್ತು. ಮದುವೆ ವಾರ್ಷಿಕೋತ್ಸವ ಆಚರಿಸುವ ದಿನವಾಗಿತ್ತು. ಹೆಂಡತಿ ಗಂಡನಿಗಾಗಿ ಕಾದು ಕುಳಿತ್ತಿದ್ದಳು. ಅವರು ಮದುವೆ ಆದ ನಂತರ ಇಲ್ಲಿಯವರೆಗೆ ಮೊದಲು ಇದ್ದ ಹಾಗೆ ಇರಲಿಲ್ಲ ತುಂಬಾನೇ ಬದಲಾಗಿದ್ದರು. ಒಂದು ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಇರದ ಇವರು ಇವಾಗ ಅದಕ್ಕೆ ತದ್ವಿರುದ್ದವಾಗಿದ್ದರು. 
ಸಣ್ಣ ಸಣ್ಣ ವಿಷಯಕ್ಕೂ ಜಗಳ, ಒಬ್ಬರಿಗೊಬ್ಬರು ಬೆಲೆ ಕೊಡುವುದೇ ಮರೆತುಬಿಟ್ಟಿದ್ದರು. ಆದರೆ ಇಬ್ಬರ ಮನಸಲ್ಲೂ ಬದಲಾಗಿರುವುದು ಸ್ವಲ್ಪಾನೂ ಇಷ್ಟವಿರಲಿಲ್ಲ. ಹೆಂಡತಿ ಸುಮ್ಮನೆ ಇದ್ದಳು ತನ್ನ ಗಂಡ ತಮ್ಮ ಮದುವೆ ದಿನವನ್ನು ನೆನಪಲ್ಲಿ ಇಟ್ಟಿದ್ದಾರ ಇಲ್ವಾ ಅಂತ !.
ಸ್ವಲ್ಪ ಹೊತ್ತಲ್ಲೇ ಬಾಗಿಲು ತಟ್ಟಿದ ಶಬ್ದವಾಯಿತು ಹೆಂಡತಿ ಬಾಗಿಲು ತೆರೆದಾಗ ಗಂಡನ ಕೈಯಲ್ಲಿ ಹೂವಿನ ಬೊಕ್ಕೆ ಮುಖದಲ್ಲಿ ನಗು. ಅವರು ಪುನಃ ಮೊದಲು ಇರೋವಗೆ ಇರಲು ಬಯಸಿದರು. ಜಗಳ ಮಾಡದೇ, ಅವರ ದಿನವನ್ನು ಆಚರಿಸಲು ಶುರುಮಾಡಿದರು, ಮನೆಯಲ್ಲಿ ಮಧುರವಾದ ಸಂಗೀತ, ಮನೆಯ ಹೊರಗೆ ಮಳೆ ಬರುತ್ತಿತ್ತು ಆ ಕ್ಷಣ ತುಂಬಾನೇ ಸುಂದರವಾಗಿತ್ತು.
ಸ್ವಲ್ಪ ಹೊತ್ತಲ್ಲಿ ಮನೆಯ ಫೋನ್ ರಿಂಗ್ ಆಯಿತು.
ಹೆಂಡತಿ ಹೋಗಿ ಫೋನ್ ಅನ್ನು ಎತ್ತಿದಳು. ಅದರಲ್ಲಿ ಒಬ್ಬ ಮಾತಾಡಲು ಶುರುಮಾಡಿದ." ಹಲೋ ನಾವು ಪೋಲಿಸ್ ಸ್ಟೇಷನ್ ಇಂದ ಕಾಲ್ ಮಾಡುತ್ತಿದ್ದೇವೆ, ಇದು ಶ್ರೇಯಸ್ ಅವರ ನಂಬರ್ ಆ ?"
ಹಾ ಹೌದು ಅಂತ ಹೆಂಡತಿ ಹೇಳಿದಳು!.
ಐ ಎಮ್ ಸಾರೀ ಮ್ಯಾಮ್; ಇಲ್ಲಿ ಒಂದು ಆಕ್ಸಿಡೆಂಟ್ ಆಯಿತು ಒಬ್ಬ ವ್ಯಕ್ತಿ ಸತ್ತಿದ್ದಾರೆ. ನಮಗೆ ಈ ನಂಬರ್ ಆ ವ್ಯಕ್ತಿಯ ಜೇಬಿನಲ್ಲಿ ಸಿಕ್ಕಿತು, ದಯವಿಟ್ಟು ಬಂದು ನಿಮಗೆ ತಿಳಿದಿರುವವರ ಅಂತ ನೋಡಿ.
ಹೆಂಡತಿಗೆ ತನ್ನ ಹ್ರದಯ ಒಡೆದೆ ಹೊದಾಗೆ ಆಯಿತು !!! ಅವಳು ಶಾಕ್ ಅಲ್ಲಿ ಹೇಳಿದಳು ಆದರೆ ನನ್ನ ಪತಿ ನನ್ನ ಜೊತೇನೆ ಇದ್ದಾರೆ...
ಆ ಕಡೆ ಇಂದ ಸಾರೀ ಮ್ಯಾಮ್ ಆದರೆ ಇದು ೨ ಗಂಟೆಗೆ ನಡೆದಿದೆ ಟ್ರೈನ್ ಹತ್ತೋವಾಗ ಈ ದುರ್ಘಟನೆ ನಡೆದಿದೆ.
ಹೆಂಡತಿಗೆ ನಂಬಲು ಆಗಲಿಲ್ಲ ಇದುಹೇಗೆ ಆಗುತ್ತೆ?
ಅವಳು ಮೊದಲು ಎಲ್ಲೋ ಕೇಳಿದ್ದಳು ಆತ್ಮಗಳು ತಮ್ಮ ಪ್ರೀತಿ ಪಾತ್ರರನ್ನು ನೋಡಲು ಬರುತ್ತವೆ ಈ ಬೂಮಿಯನ್ನು ತ್ಯಜಿಸೋ ಮೊದಲು ಅಂತ!
ಅವಳು ತನ್ನ ಗಂಡ ಇದ್ದ ರೋಂ ಕಡೆ ಓಡಿದಳು. ಆದರೆ ಅವನು ಅಲ್ಲಿ ಇರಲಿಲ್ಲ. ಅದು ಸತ್ಯವಾಗಿತ್ತು. ಅವನು ಅವಳನ್ನು ಬಿಟ್ಟು ಹೋಗಿದ್ದ.
ಅವಳು ನೆಲದ ಮೇಲೆ ಬಿದ್ದು ಕೂಗಲು ಪ್ರಾರಂಬಿಸಿದಳು, ದೇವರೇ ನನಗೆ ಇನ್ನೊಂದು ಚಾನ್ಸ್ ಕೊಡಬಾರದಿತ್ತ ಇಷ್ಟು ದಿನ ಜಗಳ ಮಾಡಿದೆ ಅವರ ಬೆಲೆ ತಿಳಿಯದೆ ಹೋದೆ, ಅವರ ಪ್ರೀತಿ ಕಾಣಲೇ ಇಲ್ಲ ಇನ್ನಾದರೂ ಪ್ರೀತಿಲಿ ಸಣ್ಣ ಜಗಳ ಆಡಬೇಕೆಂದುಕೊಂಡಿದ್ದೆ, ಪ್ರೀತಿಲಿ ನೋಡಬೇಕೆಂದಿದ್ದೆ ದೇವರೇ ಒಂದು ಚಾನ್ಸ್ ಕೊಡದೆ ನನ್ನಿಂದ ದೂರ ಮಾಡಿಬಿಟ್ಟಿ ಅಲ್ಲ ಅಂತ ಬಿದ್ದು ಬಿದ್ದು ಅತ್ತಳು.
ತಕ್ಷಣ ಬಾತ್ರೂಮ್ ಇಂದ ಶಬ್ದ ಬಂತು, ಬಾಗಿಲು ತೆರೆದು ಅವಳ ಹತ್ತಿರ ಅವಳ ಗಂಡ ಬಂದು "ಕಣೇ ನಾನು ಹೇಳಲು ಮರೆತಿದ್ದೆ ಇವತ್ತು ನನ್ನ ಪರ್ಸ್ ಕಳವಾಯಿತು."
ಜೀವನವು ನಿಮಗೆ ಇನ್ನೊಂದು ಅವಕಾಶ ಕೊಡದೆ ಇರಬಹುದು. ಅದರಿಂದ ಸುಮ್ಮನೆ ಕ್ಷಣಗಳನ್ನು ಹಾಳುಮಾಡುವ ಬದಲು ನಿಮ್ಮ ತಪ್ಪನ್ನು ಅರಿತು ಬದಲಾದರೆ ಒಳ್ಳೆದಲ್ಲವ, ಸಂಭಂದಗಳಿಗೆ ಬೆಲೆ ಕೊಡುವುದು ಒಳ್ಳೆದಲ್ಲವ. ಅದು,
ನಮ್ಮ ಹೆತ್ತವರಿಗೆ
ನಮ್ಮ ಕುಟುಂಬದವರಿಗೆ
ನಮ್ಮ ಸ್ನೇಹಿತರಿಗೆ
ಮತ್ತು ನೀವು ಇಷ್ಟಪಟ್ಟವರಿಗೆ .
ನಾಳೆ ಇರುತ್ತೇವೆ ಅನ್ನೊದ ಹೇಳಲು ಆಗಲ್ಲ. ಇವತ್ತೇ ಭಾವನೆಗಳಿಗೆ ಬೆಲೆ ಕೊಡಿ. ನಿಮ್ಮ ಜೀವನವು ಖುಷಿಯಗಿರಲಿ ಯಾವ ನೋವಿಲ್ಲದೆ. ಪ್ರೀತಿಯಿಂದ ನಿಮ್ಮ ಪುಟ್ಟಹಾರ್ಟ್
by Putta Heart

ಇದು ಕಥೆಯಲ್ಲ ಪ್ರತಿಯೊಬ್ಬರ ಭಾವನೆಗೆ ಒಳಪಟ್ಟಿದ್ದು... (ಹೇಳಲಾಗದ ಪ್ರೀತಿ)

ಇದು ಕಥೆಯಲ್ಲ ಪ್ರತಿಯೊಬ್ಬರ ಭಾವನೆಗೆ ಒಳಪಟ್ಟಿದ್ದು... (ಹೇಳಲಾಗದ ಪ್ರೀತಿ)
10 ನೇ ತರಗತಿ :-
ನಾನು ಇಂಗ್ಲಿಷ್ ಕ್ಲಾಸ್ ಅಲ್ಲಿ ಕುಳಿತಿದ್ದೆ, ನಾನು ನನ್ನ ಪಕ್ಕದ ಬೆಂಚ್ ಅಲ್ಲಿ ಕುಳಿತಿದ್ದ ಹುಡುಗಿಯನ್ನು ನೋಡುತಿದ್ದೆ. ಅವಳು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಳು. ನಾನು ಅವಳ ನುಣುಪಾದ ಕೂದಲನ್ನು ನೋಡುತಿದ್ದೆ. ನನಗೆ ಅನಿಸಿತ್ತು ಅವಳು ನನ್ನವಳಾಗಿದ್ದರೆ?. ಆದರೆ ಅವಳು ನನ್ನನ್ನು ಅತರ ನೋಡಲೇ ಇಲ್ಲ ಮತ್ತು ನನಗೆ ಗೊತ್ತಿತ್ತು. ಕ್ಲಾಸ್ ಮುಗಿದ ಬಳಿಕ ಅವಳು ನನ್ನ ಬಾಲಿ ಬಂದು ನನ್ನಲ್ಲಿ ನೋಟ್ಸ್ ಕೇಳಿದಳು ಅವಳು ಹಿಂದಿನ ದಿನ ಕ್ಲಾಸ್ ಗೆ ಬರಲಿಲ್ಲ. ನಾನು ಅವಳಿಗೆ ನೋಟ್ಸ್ ಕೊಟ್ಟೆ.
