ಇದೊಂದು ದುಃಖದ ಲವ್ ಸ್ಟೋರಿ..



ಇದೊಂದು ದುಃಖದ ಲವ್ ಸ್ಟೋರಿ. ಈ ಸ್ಟೋರಿ ಲಿ ಹುಡುಗಿ ಹುಡುಗನಿಗೆ ಪ್ರಪೋಸ್ ಮಾಡುತ್ತಾಳೆ.ಹುಡುಗ ಒಪ್ಪಿಗೆಯನ್ನು ಸೂಚಿಸುತ್ತಾನೆ. ಹುಡುಗಿ ಯಾವಾಗಲು ಅವನಲ್ಲಿ ಮಾತನಾಡುವಾಗ ಹೇಳುತ್ತಿದ್ದಳು ನಿನ್ನಲಿರುವುದು ನನ್ನ ಹ್ರದಯ ನನ್ನಲ್ಲಿರುವುದು ನಿನ್ನ ಹ್ರದಯ ಅನ್ನುತ್ತಿದ್ದಳು. ಹುಡುಗನು ಅವಳ ಪ್ರೀತಿಯನ್ನು ತುಂಬಾನೇ ಮನಸಿಗೆ ಹಚ್ಚಿಕೊಂಡಿದ್ದನು.
ಹೀಗೆ ಒಂದು ವರ್ಷದ ಬಳಿಕ ಹುಡುಗಿ ಸಡನ್ ಆಗಿ ಹುಡುಗನ ಬಳಿ ಬಂದು ನಾವು ಮದುವೆ ಆಗಲು ಆಗೋದಿಲ್ಲ. ಮನೆಯಲ್ಲಿ ಸ ಯಾರು ಒಪ್ಪಲ್ಲ ನಾವು ಸ್ನೇಹಿತರಾಗೆ ಇರುವ ಅಂದುಬಿಟ್ಟಳು. ಹುಡುಗನಿಗೆ ಮಾತೆ ಹೊರಡಲಿಲ್ಲ ಯಾಕೆಂದರೆ ಅವನು ಅವಳನ್ನು ಇಷ್ಟಪಟ್ಟಷ್ಟು ಲೋಕದಲ್ಲಿ ಯಾರು ಅವಳನ್ನು ಇಷ್ಟಪಟ್ಟಿರಲಿಕ್ಕಿಲ್ಲ. ಆದರೆ ಹುಡುಗಿ ಹಾಗೆ ಹೇಳಿ ಸಿದಾ ಹೋದಳು. ಹುಡುಗ ಕುಸಿದು ಬಿದ್ದು ಅಲ್ಲೇ ಅತ್ತುಬಿಟ್ಟ.
ಕೆಲವೇ ತಿಂಗಳಲ್ಲಿ ಆ ಹುಡುಗಿಯ ಮದುವೆ ಇನ್ನೊಂದು ಹುಡುಗನ ಜೊತೆ ಆಯಿತು. ಮದುವೆಯ 2 ದಿನದ ನಂತರ ಹುಡುಗಿ ಮದುವೇಲಿ ಬಂದ ಗಿಫ್ಟ್ ಗಳನ್ನು ನೋಡಲು ಶುರು ಮಾಡಿದಳು. ಒಂದು ಗಿಫ್ಟ್ ನೋಡಿ ಅಳಲು ಪ್ರಾರಂಬಿಸಿದಳು. ಆ ಗಿಫ್ಟ್ ಅಲ್ಲಿ ಒಂದು ಗಾಜಿನ ಬಾಕ್ಸ್ ಒಳಗೆ ಒಂದು ಹ್ರದಯ ರಕ್ತದ ಮಡುವಿನಲ್ಲಿ ಇತ್ತು. ಮತ್ತು ಆ ಗಾಜಿನ ಗ್ಲಾಸ್ ಹೊರಗೆ ಒಂದು ಚಿಟಿ ಅಂಟಿತ್ತು. ಅದನ್ನು ಅವಳು ಓದಿದಾಗ ಅದರಲ್ಲಿ ಹೀಗಿತ್ತು "ಕತ್ತೆ ನಿನ್ನ ಹ್ರದಯ ನನ್ನಲ್ಲಿ ಇದೆ ಅಲ್ವ ಮತ್ತೆ ನಿನ್ನ ಗಂಡನಿಗೆ ಏನನ್ನ ಕೊಡುತ್ತಿಯಾ..?" ನಿನ್ನ ಹ್ರದಯ ನಿನಗೆ ಕಳುಹಿಸಿದ್ದೇನೆ ನನ್ನದನ್ನ ನನಗೆ ಹಿಂದೆ ಕೊಡಲು ನಿನ್ನಲ್ಲಿ ಆಗುತ್ತ ?? by Puttaheart.

1 comment: