ಪ್ರೀತಿ ಅಮರ...

ಒಂದು ಹುಡುಗ ಒಂದು ಹುಡುಗಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ವಿಧಿಯಾ ಆಟ ಅವರನ್ನು ದೂರ ಮಾಡಿತ್ತು. ಹುಡುಗಿಯಾ ಆಯುಷ್ಯ ಮುಗಿದಿತ್ತು ಅವಳ ಪ್ರಾಣ ಹಾರಿ ಹೋಗಿತ್ತು. ಹುಡುಗನ ತಲೆಯ ಮೇಲೆ ಆಕಾಶವೇ ಬಿದ್ದಹಾಗೆ ಇತ್ತು. ಆ ಶಾಕ್ ಅಲ್ಲಿ ಹುಡುಗ ಬದುಕಿ ಸತ್ತಂತಿದ್ದ. ಪ್ರತೀ ಕ್ಷಣ ಯೋಚಿಸುತ್ತ ಅಳುತ್ತ ನೋವಲ್ಲಿ ಮುಳುಗಿದ್ದ ಹಗಲು ರಾತ್ರಿ ಸಹಿತ. ಅವನು ಯಾರ ಮಾತುಗಳನ್ನು ಕೇಳಲು ತಯ್ಯಾರಿರಲಿಲ್ಲ. ಅವನಿಗೆ ಯಾರು ಸಂತೈಸಲು ಆಗುತ್ತಿರಲಿಲ್ಲ. ಯಾರ ಮಾತುಗಳು ಅವನ ಕಣ್ಣಿರನ್ನು ನಿಲ್ಲಿಸುತ್ತಿರಲಿಲ್ಲ. ಒಂದು ರಾತ್ರಿ ಅವನು ಮಲಗಿದ್ದಾಗ ಅವನಿಗೆ ಒಂದು ಕನಸು ಬಿದ್ದಿತು.
ಅವನು ತನ್ನ ಪ್ರೇಯಸಿಯನ್ನು ಸ್ವರ್ಗದಲ್ಲಿ ಹಲವು ತನ್ನದೇ ಏಜ್ ನ ಹುಡುಗಿಯರ ಮಧ್ಯ ಇದ್ದಳು.
ಅವನಿಗೆ ಸಮಾಧಾನವಾಯಿತು. ಆದರೆ ಅವನು ನೋಡಿದ ಎಲ್ಲಾ ಹುಡುಗಿಯರು ಸ್ವರ್ಗದ ಕಿನ್ನರಿಯರಂತೆ ಬಟ್ಟೆಯನ್ನು ತೊಟ್ಟಿದ್ದರು ಮತ್ತು ಉರಿಯುತ್ತಿರುವ ಮೇಣದ ಬತ್ತಿಯನ್ನು ಕೈಯಲ್ಲಿ ಹಿಡಿದಿದ್ದರು, ಆದರೆ ಅವನ ಹುಡುಗಿಯು ಕಿನ್ನರಿಯಾಗಿದ್ದಳು ಆದರೆ ಅವಳ ಕೈಯಲ್ಲಿರೋ ಮೇಣದ ಬತ್ತಿ ಉರಿಯುತ್ತಿರಲಿಲ್ಲ. ಅವನು ತಕ್ಷಣ ಕೇಳಿದ ಗೆಳತಿ ನಿನ್ನ ಕೈಯಲ್ಲಿರೋ ಮೇಣದಯನ್ನು ಯಾಕೆ ಹಚ್ಚಿಲ್ಲ ನೀನು ? ಅವಳು ಹೇಳಿದಳು ನಾನಂತು ಸಾಕಷ್ಟು ಪ್ರಯತ್ನಪಟ್ಟೆ ಯಾವಾಗ ನಾನು ಮೇಣದ ಬತ್ತಿ ಹಚ್ಚುತ್ತೇನೋ ನಿನ್ನ ಆ ಕಣ್ಣಿರ ಹನಿಗಳು ಅದರ ಮೇಲೆ ಬಿಳುತ್ತೆ. ದಯವಿಟ್ಟು ನೀನು ಅಳುವುದನ್ನು ನಿಲ್ಲಿಸುತ್ತಿಯಾ...
"ಪ್ರೀತಿ ಅಮರ, ಅದರ ರೀತಿ ಮಧುರ. ನಿಜವಾದ ಪ್ರೀತಿ ಒಂದನ್ನೊಂದು ಬಿಟ್ಟಿರಲ್ಲ ಮತ್ತು ಪ್ರೀತಿಯ ಕಣ್ಣಲ್ಲಿ ಕಣ್ಣಿರು ಬೀಳುವುದನ್ನು ತಡೆಯೋಲ್ಲ. ಇದು ಮನಸುಗಳ ಮಿಲನ. ಹ್ರದಯಗಳ ಕಥನ.... "

No comments:

Post a Comment