ಅವಳು ಥ್ಯಾಂಕ್ಸ್ ಹೇಳಿ ಕೆನ್ನೆಯ ಮೇಲೆ ಮುತ್ತೊಂದನ್ನು ಕೊಟ್ಟಳು. ನಾನು ಅವಳಿಗೆ ಹೇಳಬಯಸಿದ್ದೆ, ನಾನು ಅವಳಿಗೆ ತಿಳಿಯಬಯಸಿದ್ದೆ ನಾನು ಬರಿ ಸ್ನೇಹಿತನಾಗಿರಲು ಇಷ್ಟವಿಲ್ಲ ಅಂತ, ನಾನು ಅವಳನ್ನು ಪ್ರೀತಿಸುತ್ತಿದ್ದೆ ಆದರೆ ನಾನು ಹೇಳಲು ನಾಚಿಕೆಪಡುತಿದ್ದೆ, ಮತ್ತು ಯಾಕಂತ ಗೊತ್ತಿರಲಿಲ್ಲ.
11 ನೇ ಕ್ಲಾಸ್ :-
ಫೋನ್ ಬೆಲ್ ಆಗಿತ್ತು . ಎತ್ತಿದರೆ ಆ ಕಡೆ ಇಂದ ಅವಳೇ ಆಗಿದ್ದಳು. ಅವಳು ತುಂಬಾನೇ ಅಳುತ್ತಿದ್ದಳು, ಅಳುತ್ತಾನೆ ಅವಳ ಪ್ರೀತಿ ಮುರಿದು ಬಿದ್ದಿದನ್ನು ನನ್ನಲ್ಲಿ ಹೇಳಿದಳು. ನನ್ನನ್ನು ಅವಳಿದ್ದಲ್ಲಿ ಬರಹೆಳಿದಳು. ಯಾಕಂದರೆ ಒಂಟಿತನ ಅವಳಿಗೆ ಕಾಡುತಿತ್ತು. ಅದಕ್ಕೆ ನಾನು ಹೋದೆ ಅವಳ ಪಕ್ಕದಲ್ಲೇ ಕುಳಿತಿದ್ದೆ. ನಾನು ಅವಳ ಕಣ್ಣನ್ನೇ ನೋಡುತಿದ್ದೆ ಮತ್ತು ಎಣಿಸುತ್ತಿದ್ದೆ ಅವಳು ನನ್ನವಳಾಗಿದ್ದರೆ?. ಅವತ್ತು ನಾವು ಜೊತೆಯಲ್ಲಿ ಮೂವಿ ನೋಡಿದ್ವಿ, ತುಂಬಾ ಚಿಪ್ಸ್ ತಿಂದ್ವಿ , ಅವಳು ಮನೆಗೆ ಹೋಗ ಬಯಸಿದಳು.
ಅವಳು ನನ್ನ ನೋಡಿದಳು ಥ್ಯಾಂಕ್ಸ್ ಹೇಳಿದಳು ಮತ್ತು ಕೆನ್ನೆಯ ಮೇಲೆ ಮುತ್ತೊಂದ ಕೊಟ್ಟಳು. ನಾನು ಅವಳಿಗೆ ಹೇಳ ಬಯಸಿದ್ದೆ, ನಾನು ಬರಿ ಸ್ನೇಹಿತನಾಗಿರಲು ಇಷ್ಟವಿಲ್ಲ ಅಂತ, ನಾನು ಅವಳನ್ನು ಪ್ರೀತಿಸುತ್ತಿದ್ದೆ ಆದರೆ ಹೇಳಲು ನಾಚಿಕೆ ಪಡುತಿದ್ದೆ ಯಾಕೆ ಅನ್ನೋದು ತಿಳಿದಿರಲ್ಲಿಲ್ಲ.
12 ನೇ ಕ್ಲಾಸ್:-
ಅವಳು ನನ್ನ ಬಳಿ ಬಂದು ಹೇಳಿದಳು ಇವತ್ತು ನಾನು ಡೇಟಿಂಗ್ ಗೆ ಹೋಗಿದ್ದೆ. ಆದರೆ ಇಷ್ಟವಾಗಿರಲಿಲ್ಲ ಅಂದಳು. ನಾನು ಇಷ್ಟರವರೆಗೆ ಡೇಟಿಂಗ್ ಹೋಗಿರಲಿಲ್ಲ ಯಾರಜೋತೆನು. ನಾವು ೭ ನೆ ಕ್ಲಾಸ್ ಅಲ್ಲಿ ಇರೋವಾಗನೆ ಪ್ರೋಮಿಸ್ ಮಾಡಿಕೊಂಡಿದ್ದೆವು ನಾವು ಯಾರೊಬ್ಬರು ಡೇಟಿಂಗ್ ಹೋಗಲ್ಲ ಅಂತ, ನಾವು ಬರಿ ಸ್ನೇಹಿತರೆಂದುಕೊಂಡು ಹೋಗಬೇಕೆಂದು ಕೊಂಡಿದ್ದೆವು.
ಅದರಿಂದ ನಾವು ಡೇಟಿಂಗ್ ಹೋಗಿರಲಿಲ್ಲ. ಆದಿನಾ ರಾತ್ರಿ ಎಲ್ಲಾ ಮುಗಿದ ಬಳಿಕ ಅವಳ ಮನೆ ಬಾಗಿಲ ಮುಂದೆ ನಿಂತಿದ್ದೆ. ನಾನು ಅವಳನ್ನೇ ನೋಡುತಿದ್ದೆ ಅವಳು ಮುಗುಳ್ನಗುತ್ತಿದ್ದಳು ನಾನು ನಕ್ಷತ್ರದಂತೆ ಹೊಳೆಯುತ್ತಿದ್ದ ಅವಳ ಕಣ್ಣುಗಳನ್ನೇ ನೋಡುತ್ತಿದ್ದೆ.
ಮತ್ತೆ ಅವಳು ಹೇಳಿದಳು , ನನ್ನ ಸುಂದರವಾದ ಕ್ಷಣಗಳಿಗಾಗಿ ಥ್ಯಾಂಕ್ಸ್! ಮತ್ತು ನನ್ನ ಕೆನ್ನೆಯ ಮೇಲೆ ಮುತ್ತೊಂದ ಕೊಟ್ಟಳು. ನಾನು ಅವಳಿಗೆ ಹೇಳಬಯಸಿದ್ದೆ ನಾನು ಬರಿ ಸ್ನೇಹಿತನಾಗಿರಲು ಇಷ್ಟವಿಲ್ಲ ಅಂತ. ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ ಆದರೆ ಹೇಳಲು ನಾಚಿಕೆಪಡುತ್ತಿದ್ದೆ ಆದರೆ ಯಾಕಂತ ತಿಳಿಯುತ್ತಿರಲಿಲ್ಲ.
ಪದವಿ ತರಗತಿ:-
ದಿನ ಕಳೆದೊಗುತ್ತಿತ್ತು, ವಾರ ಬದಲಾಗುತ್ತಿತ್ತು ಮತ್ತು ತಿಂಗಳು ಸಹ. ಕಣ್ಣು ಮಿಟುಕಿಸುವಷ್ಟರಲ್ಲಿ ಗ್ರ್ಯಾಜುವೆಶನ್ ಡೇ. ನಾನು ಅವಳನ್ನು ನೋಡಿದೆ ಅವಳು ನಿಜವಾಗಿಯೂ ಸ್ವರ್ಗದ ಕಿನ್ನರಿಯಂತೆ ತೋರುತ್ತಿದ್ದಳು ಸ್ಟೇಜ್ ಗೆ ಹೋಗುವಾಗ. ನಾನು ಅಂದುಕೊಂಡಿದ್ದೆ ಅವಳು ನನ್ನವಳಾಗಬೇಕೆಂದು ಆದರೆ ಅವಳು ನನ್ನ ಹಾಗೆ ನೋಡಲೇ ಇಲ್ಲ. ಅದು ನನಗೆ ಗೊತ್ತಿತ್ತು.
ಕೊನೆಗೆ ಎಲ್ಲರೂ ಮನೆಗೆ ಹೋಗೋ ಮೊದಲು, ಅವಳು ನನ್ನ ಬಳಿ ಬಂದಳು ಅತ್ತಳು ನಾನು ಅವಳು ತಬ್ಬಿಕೊಂಡೆ.
ಮತ್ತೆ ಅವಳು ನನ್ನ ಬುಜದ ಮೇಲಿಂದ ತಲೆಎತ್ತಿ ಹೇಳಿದಳು- ನೀನು ನನ್ನ ಬೆಸ್ಟ್ ಫ್ರೆಂಡ್ ಅಂತ,
ಥ್ಯಾಂಕ್ಸ್ ಮತ್ತು ಕೆನ್ನೆಯಮೇಲೆ ಮತ್ತದೇ ಮುತ್ತು. ನಾನು ಅವಳಿಗೆ ಹೇಳಬಯಸಿದ್ದೆ, ನಾನು ಬರಿ ಸ್ನೇಹಿತನಾಗಿರಲು ಇಷ್ಟವಿಲ್ಲ ಅಂತ. ನಾನು ಅವಳನ್ನು ತುಂಬಾ ತುಂಬಾನೇ ಪ್ರೀತಿಸುತ್ತೀದ್ದೆ ಆದರೆ ಹೇಳಲು ನಾಚಿಕೆ ಅದೇನೋ ಗೊತ್ತಿಲ್ಲ.
