ಪುಟ್ಟ ಹುಡುಗನೊಬ್ಬ ಚಿಟ್ಟೆಯೊಂದನ್ನ ಹಿಡಿದ....

ಪುಟ್ಟ ಹುಡುಗನೊಬ್ಬ ಚಿಟ್ಟೆಯೊಂದನ್ನ ಹಿಡಿದ. ಬಣ್ಣ ಬಣ್ಣದ ಮುದ್ದಾದ ರೆಕ್ಕೆ ಹುಡುಗನ ಬೆರಳ ಮಧ್ಯೆ ಒದ್ದಾಡುತಿತ್ತು.
ಹುಡುಗ ಚಿಟ್ಟೆಯನ್ನ ಬಂಧಿಸಲು ಬೆಂಕಿ ಪೊಟ್ಟಣಒಂದನ್ನ ಹುಡುಕುತ್ತಿದ್ದ. ಚಿಟ್ಟೆ ಹೇಳಿತು "ಹಾರಾಡದೇ ಬದುಕಿರಲಾರೆ 
ಬಿಟ್ಟು ಬಿಡು ನನ್ನ. ನಿನ್ನ ಕಣ್ಣ ಮುಂದೆ ಹಾರಾಡಿ ಕೊಂಡಿರುತ್ತೇನೆ , ನೋಡಿ ಆನಂದಿಸು." ಹುಡುಗ ಕೇಳಲಿಲ್ಲ 
ಬೆಂಕಿ ಕಡ್ಡಿಗಳ ಎಸೆದು ಖಾಲಿ ಡಬ್ಬದಲ್ಲಿ ಚಿಟ್ಟೆಯನ್ನಿಟ್ಟ. ದಿನವೂ ಚಿಟ್ಟೆಯ ಬಣ್ಣವ ನೋಡುವ ಕನಸ ಹೊತ್ತು ಮಲಗಿದ.
ಬೆಳಗೆದ್ದು ನೋಡಿದರೆ ಹೊರ ಹೋಗುವ ಪ್ರಯತ್ನದಲ್ಲಿ ಚಿಟ್ಟೆಯ ರೆಕ್ಕೆ ಪುಟ್ಟ ಡಬ್ಬದಲ್ಲಿ ಚೆಲ್ಲಾ ಪಿಲ್ಲಿಯಾಗಿತ್ತು!!


No comments:

Post a Comment