ಒಂದು ನಿಷ್ಕಲ್ಮಶ ಹ್ರದಯದ ಪವಾಡ

ಒಂದು ನಿಷ್ಕಲ್ಮಶ ಹ್ರದಯದ ಪವಾಡ
ಎಂಟು ವರ್ಷದ ಪುಟ್ಟ ಹುಡುಗಿ ತನ್ನ ತಂದೆ ತಾಯಿ ಮಾತಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದಳು. ಅವರು ಅವಳ ತಮ್ಮನ ಬಗ್ಗೆ ಮಾತಾಡುತ್ತಿದ್ದರು. ಅವಳ ತಮ್ಮ ಖಾಯಿಲೆಯಿಂದ ಬಳಲುತ್ತಿದ್ದನು ತಂದೆ ತಾಯಿಯ ಕೈಯ್ಯಲ್ಲಿ ಇದ್ದ ಹಣವೆಲ್ಲ ಖಾಲಿ ಆಗಿತ್ತು. ಅವರು ಮಗುವಿನ ಆಸ್ಪತ್ರೆ ಬಿಲ್ ಗಾಗಿ ತಮ್ಮ ಮನೆಯನ್ನು ಮಾರಿ ಬಾಡಿಗೆ ಮನೆಗೆ ಹೋಗಲು ತಿರ್ಮಾನಿಸಿದ್ದರು . ಒಂದು ಸರ್ಜರಿ ಮಗುವಿನ ಬದುಕನ್ನು ಉಳಿಸಬಹುದಿತ್ತು ಆದರೆ ಅದು ಅತ್ಯಂತ ದುಬಾರಿ ಆಗಿತ್ತು. ಅವರಿಗೆ ಯಾರು ಎಲ್ಲೂ ಸಾಲ ಕೊಡಲು ತಯಾರಿರಲಿಲ್ಲ. ಆ ಚಿಕ್ಕ ಹುಡುಗಿ ತನ್ನ ತಂದೆ ತಾಯಿ ಹೇಳಿಕೊಂಡು ಅಳುತ್ತಿರುವುದನ್ನು ನೋಡಿ ಬೇಸರಗೊಂಡಳು. ತಂದೆ ತಾಯಿಯಲ್ಲಿ ಅಳುತ್ತ ಹೇಳಿದರು "ಒಂದು ಪವಾಡ ಮಾತ್ರ ತಮ್ಮ ಮಗನನ್ನು ಬದುಕಿಸಬಹುದು" ಅಂತ.
ಆ ಹುಡುಗಿಯು ತಕ್ಷಣ ಮಲಗೋ ಕೊನೆಗೆ ಓಡಿದಳು ತಾನು ಅಡಗಿಸಿಟ್ಟ ಒಂದು ಸಣ್ಣ ಡಬ್ಬವನ್ನು ಹೊರಗೆ ತೆಗೆದಳು. ಅದರಲ್ಲಿದ ಎಲ್ಲ ಚಿಲ್ಲರೆಯನ್ನು ತೆಗೆದು ನೆಲದ ಮೇಲೆ ಹಾಕಿದಳು ಮತ್ತು ಅವುಗಳನ್ನು ಗಂಭಿರವಾಗಿ ಲೆಕ್ಕ ಮಾಡಲು ಪ್ರಾರಂಬಿಸಿದಳು. ಮೂರೂ ಸಲ ಲೆಕ್ಕ ಮಾಡಿದಳು ಮೂರೂ ಸಲ ಸಹ ಲೆಕ್ಕ ಒಂದೇ ಬರುತ್ತಿತ್ತು. ತಪ್ಪಾಗಲು ಚಾನ್ಸೇ ಇರಲಿಲ್ಲ. ಎಚ್ಚರಿಕೆಯಿಂದ ಆ ಚಿಲ್ಲರೆಗಳನ್ನು ಮತ್ತೆ ಅದೇ ಡಬ್ಬಿಗೆ ಹಾಕಿದಳು ಮತ್ತು ಅಲ್ಲೇ ಮನೆಯ ಹತ್ತಿರವಿದ್ದ ಮೆಡಿಕಲ್ ಶಾಪ್ ಕಡೆ ಓಡಿದಳು.
ಅವಳು ಮೆಡಿಕಲ್ ಎದುರು ಬಂದು ಔಷಧಿ ನೀಡುವವನನ್ನು ನೋಡುತ್ತಾ ನಿಂತಳು. ಆದರೆ ಔಷಧಿ ನೀಡುವವ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಅವಳು ತನ್ನ ಗಂಟಲಲ್ಲಿ ಶಭ್ದ ಮಾಡಿ ಅವನು ನೋಡುವಂತೆ ಮಾಡಲು ಪ್ರಯತ್ನಿಸಿದಳು. ಆದರೆ ಅವನು ನೋಡಲೇ ಇಲ್ಲ. ತಕ್ಷಣ ಡಬ್ಬಿ ಇಂದ ಸ್ವಲ್ಪ ಚಿಲ್ಲರೆ ತೆಗೆದು ಅಂಗಡಿಯ ಗ್ಲಾಸ್ ಮೇಲೆ ಇಟ್ಟು ಶಭ್ದ ಮಾಡಿದಳು. ತಕ್ಷಣ ಶಭ್ದ ಕೇಳಿ ಔಷಧಿ ಅಂಗಡಿಯವ ಅವಳ ಬಳಿ ಬಂದನು
ಸಾರೀ ನಾನು ನನ್ನ ತಮ್ಮನ ಜೊತೆ ಮಾತಾಡುತ್ತಿದ್ದೆ ಮಗು ನಿನ್ನನ್ನು ನಾನು ನೋಡಲಿಲ್ಲ, ನಿನಗೇನೂ ಬೇಕೆಂದು ಔಷಧಿ ಅಂಗಡಿಯವ ಮ್ರದು ಧ್ವನಿಯಲ್ಲಿ ಕೇಳಿದ.
ಆಯಿತು, ನಾನು ನನ್ನ ತಮ್ಮನ ಬಗ್ಗೆ ಮಾತಾಡಬೇಕಿತ್ತು ಅಂತ ಹುಡುಗಿ ಅವನಿಗೆ ಹೇಳಿದಳು. ನನ್ನ ತಮ್ಮ ತುಂಬಾನೇ ಖಾಯಿಲೆಯಿಂದ ನರಳುತ್ತಿದ್ದಾನೆ ಮತ್ತು ನಾನು ಅವನಿಗೆ ಪವಾಡವನ್ನು ಖರೀದಿ ಮಾಡಬೇಕು. ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತಿದ್ದೇನೆ ಅವನ ತಲೆಯಲ್ಲಿ ಏನೋ ಬೆಳೆಯುತ್ತಿದೆ ಅಂತ ನನ್ನ ಅಪ್ಪ ಹೇಳಿದರು ಬರಿ ಒಂದು ಪವಾಡದಿಂದ ಮಾತ್ರ ಅವನನ್ನು ಬದುಕಿಸಬಹುದಂತೆ. ಈಗ ಹೇಳಿ ಒಂದು ಪವಾಡಕ್ಕೆ ಎಷ್ಟು ಹಣ ಬಿಳುತ್ತೆ. ?
ಔಷಧಿ ಅಂಗಡಿಯವ ತಕ್ಷಣ ಹೇಳಿದ ನಾವು ಇಲ್ಲಿ ಪವಾಡವನ್ನು ಮಾರೋದಿಲ್ಲ ಮಗು ಸಾರೀ ನಾನು ಏನು ಸಹಾಯ ಮಾಡಲು ಆಗೋದಿಲ್ಲ ಅಂತ ಮೆಲ್ಲ ಧ್ವನಿಯಲ್ಲಿ ಹೇಳಿದ. ಇಲ್ಲಿ ಕೇಳಿ ನನ್ನಲ್ಲಿ ಹಣ ಇದೆ ನಾನು ಖರೀದಿ ಮಾಡುತ್ತೇನೆ, ಇಷ್ಟು ಹಣ ಸಾಕಾಗದಿದ್ದರೆ ಉಳಿದ ಹಣವನ್ನು ಕೊಡುತ್ತೇನೆ ದಯವಿಟ್ಟು ಹೇಳಿ ಒಂದು ಪವಾಡಕ್ಕೆ ಎಷ್ಟು ಹಣ ??.
ಅಲ್ಲೇ ಇದ್ದ ಔಷಧಿ ಅಂಗಡಿಯವನ ತಮ್ಮ ಮೊಣಕಾಲೂರಿ ಆ ಚಿಕ್ಕ ಹುಡುಗಿಯಲ್ಲಿ ಮಾತಾಡಲು ಶುರುಮಾಡಿದ," ನಿನ್ನ ತಮ್ಮನಿಗೆ ಯಾವ ತರಹದ ಪವಾಡ ಬೇಕಾಗಿದೆ.? ಅಂತ ಕೇಳಿದ
ನನಗೆ ಗೊತ್ತಿಲ್ಲ, ತನ್ನ ಬೇಸರದ ಕಣ್ಣುಗಳಿಂದ ಅವರನ್ನ ನೋಡುತ್ತಾ ಹೇಳಿದಳು. ನನ್ನ ತಮ್ಮ ಖಾಯಿಲೆ ಇಂದ ಬಳಲುತ್ತಿದ್ದಾನೆ. ಅಮ್ಮ ಹೇಳಿದರು ಅವನಿಗೆ ಓಪರೆಶನ್ ಆಗಬೇಕು ಅಂತ. ಆದರೆ ತಂದೆಯಲ್ಲಿ ಹಣ ಇಲ್ಲ ಅದಕ್ಕೆ ನಾನು ನನ್ನ ಹಣ ಉಪಯೋಗಿಸುತ್ತಿದ್ದೇನೆ.
ನಿನ್ನಲ್ಲಿ ಎಷ್ಟು ಹಣ ಇದೆ ? ಅಂತ ಆ ವ್ಯಕ್ತಿ ಕೇಳಿದ. ಹುಡುಗಿ ತಕ್ಷಣ ನನ್ನಲ್ಲಿ 143 ರುಪಾಯಿ ಇದೆ ಅಂತ ದೊಡ್ಡ ಧ್ವನಿಯಲ್ಲಿ ಹೇಳಿದಳು ಮತ್ತು ಇನ್ನು ಬೇಕಾದರೆ ತೆಗೆದುಕೊಂಡು ಬರುವೆ ಅಂದಳು.
ಓ ಹೌದಾ ಎಂತ ವಿಚಾರ, ಆ ವ್ಯಕ್ತಿ ಮುಗುಳ್ನಕ್ಕ. 143 ರುