ಯಾರು ತುಂಬಾ ಖುಷಿಯಾಗಿದ್ದಾರೆ? ಕಾಗೆ ಮತ್ತು ನವಿಲು...

ಯಾರು ತುಂಬಾ ಖುಷಿಯಾಗಿದ್ದಾರೆ? ಕಾಗೆ ಮತ್ತು ನವಿಲು...
ಒಂದು ಕಾಗೆ ಕಾಡಿನ ಮಧ್ಯ ಜೀವಿಸುತ್ತಿತ್ತು. ತನ್ನ ಜೀವನದ ಬಗ್ಗೆ ತ್ರಪ್ತಿ ಇದ್ದಿತ್ತು. ಒಂದು ದಿನ ಅದು ಹಂಸವನ್ನ ನೋಡಿತು. ಆ ಹಂಸವು ತುಂಬಾ ಬಿಳಿಯಾಗಿ ಇತ್ತು. ಕಾಗೆ ಯೋಚಿಸಿತು ನಾನು ತುಂಬಾ ಕಪ್ಪು , ಆ ಹಂಸವೇ ಜಗತ್ತಿನ ಪಕ್ಷಿಗಳಲ್ಲೇ ತುಂಬಾ ಖುಷಿಯಗಿರೋ ಪಕ್ಷಿ ಅಂದುಕೊಂಡಿತು.
ಅದು ತನ್ನ ಮನಸಿನ ಮಾತುಗಳನ್ನು ಹಂಸದಲ್ಲಿ ಕೇಳಿತು. ಹಂಸವು ಅದಕ್ಕೆ ಉತ್ತರ ನೀಡುತ್ತ ಹೇಳಿತು, ನಾನು ತುಂಬಾ ಖುಷಿಯಗಿರೋ ಪಕ್ಷಿ ಆಗಿದ್ದೆ ಅದು ಗಿಳಿಯನ್ನು ನೋಡೋ ಮೊದಲು ಯಾಕಂದರೆ ಅದಕ್ಕೆ ಎರಡು ಬಣ್ಣಗಳಿವೆ. ಈಗ ನಾನು ಯೋಚಿಸುದು ಆ ಗಿಳಿಯೇ ಜಗತ್ತಿನ ಎಲ್ಲ ಪಕ್ಷಿಗಳಿಗಿಂತ ತುಂಬಾ ಖುಷಿಯಗಿರೋ ಪಕ್ಷಿ. ತಕ್ಷಣ ಕಾಗೆಯು ಗಿಳಿಯಲ್ಲಿಗೆ ಹೋಗಿ ಅದೇ ಮಾತನ್ನ ಕೇಳಿತು. ಗಿಳಿ ಹೇಳಿತು, ನಾನು ತುಂಬಾ ಖುಷಿ ಇಂದ ಜೀವಿಸುತ್ತಿದ್ದೆ ಆ ನವಿಲನ್ನು ನೋಡೋ ಮೊದಲು ತುಂಬಾ ಖುಷಿಯಾಗಿ. ನನಗೆ ಇರುವುದು ಎರಡೆ ಬಣ್ಣ ಆದರೆ ನವಿಲಿಗೆ ತುಂಬಾ ಬಣ್ಣ ಇದೆ. ಅವೆಲ್ಲರ ಮಾತು ಕೇಳಿ ಕೊನೆಗೆ ನವಿಲನ್ನು ಬೇಟಿ ಮಾಡಲು ಪಕ್ಷಿಧಾಮಕ್ಕೆ ಹೋಯಿತು. ಅಲ್ಲಿ ಸಾವಿರಾರು ಜನ ನವಿಲ್ಲನ್ನು ನೋಡಲು ನಿಂತಿದ್ದರು. ಎಲ್ಲರು ಹೋದಮೇಲೆ ನವಿಲಲ್ಲಿ ಕಾಗೆಯು ಮಾತಾಡಲು ಶುರುಮಾಡಿತು. ಓ ನವಿಲೇ ನೀನೆಷ್ಟು ಚಂದ ನಿನ್ನ ನೋಡಲು ದಿನಾಲೂ ಸಾವಿರಾರು ಜನ ಬರುತ್ತಾರೆ. ಆದರೆ ಜನರು ನನ್ನ ನೋಡಿದಾಕ್ಷಣ ಕಲ್ಲು ಎಸೆದು ಓಡಿಸುತ್ತಾರೆ. ನನಗನಿಸುತ್ತೆ ಪ್ರಪಂಚದಲ್ಲಿ ಅತಿ ಖುಷಿಯಗಿರೋ ಪಕ್ಷಿ ಅಂದರೆ ನೀನೆ ಅಲ್ಲವೇ ...
ಅದಕ್ಕೆ ನವಿಲು ಉತ್ತರಿಸಲು ಶುರು ಮಾಡಿತು, ನಾನು ಯಾವಾಗಲು ಯೋಚಿಸುದು ನಾನೆ ಅತೀ ಖುಷಿಯಗಿರೋ ಪಕ್ಷಿ ಅಂತ ಎಲ್ಲ ನನ್ನ ಅಂದ ಚಂದದಿಂದ. ಆದರೆ ನನ್ನ ಪಕ್ಷಿ ಸಂಗ್ರಹಾಲಯದಲ್ಲಿ ಕೂಡಿಹಾಕಿದ್ದಾರೆ. ನಾನು ಸಂಗ್ರಹಾಲಯವನ್ನು ತುಂಬಾ ಗಮನಿಸಿದಾಗ ಅರಿವಾದದ್ದು ಕಾಗೆಯನ್ನು ಯಾರು ಕೂಡಿಹಾಕೋದಿಲ್ಲ. ಅದರಿಂದ ಸ್ವಲ್ಪದಿನದಿಂದ ಯೋಚಿಸುದು ನಾನು ಕಾಗೆ ಆಗಿದ್ದರೆ ಸ್ವತಂತ್ರ ವಾಗಿ ಎಲ್ಲೂ ಹಾರಾಡಿಕೊಂಡು ಇರಬಹುದು ಅಂತ.
" ಇದು ನಮ್ಮ ಎಲ್ಲರ ಸಮಸ್ಯೆ ಕೂಡ. ನಾವು ಬೇರೆಯವರೊಂದಿಗೆ ಅಗತ್ಯವಿಲ್ಲದ ಹೋಲಿಕೆ ಮಾಡುತ್ತೇವೆ ಮತ್ತು ಧುಖಿಸಲು ಶುರುಮಾಡುತ್ತೇವೆ. ನಮಗೆ ದೇವರು ಏನು ಕೊಟ್ಟಿದ್ದಾನೆ ಅದಕೆ ಬೆಲೆ ಕೊಡುವುದನ್ನು ಮರೆಯುತ್ತೇವೆ. ಇದು ಎಲ್ಲ ತರದ ದುಃಖಕ್ಕೂ ಕಾರಣವಾಗುತ್ತೆ. ನಾವು ಯಾವಾಗಲು ನಮ್ಮಲ್ಲೆನಿದೆ ಅದಕ್ಕೆ ಖುಷಿಪಡಬೇಕು ನಮ್ಮಲ್ಲಿ ಇಲ್ಲದಕ್ಕೆ ದುಃಖ ಪಡೋ ಬದಲು. ಈ ಜಗತ್ತಲ್ಲಿ ಎಲ್ಲರು ನಮಗಿಂತ ಎಲ್ಲದರಲ್ಲೂ ಸ್ವಲ್ಪ ಹೆಚ್ಚು ಕಮ್ಮಿ ಹೊಂದಿರುತ್ತಾರೆ. ಯಾವ ಮನುಷ್ಯನು ತನ್ನಲ್ಲಿರುವುದಕ್ಕೆ ತಾನಿರುವುದಕ್ಕೆ ತ್ರಪ್ತಿ ಹೊಂದಿರುತ್ತನೋ ಅವನೇ ಜಗತ್ತಿನ ಅತೀ ಹೆಚ್ಚು ಖುಷಿಯಗಿರೋ ವ್ಯಕ್ತಿ ".

No comments:

Post a Comment