ಮದುವೆ:-
ನಾನು ಮದುವೆಯಲ್ಲಿ ಕುಳಿತ್ತಿದ್ದೆ, ಅದು ಅವಳ ಮದುವೆ ಆಗಿತ್ತು. ಹೊಸ ಬದುಕಿಗೆ ಕಾಲಿಡುತ್ತಿದ್ದಳು ಆದರೆ ಇನ್ನೊಬ್ಬ ವ್ಯಕ್ತಿಯ ಜೊತೆ. ನಾನು, ಅವಳು ನನ್ನವಳಾಗಿರಬೇಕೆಂದು ಬಯಸಿದ್ದೆ. ಆದರೆ ಅವಳು ನನ್ನ ಬಗ್ಗೆ ಅತರ ಯೋಚಿಸಿಯೇ ಇರಲಿಕ್ಕಿಲ್ಲ, ಅದು ನನಗೆ ಗೊತ್ತಿತ್ತು. ಆದರೆ ಮದುವೆ ನಂತರ ಅವಳು ನನ್ನ ಬಳಿ ಬಂದು " ನೀನು ಬಂದಿಯಾ"!
ಅವಳು ಹೇಳಿದಳು ಥ್ಯಾಂಕ್ಸ್ ಮತ್ತು ಮತ್ತದೇ ಮುತ್ತನ್ನು ನನ್ನ ಕೆನ್ನೆಗೆ ಕೊಟ್ಟಳು. ನಾನು ಅವಳಿಗೆ ಹೇಳ ಬಯಸಿದ್ದೆ , ನಾನು ಬರಿ ಸ್ನೇಹಿತನಾಗಿರಲು ಇಷ್ಟವಿಲ್ಲ ಅನ್ನೋದನ್ನು , ನಾನು ಅವಳನ್ನು ಜೀವಕಿಂತ ಜಾಸ್ತಿ ಪ್ರೀತಿಸುತ್ತಿದ್ದೆ ಆದರೆ ಹೇಳಲು ಅಷ್ಟೇ ಭಯಪಡುತ್ತಿದ್ದೆ ನಾಚಿಕೆಪಡುತ್ತಿದ್ದೆ ಅದ್ಯಾಕನ್ನೋದ ತಿಳಿಯದೆ ಹೋದೆ.
ಸಾವು:-
ವರುಷಗಳೇ ಕಳೆದುಹೋದವು. ಅವಳನ್ನು ಸಾವಿನ ಪೆಟ್ಟಿಗೆಯಲ್ಲಿ ನೋಡಿದೆ. ಅವಳು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಳು. ಅವಳ ಮುಂದೆ ಅವಳು ತನ್ನ ಜೀವನದಲ್ಲಿ ಬರೆದ ಡೈರಿಯನ್ನು ಓದಿದರು,
ಅದರಲ್ಲಿ ಹೀಗಿತ್ತು:-
ನಾನು ಅವನನ್ನೇ ನೋಡುತ್ತಿದ್ದೆ, ನಾನು ಯೋಚಿಸುತ್ತಿದ್ದೆ ಅವನು ನನ್ನವನಾಗಿದ್ದರೆ?, ಆದರೆ ಅವನು ನನ್ನ ಅತರ ಯಾವತ್ತು ನೋಡಿರಲಿಕ್ಕಿಲ್ಲ, ಮತ್ತು ಅದು ನನಗೆ ಗೊತ್ತು. ನಾನು ಅವನಿಗೆ ಹೇಳಬಯಸಬೇಕೆಂದಿದ್ದೆ ನಾನು ಬರಿ ಸ್ನೇಹಿತೆಯಾಗಿ ಇರಲಿಕ್ಕೆ ಇಷ್ಟವಿಲ್ಲ ಅನ್ನೊದ. ನಾನು ಅವನನ್ನು ತುಂಬಾನೇ ಪ್ರೀತಿಸುತ್ತಿನೆ. ಆದರೆ ಹೇಳಲು ತುಂಬಾನೇ ನಾಚಿಕೆ ಅದು ಯಾಕೆ ಅನ್ನೋದು ನನಗೆ ಗೊತ್ತಿಲ್ಲ.
ನನ್ನ ಅಸೆ, ಅವನೇ ನನ್ನಲ್ಲಿ ಬಂದು ನನ್ನ ಪ್ರೀತಿಸುತ್ತೇನೆ ಅಂದಿದ್ದರೆ..!
........ ನಾನು ನನ್ನ ಪ್ರೀತಿ ಆಸೇನ ತಿಳಿಸುತ್ತಿದ್ದೆ.
ನಾನು ಅವಳಿಗೆ ನನ್ನ ಪ್ರೀತಿನ ಹೇಳಿದ್ದರೆ....?
ನಾನು ನನ್ನ ಬಗ್ಗೆ ಯೋಚಿಸಿ ಅತ್ತುಬಿಟ್ಟೆ.
************************************
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಅವರಿಗೆ ಹೇಳಿಬಿಡಿ. ಸುಮ್ಮನೆ ಹೇಳಲಾರದ ಭಾವನೆಗಳನ್ನು ಮೌನವಾಗಿಟ್ಟು ನಿಮ್ಮ ಹ್ರದಯವನ್ನ ನೀವೇ ಒಡೆದುಕೊಳ್ಳಬೇಡಿ.
ನೀವು ಯಾರನ್ನಾದರೂ ಪ್ರೀತಿಸಿದರೆ ಅವರಿಗೆ ಹೇಳಿಬಿಡಿ
ಅವರು ನಿಮ್ಮನು ಪ್ರೀತಿಸದೇ ಇರಬಹುದು ಆದರೆ
ಕೊನೆಯಲ್ಲಿ ಜೀವನದುದ್ದಕ್ಕೂಯೋಚಿಸುತ್ತ ಕೂರುವುದು ತಪ್ಪುತ್ತೆ. ಇಂತೀ ನಿಮ್ಮ ಪುಟ್ಟ ಹಾರ್ಟ್ .
Ur Putta Heart.

ನಮ್ಮ ಸೈನಿಕರು

THIS STORY IS DEDICATED TO INDAIN ARMY
ನಮ್ಮ ಸೈನಿಕರು 
ಇದು ಎರಡು ಸೈನಿಕರ ಕಥೆಯಾಗಿದ್ದು ಇಬ್ಬರು ಒಂದೇ ಟೀಮ್ ಅಲ್ಲಿ ಇದ್ದರು. ತಮ್ಮ ಕಷ್ಟಸುಖಗಳನ್ನ ಹಂಚಿಕೊಳ್ಳುತಿದ್ದರು. ದಿನ ನಿತ್ಯದಂತೆ ಅವರ ಕೆಲಸ ಗಡಿ ಕಾಯುವುದು ಆಗಿತ್ತು. ಒಬ್ಬರಿಗೆ ಮದುವೆ ಆಗಿತ್ತು ಇನ್ನೊಬ್ಬರು ಯುವಕರಾಗಿದ್ದರು. ಸೈನಿಕರಂದರೆ ಹಾಗೆ ಅಲ್ವ ತಮ್ಮ ಸಂಸಾರ ಬಿಟ್ಟು ದೂರ ಇದ್ದು ಭಾರತ ಮಾತೆಯ ಸುರಕ್ಷತೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಡುವವರು ದೇಶದ ಜನರನ್ನು ಕಾಪಾಡುವವರು. ಆಗಾಗ ಮನೆಯವರೊಂದಿಗೆ ಫೋನ್ ಮೂಲಕ ಮಾತು ಅಷ್ಟೇ. ಚಳಿ ಬಿಸಿಲು ಯಾವುದು ಲೆಕ್ಕಕ್ಕಿಲ್ಲ ದೇಶದ ರಕ್ಷಣೆ ಒಂದೇ ಧೇಯಾ. ಇವರಿಗೆ ಸ್ವಲ್ಪ ದಿನದ ಮಟ್ಟಿಗೆ ರಜೆ ಸಿಕ್ಕಿತ್ತು ಇಬ್ಬರು ಅವರವರ ಊರಿಗೆ ಸಂತೋಷದಿಂದ ಹೋದರು. ಮನೆಯವರ ಜೊತೆಗೆ ಖುಷಿಯಿಂದ ಇದ್ದರು. ಅದರಲ್ಲೂ ಮದುವೆ ಅದ ಯೋಧನಿಗೆ ತುಂಬಾ ಸಂತೋಷ ಯಾಕಂದರೆ ಅವರ ಹೆಂಡತಿಗೆ ೮ ತಿಂಗಳು ತುಂಬಿತ್ತು. ಮತ್ತು ಇನ್ನೊಬ್ಬ ಯೋಧನಿಗೂ ಖುಷಿ ತನ್ನ ಪ್ರೇಯಸಿ ನೋಡಿದ ಖುಷಿ ಮತ್ತು ಮನೆಯಲ್ಲಿ ಮದುವೆ ನಿಶ್ಚಯ ಆಗಿತ್ತು. ಇವರಿಬ್ಬರು ದೇಶದ ಮೇಲೆ ತುಂಬಾನೇ ಪ್ರೀತಿ ಹೊಂದಿದ್ದರು. ಶಿಸ್ತು ಅನ್ನೋದು ಇವರ ರಕ್ತದಲ್ಲೇ ತುಂಬಿತ್ತು. ಇಷ್ಟೆಲ್ಲಾ ಖುಷಿಯಗಿರುವಾಗ ಇವರಿಗೊಂದು ಕಾಲ್ ಬರುತ್ತೆ. ಗಡಿಯಲ್ಲಿ ಯುದ್ಧ ನಡಿಯುತ್ತಿದೆ, ಉಗ್ರರು ದೇಶದ ನೆಮ್ಮದಿ ಹಾಳುಮಾಡಲು ಒಳನುಸುಳಲು ಹೊಂಚು ಹಾಕುತ್ತಿದ್ದಾರೆ ನಿಮ್ಮ ಕರ್ತವ್ಯ ಬೇಕಾಗಿದೆ ತಕ್ಷಣ ಹೊರಟು ಬನ್ನಿ ಅಂತ. ಅಷ್ಟರಲ್ಲಿ ಎರಡು ಮನೆಯವರ ಕಣ್ಣಲ್ಲಿ ನೀರು ದುಃಖದ ಮುಖ. ಕಳುಹಿಸಿಕೊಡಲು ಹಿಂದೇಟು. ಮೊದಲನೇ ಯೋಧ ಹೆಂಡತಿ ತಾಯಿ ತಂದೆ ಮನೆಯವರನ್ನು ನೋಡಿ ಹೀಗೆಂದ, "ನೀವೇಕೆ ದುಃಖದಲ್ಲಿದ್ದ್ದಿರಿ ಇದು ಸರಿಯಲ್ಲ. ಅಮ್ಮ ಅಪ್ಪ ಮತ್ತು ನನ್ನ ಮಡದಿ ನೀವು ನನಗೆ ಎಷ್ಟು ಮುಖ್ಯಾನೋ ನಿಮ್ಮ ಮೇಲೆ ಎಷ್ಟು ಪ್ರೀತಿ ನನಗಿದೆಯೋ ಅಷ್ಟೇ ಪ್ರೀತಿ ಭಾರತ ಮಾತೆಯ ಮೇಲಿದೆ. ನಿಮಗೆ ಏನಾಗೋದನ್ನು ನನಗೆ ನೋಡಲು ಅಗಲ್ವೋ ಹಾಗೆ ನಮ್ಮ ತಾಯಿ ಭಾರತಾಂಬೆಗೆ ಏನಾಗೋದನ್ನು ನೋಡಲು ಆಗಲ್ಲ. ನಾನು ದೇಶಕೊಸ್ಕರ ಹೊರಾಡುತ್ತಿರುವವನು ಅದಕ್ಕೆ ಹೆಮ್ಮೆ ಪಡಿ ನಿಮ್ಮ ಕಣ್ಣಲ್ಲಿ ಯಾವತ್ತು ಕಣ್ಣಿರು ಬರಬಾರದು. ಹೆಮ್ಮೆ ಪಡಿ ನಿಮ್ಮ ಮಗ ನಿಮ್ಮ ಗಂಡ ಭಾರತಾಂಬೆಯ ರಕ್ಷಣೆ ಮಾಡುತ್ತಿದ್ದಾನೆ ಪ್ರತಿಕ್ಷಣ ಅಂತ. ನಿಮ್ಮ ಮಗುವಿಗೆ ಹೇಳಿ ನಿಮ್ಮ ಅಪ್ಪ ದೇಶಕೊಸ್ಕರ ಹೋರಾಡುತಿದ್ದಾರೆ ಅಂತ ಗರ್ವದಿಂದ ಹೇಳಿ. ನನ್ನ ಖುಷಿಯಿಂದ ಕಳುಹಿಸಿ" ಅನ್ನುತ್ತಾನೆ. ಹೆತ್ತವರು ಖುಷಿಯಿಂದ ಅಶಿರ್ವದಿಸುತ್ತಾರೆ. ಮಡದಿ ಖುಷಿಯಿಂದ ಕಳುಹಿಸಿ ಕೊಡುತ್ತಾಳೆ. ಇನ್ನೊಬ್ಬ ಯೋಧರನ್ನು ಖುಷಿಯಿಂದ ಕಳುಹಿಸುತ್ತಾರೆ. ಹೋಗುವಾಗ ತನ್ನ ಪ್ರೇಯಸಿಗೆ ಹೇಳುತ್ತಾರೆ ನಾನು ಹೋಗಿಬರುತ್ತೇನೆ ಅಂತ ತಕ್ಷಣ ಪ್ರೇಯಸಿ ಹೇಳುತ್ತಾಳೆ ಪ್ರೀತಿಯಿಂದ ಭಾರತಾಂಬೆಯ ರಕ್ಷಿಸಲು ಹೋಗುತಿದ್ದಿರಿ ನನಗಿದೋ ಹೆಮ್ಮೆ ಇದೆ. ನಿಮಗಾಗಿ ಏಳು ಜನುಮ ಬೇಕಾದರೂ ಕಾಯುತ್ತೇನೆ. ನಿಮ್ಮ ದೇಹದಲ್ಲಿ ಕೊನೆಹನಿ ರಕ್ತ ಇರೋವರೆಗೂ ದೇಶಕ್ಕೆ ಅಡ್ಡ ಬಾರೋ ಯಾರನ್ನು ಬಿಡಬೇಡಿ ಹೋಗಿಬನ್ನಿ ಅಂದು ಕಳುಹಿಸುತ್ತಾಳೆ. 
ಇಬ್ಬರು ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಪರಿಸ್ತಿತಿ ತುಂಬಾ ಗಂಭಿರವಾಗಿರುತ್ತೆ. ಸಾಕಷ್ಟು ಸೈನಿಕರಿಗೆ ಗಾಯಗಳಾಗಿರುತ್ತೆ ಪ್ರಥಮ ಚಿಕಿತ್ಸೆಗೆ ಕರೆತರಲಾಗಿರುತ್ತೆ. ಅದರಲ್ಲೂ ರಕ್ತದ ಮಡುವಿನಲ್ಲಿ ಬಿದ್ದಿರೋ ಒಬ್ಬ ಸೈನಿಕ ಹೇಳುತ್ತಾನೆ, ದೇಶದ ಬಾವುಟ ಹಾರುತ್ತಿರಬೇಕು ಗಡಿನುಸುಳೋ ನಾಯಿಗಳಿಗೆ ತಕ್ಕ ಪಾಟ ಕಲಿಸಬೇಕು ನಾನು ಸತ್ತರು ಕೊನೆಪಕ್ಷ ಹತ್ತು ಉಗ್ರರನ್ನ ಕೊಂದೆ ಹೋಗುತ್ತೇನೆ ಬೇಗ ಪ್ರಥಮ ಚಿಕಿತ್ಸೆ ಮಾಡಿ ನನ್ನ ಉಸಿರು ಇನ್ನು ಇದೆ ಅಂತ. ಇದನ್ನ ಕೇಳಿದ ಉಳಿದ ಯೋಧರ ಛಲ ದುಗುಣವಾಯಿತು. ಒಂದೇ ಮಾತರಂ ಗೋಷಣೆ ಹಾಕುತ್ತ ಗಡಿಯತ್ತ ಹೊರಟರು. ಅದರಲ್ಲಿ ಇವರಿಬ್ಬರು ಇದ್ದರು. ಹೋಗುವಾಗ ಯುವ ಯೋಧ ಕೇಳಿದನು ಸರ್ ಈ ಯುದ್ಧದಲ್ಲಿ ನಿಮಗೇನಾದರೂ ಆದರೆ ? ಅದಕ್ಕೆ ಉತ್ತರಿಸುತ್ತ ನಗುಮುಖದಲ್ಲೇ ಹೇಳಿದರು ನಮ್ಮ ಮನೆಯಲ್ಲಿ ಎಲ್ಲಾರಿಗೂ ಹೆಮ್ಮೆ ಇದೆ ನನ್ನ ಮೇಲೆ. ಇನ್ನೊಂದು ವಿಷಯ ಇನ್ನು ಸ್ವಲ್ಪದಿನದಲ್ಲಿ ದೇಶವ ಕಾಯೋ ಇನ್ನೊಂದು ಜೀವ ಹುಟ್ಟುತ್ತೆ. ಆದರೆ ಇಂದು ಭಾರತಾಂಬೆಯ ಋಣ ತಿರಿಸೋ ಸಮಯ ಬಂದಿದೆ. ಈ ತಾಯಿಗೆ ಒಂದಿಂಚು ಏನಾಗಲು ಬಿಡಲ್ಲ. ನನ್ನ ಉಸಿರು ಹೋದರು ಭಾರತಾಂಬೆಯ ಮಡಿಲಲ್ಲಿ ಅದು ಭಾರತಾಂಬೆಯ ಜೈಕಾರದೊಂದಿಗೆ. ಅಷ್ಟರಲ್ಲಿ ಯುವ ಯೋಧ ಹೇಳುತ್ತಾನೆ ಸರ್ ನನ್ನ ಮನೆಯಲ್ಲೂ ಎಲ್ಲಾರಿಗೂ ಹೆಮ್ಮೆ ಇದೆ. ನನ್ನ ಮದುವೆ ಸಹ ಗೊತ್ತಾಗಿದೆ. ನನ್ನ ಪ್ರೇಯಸಿ ಹೋಗುವಾಗ ಹೆಮ್ಮೆ ಇಂದಲೇ ಹೇಳಿದ್ದಾಳೆ ಕೊನೆರಕ್ಥ ಇರುವವರೆಗೂ ಹೊರಡು ಏಳೇಳು ಜನುಮವು ಕಾಯುತ್ತಿರುತ್ತೇನೆ ಅಂತ. ನಾನು ಗರ್ವದಿಂದ ಹೇಳುತ್ತೇನೆ ನಾನೊಬ್ಬ ರಕ್ಷಕ. ಇವನ ಮಾತುಗಳನ್ನು ಕೇಳಿ ತುಂಬಾ ಖುಷಿ ಆಗುತ್ತೆ. ಗಡಿ ಹತ್ತಿರ ಬರೋವಾಗ ಇವರಿಗೆ ನ್ಯೂಸ್ ಬರುತ್ತೆ ಗಡಿಯಲ್ಲಿ 100 ಜನ ಉಗ್ರರು ದಾಳಿ ಮಾಡುತ್ತಿದ್ದಾರೆ ಅಂತ ಆದರೆ ಇಲ್ಲಿ 20 ಸೈನಿಕರು ಇದ್ದರು. ಅಷ್ಟರಲ್ಲಿ ಮೊದಲನೇ ಸೈನಿಕ ಟೀಮ್ ಗೆ ಹೇಳುತ್ತಾರೆ. ಕೇಳಿ ನೀವು ಒಬ್ಬಬ್ಬರು ನೂರು ಜನಕ್ಕೆ ಸಮಾನ ಅಂದರೆ ಅಲ್ಲಿರುವುದು ಕೇವಲ ನೂರು ಜನ ನಾವು 20 ಜನ ಅಲ್ಲ 2000 ಜನ ಅಂದರೆ ನಮ್ಮ ಶಕ್ತಿ ಮುಂದೆ ಅವರೇನು ಅಲ್ಲ. ನಮ್ಮ ಕೊನೆ ಉಸಿರಿರುವರೆಗೂ ದೇಶದ ರಕ್ಷಣೆ ಮಾಡಬೇಕು. ಅಷ್ಟರಲ್ಲೇ ಎಲ್ಲಾರು ಒಟ್ಟಾಗಿ ಭಾರತಾಂಬೆಗೆ ಜೈಕಾರ. ಹೊರಡಲು ಸಜ್ಜಾದರು. ಬಂದೂಕುಗಳನ್ನ ಹಿಡಿದು ಉಗ್ರರ ಕಡೆಗೆ ಪ್ರತಿ ದಾಳಿ ಮಾಡಿದರು. ಮದ್ಯ ರಾತ್ರಿಯೇ ಆಯಿತು ಇದ್ದ 20 ಸೈನಿಕರಲ್ಲಿ 10 ಸೈನಿಕರು ಹೋರಾಟದಲ್ಲಿ ಅಮರರಾದರು. ಇನ್ನುಳಿದ 6 ಜನ ಗಂಬಿರ ಗಾಯಗಳಿಂದ ಬಿದ್ದಿದ್ದರು. ಸಣ್ಣ ಪುಟ್ಟ ಗಾಯಗಳೊಂದಿಗೆ ಇವರಿಬ್ಬರು ಹೋರಡುತಿದ್ದರು. ಅಷ್ಟರಲ್ಲಿ ಯುವ ಯೋಧನ ಕಾಲಿಗೆ ಗುಂಡೇಟು ಬಿದ್ದಿತು. ಆದರು ನೋವನ್ನು ಮರೆತು ಹೋರಾಡುತಿದ್ದರು. ಸೇನೆಯಿಂದ ಒಂದು ಮೆಸೇಜ್ ಬಂತು ಉಗ್ರರು ಕಣಿವೆ ಕಡೆಯಿಂದ ಒಳ ಬರಲು ನೋಡುತಿದ್ದರೆ. ಎಲ್ಲಾರು ಗುಂಪಲ್ಲಿದ್ದರೆ ಅಂತ. ಆದರೆ ಇಲ್ಲಿ ಎಲ್ಲ ಸೈನಿಕರು ಗಾಯಗಳಿಂದ ಬಳಲುತಿದ್ದರು. ಸಾಕಷ್ಟು ಸೈನಿಕರು ವೀರ ಮರಣ ಹೊಂದಿದ್ದರು. ಅಗಾ ಕಣ್ಣಿರು ಹಾಕುತ್ತ ಯುವ ಯೋಧ ಸರ್ ಈಗೇನು ಮಾಡುವುದು ತಾಯಿಯ ರಕ್ಷಣೆ ಹೇಗೆ ಮಾಡುವುದು, ಉಗ್ರರ ಮುಂದೆ ತಲೆ ತಗ್ಗಿಸಲು ಕನಸಲ್ಲೂ ಒಪ್ಪಲ್ಲ. ಸರ್ ಈಗೇನು ಮಾಡುವುದು. ಅದಕ್ಕೆ ಮೊದಲ ಸೈನಿಕ ಹೇಳುತ್ತಾನೆ, ನಮ್ಮ ಉಸಿರು ಇನ್ನು ಇದೆ ಅಂತ ಘಟನೆ ಸಂಭವಿಸಲು ನಾನು ಬಿಡಲ್ಲ. ತನ್ನ ಬ್ಯಾಗ್ ಅಲ್ಲಿದ್ದ ಭಾವುಟವನ್ನು ಕೊಟ್ಟು ಹೇಳಿದ ಒಂದು ಮಾತು ನನ್ನ ಮನೆಯವರು ನನ್ನ ಹೆಂಡತಿ ಸಿಕ್ಕರೆ ಹೇಳು "ನಿಮ್ಮ ಮಗ ನಿಮ್ಮ ಗಂಡ ದೇಶದ ರಕ್ಷಣೆಗೆ ತನ್ನ ಪ್ರಾಣ ಬಲಿಕೊಟ್ಟರು. ಆದರೆ ಯೂವುದೇ ಕೆಟ್ಟ ಕಾರ್ಯಕ್ಕಲ್ಲ ಕಣ್ಣಲ್ಲಿ ನೀರು ಬಿಳಿಸಬೇಡಿ ಬದಲು ಗರ್ವದಿಂದ ಹೆಮ್ಮೆಪಡಿ ಮತ್ತು ನನ್ನ ಮಗುವಿಗೆ ದೇಶ ರಕ್ಷಣೆಗೆ ಸಜ್ಜಾಗಲು ಹೇಳಿ". ಇದನ್ನು ಕೇಳಿದ ಯುವ ಯೋಧ ಹೇಳಿದ ಸರ್ ನಿಮ್ಮ ನೋಡಿ ದೇಶವೇ ಹೆಮ್ಮೆ ಪಡುತ್ತೇ ನಾನು ಹೆಮ್ಮೆ ಪಡುತ್ತೇನೆ. ಸರ್ ನಾವು ಕೊನೆ ಉಸಿರಿರುವರೆಗೂ ಹೊರಡುವ ಅಂದ. ಆದರೆ ಮೊದಲನೇ ಸೈನಿಕ ಭಾರತ ಮಾತೆಗೆ ತಲೆ ಬಾಗುತ್ತಾ ಮಣ್ಣಿಗೆ ಚುಂಬಿಸುತ್ತ ಬಾಂಬ್ ಗಳನ್ನು ತನ್ನ ದೇಹಕ್ಕೆ ಸುತ್ತಿಕೊಂಡು ಅಮ್ಮ ನಿನ್ನ ಮಗನಾಗಿ ನಾನು ಗರ್ವಪಡುತಿದ್ದೇನೆ ನನ್ನವರನ್ನು ನನ್ನ ದೇಶವನ್ನು ನನ್ನ ಕುಟುಂಬವನ್ನು ಕಾಪಾಡು ಅಂತೇಳಿ ಇಲ್ಲಿ ಗಾಯಗಳಿಂದ ಬಿದ್ದ ಯೋಧರ ಕಡೆಗೆ ಸಲ್ಯೂಟ್ ಹಾಕುತ್ತ ಬಂದೂಕು ಚಲಾಯಿಸುತ್ತಾ ಉಗ್ರರಿದ್ದ ಕಣಿವೆ ಕಡೆಗೆ ಓಡಿದರು ಸಾಕಷ್ಟು ಗುಂಡು ತಗುಲಿದರೂ ತನ್ನ ಗುರಿ ಸಾದಿಸಲು ಉಸಿರು ಬಿಗಿ ಹಿಡಿದಿದ್ದರು. ಕಣಿವೆ ಕಡೆಗೆ ಓಡಿ ಬಿದ್ದು ಸತ್ತವಾರಗೆ ನಟಿಸಿದರು ಎಲ್ಲಾ ಉಗ್ರರು ಖುಷಿಯಿಂದ ಈ ಯೋಧರ ಸುತ್ತ ಸುತ್ತಿದರು. ಒಮ್ಮೆಲೇ ಎಚ್ಚೆತ್ತ ಯೋಧ ಜೈ ಭಾರತ್ ಮಾ ತುಜೆ ಸಲಾಂ ಅಂತ ಹೇಳಿ ರಿಮೋಟ್ ಬಟನ್ ಒತ್ತಿಬಿಟ್ಟರು. ಎಲ್ಲಾ ಉಗ್ರರು ಅಲ್ಲೇ ಸತ್ತು ಹೋದರು. ಈ ಯೋಧ ವೀರ ಮರಣ ಹೊಂದಿದರು. ಕೊನೆಗೆ ದೇಶವನ್ನು ಉಳಿಸಿದರು ತನ್ನ ಜೀವವನ್ನು ಬಲಿಕೊಟ್ಟು.........
ಪ್ರತಿಯೊಬ್ಬ ಸೈನಿಕನಿಗೂ ನಮ್ಮದೊಂದು ಸಲ್ಯೂಟ್ .. ಜೈ ಹಿಂದ್
 by Puttaheart

ಇಲ್ಲಿವೆ ಪ್ರೀತಿ ಪ್ರೇಮ ದ ಬಗ್ಗೆ ಕೆಲವು ಕಟು ಸತ್ಯ ವಚನಗಳು...

ಇಲ್ಲಿವೆ ಪ್ರೀತಿ ಪ್ರೇಮ ದ ಬಗ್ಗೆ ಕೆಲವು ಕಟು ಸತ್ಯ ವಚನಗಳು...
ಯಾವುದಾದರು ಒಂದು ಹುಡುಗ ಒಂದು ಹುಡುಗಿಗೆ "ಹಾಯ್ ಹೆಲೋ" ಎಂದರೆ ಅದನ್ನು ಹುಡುಗಿ "ಹಾಯ್ ಹೆಲೋ" ಎಂದೇ ಅರ್ಥ ಮಾಡಿಕೊಳ್ಳುತ್ತಾಳೆ. ಆದರೆ ಒಂದು ಹುಡುಗಿ ಯಾವುದಾದರೂ ಹುಡುಗನಿಗೆ ಹೆಲೋ ಅಂದ್ರೆ ಹುಡುಗ ಅವಳು ಬರಿ ಹೆಲೋ ಹೇಳಿದ್ದು ಅಂತಾ ಅರ್ಥ ಮಾಡಿ ಕೊಳ್ಳುವದಿಲ್ಲ !!
ಹಾಗೂ ಹೀಗೂ ಹೆಲೋ ಅಂದ್ರೆ ಬರೀ ಹೆಲೋ ಅಂತಾ ಹುಡುಗ ಅರ್ಥ ಮಾಡಿಕೊಂಡಿದ್ದರೂ ಅವನ ಗೆಳೆಯರು ಹಾಗೆ ಆಗಲು ಬಿಡುವದಿಲ್ಲ. ಗೆಳೆಯರು ಇರುವದು ಇನ್ಯಾತಕ್ಕೆ.
ಗರ್ಲ್ ಫ್ರೆಂಡ್ ಇರೋ ಹಾಗೂ ಇಲ್ಲದಿರೋ ಹುಡುಗರಲ್ಲಿ ಒಂದು ವ್ಯತ್ಯಾಸ ಇರುತ್ತೆ. ಮೊದಲನೆಯವರು ಹುಡುಗಿಯರೊಂದಿಗೆ ಮಾತನಾಡುತ್ತಾರೆ. ಎರಡನೆಯವರು ಹುಡುಗಿಯ ಬಗ್ಗೆ ಮಾತನಾಡುತ್ತಾರೆ!!
ನಿಮ್ಮ ಗೆಳೆಯರು ನಿಮಗೆ ಗರ್ಲ್ ಫ್ರೆಂಡ್ ಇರಲಿ ಎಂದು ಯಾವಾಗಲೂ ಬಯಸುವದಿಲ್ಲ. ಇಲ್ಲಾಂದ್ರೆ ಕ್ಯಾಂಟೀನ್ ಅಲ್ಲಿ ಯಾರ ಜೊತೆ ಕೂತು ಮಜಾ ಮಾಡ್ತಾರೆ.
