ಹ್ರದಯಗಳೇ ಇದೊಂದು ನಿಜವಾದ ಪ್ರೇಮ ಕಥೆ ನಮ್ಮ ನಡುವೆ ಇರೋ ಒಬ್ಬ ಸ್ನೇಹಿತನದ್ದು. ಈ ಪ್ರೀತಿ 6 ವರ್ಷ ಗಟ್ಟಿ ಆಗಿದ್ದು ಮೊನ್ನೆ ಮೊನ್ನೆ ಕಣ್ಣಿರ ಕೊನೆಕಂಡದ್ದು. ಫೇಸ್ಬುಕ್ ಗೆಳೆಯರ ಸಾಕಷ್ಟು ಕಥೆಯನ್ನ ಬರೆದ ನನಗೆ ಇದೊಂದು ಸ್ವಲ್ಪ ವಿಚಿತ್ರವಾಗಿದೆ ಅನಿಸುತ್ತೆ.. ಏನೇ ಅಗಲಿ ಈ ವ್ಯಕ್ತಿಯ ಕಥೆಯನ್ನು ಇದ್ದ ಹಗೆ ಹೇಳಿಬಿಡುತ್ತೇನೆ ಏನು ಸೇರಿಸದೆ... 6 ವರ್ಷದ ಹಿಂದೆ ಈ ಪ್ರೀತಿ ಪ್ರಾರಂಭವಾಗಿದ್ದು ಹುಡುಗ ಹುಡುಗಿ ದೂರದ ಸಂಭಂಧಿಕರಾಗಿದ್ದು ಹೀಗೆ ಫ಼ಂಕ್ಸನ್ ಗಳಲ್ಲಿ ಸಿಕ್ಕಿ ಮುಂದೆ ಸ್ನೇಹವಾಗಿ ಸ್ನೇಹ ಪ್ರೀತಿ ಆಗಿ ತುಂಬಾನೇ ಪ್ರೀತಿ ಮಾಡುತ್ತಾರೆ.. ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿ ಬದುಕುತ್ತಾರೆ.. ಅವಳ ಖುಷಿ ಅವನ ಖುಷಿ ಅವನ ದುಃಖ ಅವಳ ದುಃಖ ಏನಾದರೂ ಹಂಚಿಕೊಳ್ಳುತ್ತಾರೆ.. ಏನಾದರೂ ಇದೆ ಪ್ರೀತಿ ಅಲ್ವ ಹ್ರದಯಗಳೇ.. ಹುಡುಗ ಆಗಾಗ ಬಿಯರ್ ಸಿಗರೆಟ್ ಅಂತ ಅಪರೂಪ ಇಂತ ಕೆಟ್ಟ ಅಬ್ಯಾಸಗಳನ್ನು ಹೊಂದಿದ್ದ. ಅದು ಹುಡುಗಿಗೆ ತಿಳಿದು ಅದನ್ನೆಲ್ಲ ಬಿಟ್ಟು ಬಿಡು ಅಂತ ಸಹ ಹೇಳಿದ್ದಳು. ಪ್ರೀತಿ ಅಂದ್ರೆ ಹಾಗೆ ನೋಡಿ ಹುಡುಗ ಹುಡುಗಿಯ ಮಾತನ್ನು ಕಡೆಗಣಿಸದೆ ಎಲ್ಲ ಕೆಟ್ಟ ಅಭ್ಯಾಸಗಳನ್ನ ಬಿಟ್ಟು ಬಿಟ್ಟ.. ಹೀಗೆ ಅವರ ಪ್ರೀತಿ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿತ್ತು. ಅವರ ಪ್ರೀತಿ ವಿಷಯ ಎರಡು ಮನೆಯವರಿಗೂ ತಿಳಿದಿತ್ತು ಅವರು ಇವರ ಪ್ರೀತಿಗೆ ಸಮ್ಮತಿಸಿದ್ದರು. ಅಂದರೆ ಇವರಿಗೆ ಯಾವುದೇ ತೊಂದರೆ ಇರಲಿಲ್ಲ. ಹುಡುಗ ಹುಡುಗಿಯ ಬಗ್ಗೆ ತುಂಬಾನೇ ಕಾಳಜಿ ವಹಿಸುತಿದ್ದ ತಾನೆಷ್ಟು ಬ್ಯುಸಿ ಇದ್ದರು ಅವಳಿಗೆ ಸಮಯವನ್ನ ಕೊಡುತಿದ್ದ. ಅವಳ ಓದಿಗೆ ಯಾವತ್ತು ಅಡಿ ಆಗಲಿಲ್ಲ ಬದಲು ಅವಳ ಓದಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದ. ಅವರ ಪ್ರೀತಿಗೆ 5 ವರ್ಷ ಕಳೆದು ಹೋಯಿತು. ಹುಡುಗಿಯ ಓದು ಸಹ ಮುಗಿಯಿತು. ಮುಂದೆ ಅವಳು ಕೆಲಸ ಮಾಡಬೇಕೆಂದು ಬೆಂಗಳೂರು ಹೊರಡಲು ನಿರ್ಧರಿಸದಳು. ಹುಡುಗ ಅದಕ್ಕೂ ಅವಳಿಗೆ ಅಡ್ಡಿ ಬರಲಿಲ್ಲ. ಹೋಗು ಅಂತ ಪ್ರೀತಿ ಇಂದಲೇ ಕಳುಹಿಸಿದ. ಆ 5 ವರ್ಷ ಅವನ ಪ್ರೀತಿಲಿ ಅವಳಿಗೆ ಕಾಳಜಿ ತೋರುತಿತ್ತು. ಮುಂದೆ ಬೆಂಗಳೂರು ಸೇರಿದ ಹುಡುಗಿಯನ್ನು ನೋಡಲು ಆಗಾಗ ಈ ಹುಡುಗ ದೂರದ ಬೆಂಗಳೂರಿಗೆ ಸಹ ಹೋಗುತ್ತಿದ್ದ. ಅವಳ ಮೇಲಿದ್ದ ಪ್ರೀತಿ ಅವಳ ನೋಡಲು ಬೆಂಗಳೂರಿಗೆ ಎಳೆದುಕೊಂಡು ಹೋಗುತ್ತಿತ್ತು. 2 ತಿಂಗಳು ಕಳೆಯಿತು ಹುಡುಗಿ ಬೆಂಗಳೂರು ಸೇರಿ.. ಮೊದಮೊದಲು ಒಬ್ಬರನೊಬ್ಬರು ಬಿಟ್ಟಿರಲಿಕ್ಕೆ ಆಗದ ಅವಳು ಯಾವಾಗಲು ಮೊಬೈಲ್ ಅಲ್ಲಿ ಸಂಪರ್ಕದಲ್ಲಿ ಇರುತಿದ್ದಳು. ಕಾಲಕ್ರಮೇಣ ಇವಳು ಹುಡುಗನಿಗೆ ಸಮಯ ನೀಡಲು ಮರೆತೇ ಬಿಟ್ಟಂತೆ ಇದ್ದಳು. ಅಪರೂಪ ಮೊಬೈಲ್ ಅಲ್ಲಿ ಸಂದೇಶ ಕಳುಹಿಸುತ್ತ ಇದ್ದಳು. ಆದರೆ ಹುಡುಗನಿಗೆ ಸಡನ್ ಆಗಿ ಅವಳ ಈ ವಿಚಿತ್ರ ರೀತಿಯು ತಲೆಯಲ್ಲಿ ನಾನ ರೀತಿಯ ನೋವುಗಳನ್ನು ಹುಟ್ಟಿಸಿದವು. ಅವಳ ಪ್ರೀತಿಯಲ್ಲಿ ಏನ ಕೊರತೆ ತೋರಲು ಸುರು ಆಯಿತು. ಇವನು ಅವಳನ್ನು ತುಂಬಾನೇ ಪ್ರೀತಿಸಿದ್ದ. ಅವಳೇ ಕೊನೆ ಪ್ರೀತಿ ಅಂದುಕೊಂಡಿದ್ದ. ಆದರು