ಕಾಲೇಜಲ್ಲಿ ಹುಡುಗಿಯರನ್ನು ಅವರಿಗೆ ಗೊತ್ತಾಗದ ಹಾಗೆ ಹಂಚಿಕೊಂಡಿರುತ್ತಾರೆ. ಇಡೀ ವರ್ಷದಲ್ಲಿ ಒಮ್ಮೆ ಹುಡುಗಿ ಜೊತೆ ಮಾತನಾಡಿರುವದಿಲ್ಲ. ಆದರೆ ಇವಳು "ನನ್ನವಳು" ಅವಳು "ನಿನ್ನವಳು" ಅಂತಾ ಮಾತನಾಡಿಕೊಳ್ಳುತ್ತಾರೆ!
ಹುಡುಗಿಯರಿಗೆ ಮಾತು ಅಂದ್ರೆ ತುಂಬಾ ಇಷ್ಟ. ನೀವು ಕೇವಲ ಮಧ್ಯೆ ಮಧ್ಯೆ "ಆಹಾ/ವಾಹ್" ಮತ್ತು "ಹೌದಾ?" ನೀನು ತಮಾಷೆ ಮಾಡ್ತಾ ಇದೀಯಾ" ಇಷ್ಟು ಹೇಳುತ್ತಿದ್ದರೆ ಸಾಕು!!
ನೀವು ಹುಡುಗಿಯ ಜೊತೆ ಸಭ್ಯತೆಯಿಂದ ಮಾತನಾಡುತ್ತಿದ್ದರೆ ಪರವಾಗಿಲ್ಲ. ಅವಳ ಅಣ್ಣಂದಿರ ಬಗ್ಗೆ ಸ್ವಲ್ಪ ಮಾಹಿತಿ ನಿಮಗೆ ಇರಲಿ!!
ನಿಮ್ಮ ಗೆಳೆಯರ ಮನಕಲಕುವ ಮಾತುಗಳಿಂದ ದೂರ ಇರಿ. "ನೀನು ಒಂದು ಹುಡುಗಿಗಾಗಿ ನನ್ನ ಸ್ನೇಹ ಬಿಟ್ಟು ಬಿಟ್ಟೆಯಾ?" ಅನ್ನೋ ಮಾತು ಕೇಳಿ ನಿಮ್ಮ ರೋಮ್ಯಾಂಟಿಕ್ ಕರೀಯರ್ ಹಾಳು ಮಾಡಿಕೊಳ್ಳಬೇಡಿ.

ಒಂದು ನಿಷ್ಕಲ್ಮಶ ಹ್ರದಯದ ಪವಾಡ

ಒಂದು ನಿಷ್ಕಲ್ಮಶ ಹ್ರದಯದ ಪವಾಡ
ಎಂಟು ವರ್ಷದ ಪುಟ್ಟ ಹುಡುಗಿ ತನ್ನ ತಂದೆ ತಾಯಿ ಮಾತಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದಳು. ಅವರು ಅವಳ ತಮ್ಮನ ಬಗ್ಗೆ ಮಾತಾಡುತ್ತಿದ್ದರು. ಅವಳ ತಮ್ಮ ಖಾಯಿಲೆಯಿಂದ ಬಳಲುತ್ತಿದ್ದನು ತಂದೆ ತಾಯಿಯ ಕೈಯ್ಯಲ್ಲಿ ಇದ್ದ ಹಣವೆಲ್ಲ ಖಾಲಿ ಆಗಿತ್ತು. ಅವರು ಮಗುವಿನ ಆಸ್ಪತ್ರೆ ಬಿಲ್ ಗಾಗಿ ತಮ್ಮ ಮನೆಯನ್ನು ಮಾರಿ ಬಾಡಿಗೆ ಮನೆಗೆ ಹೋಗಲು ತಿರ್ಮಾನಿಸಿದ್ದರು . ಒಂದು ಸರ್ಜರಿ ಮಗುವಿನ ಬದುಕನ್ನು ಉಳಿಸಬಹುದಿತ್ತು ಆದರೆ ಅದು ಅತ್ಯಂತ ದುಬಾರಿ ಆಗಿತ್ತು. ಅವರಿಗೆ ಯಾರು ಎಲ್ಲೂ ಸಾಲ ಕೊಡಲು ತಯಾರಿರಲಿಲ್ಲ. ಆ ಚಿಕ್ಕ ಹುಡುಗಿ ತನ್ನ ತಂದೆ ತಾಯಿ ಹೇಳಿಕೊಂಡು ಅಳುತ್ತಿರುವುದನ್ನು ನೋಡಿ ಬೇಸರಗೊಂಡಳು. ತಂದೆ ತಾಯಿಯಲ್ಲಿ ಅಳುತ್ತ ಹೇಳಿದರು "ಒಂದು ಪವಾಡ ಮಾತ್ರ ತಮ್ಮ ಮಗನನ್ನು ಬದುಕಿಸಬಹುದು" ಅಂತ.
ಆ ಹುಡುಗಿಯು ತಕ್ಷಣ ಮಲಗೋ ಕೊನೆಗೆ ಓಡಿದಳು ತಾನು ಅಡಗಿಸಿಟ್ಟ ಒಂದು ಸಣ್ಣ ಡಬ್ಬವನ್ನು ಹೊರಗೆ ತೆಗೆದಳು. ಅದರಲ್ಲಿದ ಎಲ್ಲ ಚಿಲ್ಲರೆಯನ್ನು ತೆಗೆದು ನೆಲದ ಮೇಲೆ ಹಾಕಿದಳು ಮತ್ತು ಅವುಗಳನ್ನು ಗಂಭಿರವಾಗಿ ಲೆಕ್ಕ ಮಾಡಲು ಪ್ರಾರಂಬಿಸಿದಳು. ಮೂರೂ ಸಲ ಲೆಕ್ಕ ಮಾಡಿದಳು ಮೂರೂ ಸಲ ಸಹ ಲೆಕ್ಕ ಒಂದೇ ಬರುತ್ತಿತ್ತು. ತಪ್ಪಾಗಲು ಚಾನ್ಸೇ ಇರಲಿಲ್ಲ. ಎಚ್ಚರಿಕೆಯಿಂದ ಆ ಚಿಲ್ಲರೆಗಳನ್ನು ಮತ್ತೆ ಅದೇ ಡಬ್ಬಿಗೆ ಹಾಕಿದಳು ಮತ್ತು ಅಲ್ಲೇ ಮನೆಯ ಹತ್ತಿರವಿದ್ದ ಮೆಡಿಕಲ್ ಶಾಪ್ ಕಡೆ ಓಡಿದಳು.
ಅವಳು ಮೆಡಿಕಲ್ ಎದುರು ಬಂದು ಔಷಧಿ ನೀಡುವವನನ್ನು ನೋಡುತ್ತಾ ನಿಂತಳು. ಆದರೆ ಔಷಧಿ ನೀಡುವವ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಅವಳು ತನ್ನ ಗಂಟಲಲ್ಲಿ ಶಭ್ದ ಮಾಡಿ ಅವನು ನೋಡುವಂತೆ ಮಾಡಲು ಪ್ರಯತ್ನಿಸಿದಳು. ಆದರೆ ಅವನು ನೋಡಲೇ ಇಲ್ಲ. ತಕ್ಷಣ ಡಬ್ಬಿ ಇಂದ ಸ್ವಲ್ಪ ಚಿಲ್ಲರೆ ತೆಗೆದು ಅಂಗಡಿಯ ಗ್ಲಾಸ್ ಮೇಲೆ ಇಟ್ಟು ಶಭ್ದ ಮಾಡಿದಳು. ತಕ್ಷಣ ಶಭ್ದ ಕೇಳಿ ಔಷಧಿ ಅಂಗಡಿಯವ ಅವಳ ಬಳಿ ಬಂದನು
ಸಾರೀ ನಾನು ನನ್ನ ತಮ್ಮನ ಜೊತೆ ಮಾತಾಡುತ್ತಿದ್ದೆ ಮಗು ನಿನ್ನನ್ನು ನಾನು ನೋಡಲಿಲ್ಲ, ನಿನಗೇನೂ ಬೇಕೆಂದು ಔಷಧಿ ಅಂಗಡಿಯವ ಮ್ರದು ಧ್ವನಿಯಲ್ಲಿ ಕೇಳಿದ.
ಆಯಿತು, ನಾನು ನನ್ನ ತಮ್ಮನ ಬಗ್ಗೆ ಮಾತಾಡಬೇಕಿತ್ತು ಅಂತ ಹುಡುಗಿ ಅವನಿಗೆ ಹೇಳಿದಳು. ನನ್ನ ತಮ್ಮ ತುಂಬಾನೇ ಖಾಯಿಲೆಯಿಂದ ನರಳುತ್ತಿದ್ದಾನೆ ಮತ್ತು ನಾನು ಅವನಿಗೆ ಪವಾಡವನ್ನು ಖರೀದಿ ಮಾಡಬೇಕು. ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತಿದ್ದೇನೆ ಅವನ ತಲೆಯಲ್ಲಿ ಏನೋ ಬೆಳೆಯುತ್ತಿದೆ ಅಂತ ನನ್ನ ಅಪ್ಪ ಹೇಳಿದರು ಬರಿ ಒಂದು ಪವಾಡದಿಂದ ಮಾತ್ರ ಅವನನ್ನು ಬದುಕಿಸಬಹುದಂತೆ. ಈಗ ಹೇಳಿ ಒಂದು ಪವಾಡಕ್ಕೆ ಎಷ್ಟು ಹಣ ಬಿಳುತ್ತೆ. ?
ಔಷಧಿ ಅಂಗಡಿಯವ ತಕ್ಷಣ ಹೇಳಿದ ನಾವು ಇಲ್ಲಿ ಪವಾಡವನ್ನು ಮಾರೋದಿಲ್ಲ ಮಗು ಸಾರೀ ನಾನು ಏನು ಸಹಾಯ ಮಾಡಲು ಆಗೋದಿಲ್ಲ ಅಂತ ಮೆಲ್ಲ ಧ್ವನಿಯಲ್ಲಿ ಹೇಳಿದ. ಇಲ್ಲಿ ಕೇಳಿ ನನ್ನಲ್ಲಿ ಹಣ ಇದೆ ನಾನು ಖರೀದಿ ಮಾಡುತ್ತೇನೆ, ಇಷ್ಟು ಹಣ ಸಾಕಾಗದಿದ್ದರೆ ಉಳಿದ ಹಣವನ್ನು ಕೊಡುತ್ತೇನೆ ದಯವಿಟ್ಟು ಹೇಳಿ ಒಂದು ಪವಾಡಕ್ಕೆ ಎಷ್ಟು ಹಣ ??.
ಅಲ್ಲೇ ಇದ್ದ ಔಷಧಿ ಅಂಗಡಿಯವನ ತಮ್ಮ ಮೊಣಕಾಲೂರಿ ಆ ಚಿಕ್ಕ ಹುಡುಗಿಯಲ್ಲಿ ಮಾತಾಡಲು ಶುರುಮಾಡಿದ," ನಿನ್ನ ತಮ್ಮನಿಗೆ ಯಾವ ತರಹದ ಪವಾಡ ಬೇಕಾಗಿದೆ.? ಅಂತ ಕೇಳಿದ
ನನಗೆ ಗೊತ್ತಿಲ್ಲ, ತನ್ನ ಬೇಸರದ ಕಣ್ಣುಗಳಿಂದ ಅವರನ್ನ ನೋಡುತ್ತಾ ಹೇಳಿದಳು. ನನ್ನ ತಮ್ಮ ಖಾಯಿಲೆ ಇಂದ ಬಳಲುತ್ತಿದ್ದಾನೆ. ಅಮ್ಮ ಹೇಳಿದರು ಅವನಿಗೆ ಓಪರೆಶನ್ ಆಗಬೇಕು ಅಂತ. ಆದರೆ ತಂದೆಯಲ್ಲಿ ಹಣ ಇಲ್ಲ ಅದಕ್ಕೆ ನಾನು ನನ್ನ ಹಣ ಉಪಯೋಗಿಸುತ್ತಿದ್ದೇನೆ.
ನಿನ್ನಲ್ಲಿ ಎಷ್ಟು ಹಣ ಇದೆ ? ಅಂತ ಆ ವ್ಯಕ್ತಿ ಕೇಳಿದ. ಹುಡುಗಿ ತಕ್ಷಣ ನನ್ನಲ್ಲಿ 143 ರುಪಾಯಿ ಇದೆ ಅಂತ ದೊಡ್ಡ ಧ್ವನಿಯಲ್ಲಿ ಹೇಳಿದಳು ಮತ್ತು ಇನ್ನು ಬೇಕಾದರೆ ತೆಗೆದುಕೊಂಡು ಬರುವೆ ಅಂದಳು.
ಓ ಹೌದಾ ಎಂತ ವಿಚಾರ, ಆ ವ್ಯಕ್ತಿ ಮುಗುಳ್ನಕ್ಕ. 143 ರುಪಾಯಿ, ಇದು ನಿಜವಾದ ಬೆಲೆ ನಿನ್ನ ತಮ್ಮನಿಗೆ ಬೇಕಾಗಿರುವ ಪವಾಡದ ಬೆಲೆ. ಅವನು ಅವಳಲ್ಲಿದ್ದ ಹಣವನ್ನು ತೆಗೆದುಕೊಂಡು ಅವಳನ್ನು ಎತ್ತಿಕೊಂಡನು. ನನ್ನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು ನನಗೆ ನಿನ್ನ ತಮ್ಮನನ್ನು ನೋಡಬೇಕು ಮತ್ತು ನಿನ್ನ ಹೆತ್ತವರಲ್ಲಿ ಮಾತಾಡಬೇಕು. ಮುಂದೆ ನೋಡುವ ನನ್ನಲ್ಲಿ ನೀನು ಕೇಳಿದ ಪವಾಡ ಇದೆಯಾ ಇಲ್ಲವ ಅಂತ.
ಆ ಚಿಕ್ಕ ಹುಡುಗಿಯ ಜೊತೆ ಮಾತಾಡಿದ ವ್ಯಕ್ತಿ ಒಬ್ಬ ಡಾಕ್ಟರ್ ಆಗಿದ್ದ ಮತ್ತು ನ್ಯೂರೋ-ಸರ್ಜರಿ ಸ್ಪೆಷಲಿಸ್ಟ್ ಆಗಿದ್ದ. ಅವನು ಅವಳ ತಮ್ಮನ ಓಪರಶನ್ ಅನ್ನು ಯಾವುದೇ ಹಣವನ್ನು ತೆಗೆದುಕೊಳ್ಳದೆ ಮಾಡಿದ. ಸ್ವಲ್ಪ ದಿನಗಳಲ್ಲಿ ಅವಳ ತಮ್ಮ ಮೊದಲಿನಂತೆ ಆಗಿಬಿಟ್ಟ. ಅವಳ ತಂದೆ ತಾಯಿ ತುಂಬಾ ಖುಷಿಲಿ ಇದ್ದರು. ಹೀಗೆ ಮಾತಾಡೋವಾಗ ಆ ಸರ್ಜರಿ ಒಂದು ನಿಜವಾದ ಪವಾಡವಾಗಿತ್ತು, ನನಗೆ ಆಶ್ಚರ್ಯ ಅದರ ಬೆಲೆ ಎಷ್ಟಾಗಿರಬಹುದೆಂದು? ಹೇಳಿದರು.
ಆ ಪುಟ್ಟ ಹುಡುಗಿ ನಕ್ಕು ಬಿಟ್ಟಳು. ಅವಳಿಗೆ ತಿಳಿದಿತ್ತು ಆ ಪವಾಡದ ಬೆಲೆ 143 ರುಪಾಯಿ ಮತ್ತು ಆ ಚಿಕ್ಕ ಹುಡುಗಿಯ ನಂಬಿಕೆ, ಪ್ರೀತಿ .
ನಿಮ್ಮ ನಂಬಿಕೆ, ನಿಮ್ಮ ಪ್ರೀತಿ, ನಿಮ್ಮ ಸುಂದರತೆ, ನಿಮ್ಮ ಸತ್ಯತೆ ಯು ನೂರು ಪಟ್ಟು ಶಕ್ತಿಶಾಲಿ ಅನುಮಾನಕ್ಕಿಂತ. ನಿಮ್ಮಲ್ಲಿ ನಂಬಿಕೆ ಇರಲಿ ಮತ್ತು ನಿರ್ಮಲವಾದ, ನಿಷ್ಕಲ್ಮಶವಾದ ಹ್ರದಯವಿರಲಿ. ಪ್ರೀತಿಸೋ ಹ್ರದಯವಿರಲಿ ಕಷ್ಟಕ್ಕೆ ಸಹಕರಿಸೋ ಮನಸಿರಲಿ... ನಿಮ್ಮ ಒಳ್ಳೆತನ ನಿಮಗೆ ಸಹಕರಿಸುತ್ತೆ. ಪ್ರೀತಿಯಿಂದ ನಿಮ್ಮ ಪುಟ್ಟಹಾರ್ಟ್ . 
By PuttaHeart



ಸತ್ಯ, ನಂಬಿಕೆ ಮೇಲೆ ನಿಂತ ಪ್ರೀತಿಯದ್ದು

ನಾನು ಹೇಳಲು ಹೋಗ್ತಿರೋ ಕಥೆ ತುಂಬಾ ವಿಚಿತ್ರವಾಗಿದ್ದು ಸತ್ಯ, ನಂಬಿಕೆ ಮೇಲೆ ನಿಂತ ಪ್ರೀತಿಯದ್ದು. ಈ ಪ್ರೀತಿ ಶುರುವಾಗಿದ್ದು ಕಾಲೇಜ್ ಅಲ್ಲಿ ಹುಡುಗ ಹುಡುಗಿ ಒಬ್ಬರನೊಬ್ಬರು ನೋಡಿದ್ದು ಬೇಟಿ ಆಗಿದ್ದು ಅಲ್ಲಿಯೇ.. ಮೊದಲ ನೋಟದಲ್ಲಿ ಇಬ್ಬರಲ್ಲೂ ಪ್ರೀತಿ ಹುಟ್ಟಿತ್ತು. ಮುಂದೆ ಸಮಯ ಕಳೆದಂತೆ ಹುಡುಗ ಹುಡುಗಿ ಪ್ರೇಮ ನಿವೇಧನೆ ಮಾಡಿಕೊಂಡು ಪ್ರೇಮಿಗಳಾಗಿ ಬಿಡುತ್ತಾರೆ. ಹುಡುಗ ಸತ್ಯ ನಂಬಿಕೆಗೆ ತುಂಬಾನೇ ಬೆಲೆ ಕೊಡುತ್ತಿದ್ದ ಅದು ಯಾವುದೇ ವಿಷಯವಾಗಲಿ. ಇವರಿಬ್ಬರಷ್ಟು ಪ್ರೀತಿ ಯಾರು ಮಾಡುತ್ತಿರಲಿಲ್ಲ. ಅವರು ಸ್ನೇಹಿತರಗಿದ್ದಾಗಲೇ ಹುಡುಗಿ ಅವಳ ಮನೆಯವರಿಗೆ ಮತ್ತು ಅವಳ ಅಕ್ಕನಿಗೆ ಈ ಹುಡುಗನ ಪರಿಚಯ ಮಾಡಿದ್ದಳು. ತುಂಬಾನೇ ಒಳ್ಳೆ ರೀತಿಲಿ ಅವರ ಜೊತೆ ಇವನಿದ್ದನು. 