ಅವಳಿಗೆ ಕಾಳಜಿ ವಹಿಸುತ್ತ ಪ್ರೀತಿ ಇಂದಲೇ ಮಾತಾಡುತ್ತಿದ್ದ. ಆದರೆ ಅವಳಿಗೆ ಅವನ ಪ್ರೀತಿಯಾ ಕಾಳಜಿ ಕಿರಿಕಿರಿ ಆಗಲು ಸುರು ಆಯಿತು. ನೋಡಿ 5 ವರ್ಷದ ಮೊದಲು ಅದೇ ಪ್ರೀತಿ ಕಾಳಜಿ ಪ್ರೀತಿ ತರನೇ ತೋರುತ್ತಿದ್ದ ಅವಳಿಗೆ ಈಗ ಅವನ ಪ್ರೀತಿ ಕಿರಿಕಿರಿ ಆಗಲು ಶುರು ಆಯಿತು. ಅವನಿಗೆ ಅವನ ಪ್ರೀತಿ ಕಳೆದೊಗುತ್ತೆ ಅನ್ನೋ ಭಯ ಶುರು ಆಯಿತು. ಅವಳ ಮನ ವಲಿಸಲು ತುಂಬಾ ಪ್ರಯತ್ನ ಮಾಡಿದ... ಕೊನೆಗೆ ಅವಳು ಮಾತಾಡುವುದೇ ಬಿಟ್ಟಾಗ ಅವನು ಅವಳನ್ನು ಸಂಪರ್ಕಿಸಲು ಬೆಂಗಳೂರಿಗೆ ಹೋದನು.. ಅಲ್ಲಿ ಅವಳಲ್ಲಿ ಮಾತಾಡಲು ಸಮಯವನ್ನು ಕೇಳಿದಾಗ ಅವಳು ನನಗೆ ಸಮಯವಿಲ್ಲ.. ಮಾತಾಡಲು ಇಷ್ಟಾನು ಇಲ್ಲ.. ಕೊನೆಗೆ 2 ನಿಮಿಷ ಮಾತಾಡು ಅಂದಾಗ ಒಪ್ಪಿದ ಆಕೆಯಲ್ಲಿ ಇವನು ಕೇಳಿದ ಪ್ರಶ್ನೆ ಯಾಕೆ ಹೀಗೆ ಮಾಡುತ್ತಿದ್ದಿ ಅಂದಾಗ ಅವಳು ಕೊಟ್ಟ ಅರ್ಥವಿಲ್ಲದ ಉತ್ತರ ನನಗು ನಿನಗೂ ಒಂದಾಗಿ ಇರಲು ಆಗೋದಿಲ್ಲ ನಿನ್ನ ಕ್ಯಾರೆಕ್ಟೆರ್ ನನ್ನ ಕ್ಯಾರೆಕ್ಟೆರ್ ಬೇರೆ ಬೇರೆ ಇಬ್ಬರಿಗೂ ಸರಿ ಆಗಲ್ಲ.. ಇಲ್ಲಿಗೆ ಮುಗಿಸಿಬಿಡು.. ಇನ್ನೇನು ಇಲ್ಲ ಅಂತ ಹೇಳಿ ಹೊರಟು ಹೋದಳು. 6 ವರ್ಷ ಪ್ರೀತಿ ಮಾಡಿದ ಇವಳಿಗೆ ಮೊದಲೆಲ್ಲು ಅನಿಸದ ಹೊಂದಾಣಿಕೆ ಬಗ್ಗೆ 6 ವರ್ಷದ ಬಳಿಕ ಅನಿಸಿತು. 6 ವರ್ಷದಲ್ಲಿ ಇಬ್ಬರಿಗೂ ಸರಿ ಹೊಂದಲ್ಲ ಅನ್ನೋದು ತಿಳಿಯದ ಮೂಡದ ಇವಳಿಗೆ 6 ವರ್ಷದ ನಂತರ ಅನಿಸಿತು. ಇದಕ್ಕೆ ಉತ್ತರವೇ ಇಲ್ಲ... ಆ ಸ್ನೇಹಿತನ ಮನಸು ಒಡೆದೋಯಿತು.. ಕಣ್ಣೀರೆ ಜೊತೆಯಾಯಿತು ..


No comments:
Post a Comment