ಮುಂದೆ ಅವರನ್ನು ಕಾಲೇಜ್ ಅಲ್ಲಿ ರೋಮಿಯೋ ಜೂಲಿಯಟ್ ಅಂತಾನು ಹೆಸರಿಟ್ಟರು ಅವರ ಪ್ರೀತಿ ಸಾ ರೋಮಿಯೋ ಜೂಲಿಯಟ್ ಗಿಂತ ಕಮ್ಮಿಯೇನು ಇರಲಿಲ್ಲ. ಖುಷಿಯಲ್ಲೂ,ದುಃಖದಲ್ಲೂ ಇಬ್ಬರು ಒಂದಾಗಿದ್ದರು. ಎಲ್ಲ ಯೋಚಿಸಿದ್ದರು ಇವರ ಪ್ರೀತಿ ಸಾಯೋವರೆಗೂ ಕಡಿಮೆ ಆಗಲ್ಲ ಮುಗಿಯಲ್ಲ ಅಂತ. ವಿಧಿ ಆಟ ಅಂದ್ರೆ ಹಾಗೆ ನೋಡಿ. ಹುಡುಗಿಗೆ ಏನೇ ತೊಂದರೆ ಆಗಿದ್ರು ಅದನ್ನು ಹುಡುಗ ಸರಿ ಮಾಡುತ್ತಿದ್ದ. ಹುಡುಗಿ ದೂರದಲ್ಲಿ ಓದುತ್ತಿದ್ದಾಳೆ ಅನ್ನೋ ಹೆದರಿಕೇನೆ ಹುಡುಗಿಯ ಮನೆಯಲ್ಲಿ ಇಲ್ಲದಾಗಿಸಿದ. ಅವಳ ಮನೆಯವರ ಪ್ರೀತಿಗೆ ಪಾತ್ರನಾಗಿದ್ದ. ಯಾವುದೇ ತೊಂದರೆ ಬೇಡ ಅಂತ ತನ್ನ ಮನೆಯವರಿಗೂ ವಿಷಯ ಹೇಳಿದ. ಆದರೆ ವಿಷಯ ಹುಡುಗಿ ಮನೆಯಲ್ಲಿ ಗೊತ್ತಿರಲಿಲ್ಲ. ಈ ಪ್ರೇಮಿಗಳು ಎಣಿಸಿದ್ದರು ಅವರು ಒಪ್ಪಬಹುದಂತ. ಆದರೆ ವಿಷಯ ಗೊತ್ತಾದಾಗ ಇವರ ಯೋಚನೆಗೆ ವಿರುದ್ಧವಾದ ಸ್ಥಿತಿ ಏರ್ಪಟ್ಟಿತ್ತು. ತೊಂದರೆಗಳು ಶುರುವಾದವು. ಹುಡುಗಿಯ ಕೈಇಂದ ಮೊಬೈಲ್ ಕಸಿದುಕೊಂಡರು ಇಬ್ಬರನ್ನು ದೂರ ಮಾಡಿದರು. ಆದರೆ ಹುಡುಗ ಹೀಗೆ ಆಗುತ್ತೆ, ಅವರೆಲ್ಲ ಹೀಗೆ ಮಾಡುತ್ತಾರೆ ಅಂತ ಕನಸಲು ಯೋಚಿಸಿಯೂ ಇರಲಿಲ್ಲ. ಇವನ ನಂಬಿಕೆಗೆ ಮುರಿದು ಹೋಯಿತು. ಕೆಲವು ಸಮಯದ ನಂತರ ಒಂದು ಅಮಾಯಕ ನಂಬರ್ ಇಂದ ಕಾಲ್ ಬಂದ್ದಿತ್ತು ಹುಡುಗನಿಗೆ. ಎತ್ತಿದಾಗ ಅವನ ಪ್ರೀತಿಯ ಹುಡುಗಿ ಮಾತನಾಡಿದಳು ನಾನು ಮನೆ ಬಿಟ್ಟಿದ್ದೇನೆ ನನಗೆ ಮನೆಯವರು ಬೇಡ ಅಂತ ಹೇಳಿಬಿಟ್ಟಳು. ಅವಳು ಬರುತ್ತಿರುವುದಾಗಿ ಹೇಳಿ ಕಾಲ್ ಕಟ್ ಮಾಡಿದಳು. ಅವಳು ಇಟ್ಟ ಕೂಡಲೇ ಅವಳ ಮನೆ ಇಂದ ಕಾಲ್ . ಮನೆಯ ಎಲ್ಲಾರೂ ಅಳುತ್ತಿದ್ದರು. ಅವಳ ಅಕ್ಕ ಹೇಳಿದಳು ತಂಗಿ ಕಾಣುತ್ತಿಲ್ಲ ಮನೆ ಬಿಟ್ಟು ಹೋಗಿದಾಳೆ. ನಿನೆಗೆನಾದ್ರು ಗೊತ್ತ? ದಯವಿಟ್ಟು ಹೇಳು ನಮ್ಮ ಮನೆಯ ಮರ್ಯಾದೆ ಪ್ರಶ್ನೆ ನನ್ನ ಇನ್ನೊಂದು ತಂಗಿಯ ಮದುವೇ ಕೂಡ ಇದೆ ತಿಂಗಳಲ್ಲಿ ಇದೆ ಅವಳ ಜೀವನದ ಪ್ರಶ್ನೆ, ನಮ್ಮ ತಾಯಿ ಹಾಸಿಗೆ ಹಿಡಿದಿದ್ದಾರೆ ಅವರ ಅಳು ನೋಡಲು ಆಗಲ್ಲ ಅವರ ಜೀವದ ಪ್ರಶ್ನೆ. ನಮಗಿನ್ನು ಯಾರು ಇಲ್ಲ ನಾವೆಲ್ಲ ನಿನ್ನನ್ನೇ ನಂಬಿದೇವೆ. ನಮ್ಮಲ್ಲೆರ ಜೀವನ ನೀನೆ ಉಳಿಸಬೇಕು ಅಂತ ಅಳುತಿದ್ದರು. ಹುಡುಗನಿಗೆ ಏನನಿಸಿತೋ ಗೊತ್ತಿಲ್ಲ ಆದರೆ ಅವನು ಇತರ ಮನಸುಗಳನ್ನು ನೋವು ಮಾಡಿ ಮದುವೇ ಅಗುದಕಿಂತ ಎಲ್ಲರ ನಡುವೆ ಖುಷಿಲಿ ಮದುವೇ ಅಗುದೆ ಸರಿ. ಬೇರೆಯವರ ಕಣ್ಣಿರಿಗೆ ನಾವು ರೀಸನ್ ಆಗಬಾರದು ಅದು ಅವನ ವ್ಯಕ್ತಿತ್ವ ವು ಆಗಿರಲ್ಲ. ತಕ್ಷಣ ಹೇಳುತ್ತಾನೆ ದಯವಿಟ್ಟು ಎಲ್ಲಾರೂ ಅಳುವುದನ್ನು ನಿಲ್ಲಿಸಿ ನಿಮ್ಮ ತಂಗಿಯನ್ನು ಅಮ್ಮನಿಗೆ ಮಗಳನ್ನು ಸಿಗೊವಾಗೆ ನಾನು ಮಾಡುತ್ತೇನೆ ನನ್ನ ಮೇಲೆ ನಂಬಿಕೆ ಇಡಿ. ನಿಮ್ಮ ಮಗಳು ಮನೆಗೆ ಬರುತ್ತಾಳೆ ಅಂತ ಮಾತುಕೊಟ್ಟು ಅವರ ಅಳುವನ್ನು ನಿಲ್ಲಿಸಿದ. ಮತ್ತು ಅವಳನ್ನು ನಿಲ್ಲಿಸಿ ಅವಳಿಗೆ ಹೇಳಿದ ನೀನು ಮಾಡುತ್ತಿರುವದು ತಪ್ಪು ನನ್ನ ಪ್ರೀತಿಗೋಸ್ಕರ ನಿನ್ನ ಹೆತ್ತು ಹೊತ್ತ ಕುಟುಂಬವನ್ನು ಬಿಟ್ಟು ಬಂದು ಅವರ ಜೀವನಕ್ಕೆ ನೀನು ಫುಲ್ ಸ್ಟಾಪ್ ಆಗುತ್ತಿಯ. ಅವರಿಟ್ಟ ನಂಬಿಕೆಗೆ ಮೋಸ ಮಾಡಬೇಕ ? ಇದು ತಪ್ಪು ಆದರೆ ನನಗು ನಿನ್ನ ಬಿಟ್ಟು ಇರಲು ಆಗೋದಿಲ್ಲ ಆದರೆ ಇತರ ಮೋಸ ಮಾಡಿ ಓಡಿ ಬಂದದು ತಪ್ಪು.. ಆದರೆ ಹುಡುಗಿ ಇವನ ಯಾವ ಮಾತನ್ನು ಕೇಳಲು ತಯಾರಿರಲಿಲ್ಲ ಅವಳಿಗೆ ತುಂಬಾ ಹಿಂಸೆ ಮನೆಯಲ್ಲಿ ಕೊಟ್ಟಿದ್ದರು. ಹುಡುಗ ಹುಡುಗಿಯ ಅಕ್ಕನಿಗೆ ಬರಲು ಹೇಳಿದ. ಅವರು ಬಂದಾಗ ಅವರು ಮತುಕೊಟ್ಟರು ನಿಮ್ಮ ಪ್ರೀತಿಗೆ ನಾವು ಅಡ್ಡಿ ಬರಲ್ಲ ನಿಮ್ಮ ಮದುವೇ ನಾವು ಮಾಡಿಸ್ತೇವೆ ಅಂತ. ಆದರು ಹುಡುಗಿ ಒಪ್ಪಲಿಲ್ಲ. ಹುಡುಗ ಕೊನೆಗೊಂದು ಮಾತು ಹೇಳಿದ ನನ್ನಮೇಲೆ ನಂಬಿಕೆ ಇದ್ದರೆ ಮನೆಗೆ ಹೋಗು. ಅವರು ಹೇಳಿದ್ದಾರಲ್ಲ ಇನ್ನು ಎಲ್ಲಾನು ಸರಿ ಆಗುತ್ತೆ ಹೋಗು ಅಂತ ಸಮಾಧಾನ ಮಾಡಿ ಕಳುಹಿಸಿದ. ಹುಡುಗಿಯ ಅಕ್ಕ ಹುಡುಗನಿಗೆ ನೀನೆ ನಮ್ಮ ದೇವರು ನಮ್ಮ ಜೀವ ಉಳಿಸಿದವ ಅಂದರು. ಹುಡುಗ ನಂಬಿಕೆ ಉಳಿಸಿಕೊಂಡ. ಆದರೆ ಕಥೆ ಮುಗಿಯಲಿಲ್ಲ. ಇಲ್ಲಿ ಮಾತು ಕೊಟ್ಟ ಕುಟುಂಬ ಪುನಃ ಇವನಿಗೆ ಮೋಸಾನೆ ಮಾಡಿತು. ಅವರ ನಂಬಿಕೆ ಉಳಿಸಿಕೊಂಡ ಇವನ ನಂಬಿಕೆ ಅವರು ಉಳಿಸಿಕೊಳ್ಳಲಿಲ್ಲ. ಇವನು ಕಾಲ್ ಮಾಡಿದಾಗ ಅವಳ ಅಕ್ಕ ಬೈದು ಇನ್ನು ಮಾಡಬೇಡ ಅಂದು ಕಾಲ್ ಇಟ್ಟರು. ಇವನ ನಂಬಿಕೆ ಅನ್ನೋ ಕಟ್ಟಡ ಕುಸಿದು ಬಿದ್ದಿತ್ತು. ವಿಧಿ ಆಟ ಏನು ನೋಡಿ ಹುಡುಗಿಯ ಮನೆಯವರು ಮೋಸದಾಟ ಆಡಿದರು. ಆದರೆ ಪ್ರೀತಿ ಮಾಡಿದ ಹುಡುಗಿ ಇವರ ಮೋಸವನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡಳು. ಹುಡುಗ ಕೊರಗುತ್ತ ಹಾಸಿಗೆ ಹಿಡಿದು ಕೊನೆಗೆ ಅವನು ಸತ್ತು ಹೋದನು. ಅವರ ಪ್ರೀತಿ ಮಾತ್ರ ಜೀವಂತವಾಗಿದ್ದು.. ಅಮರವಾಗಿದ್ದರು..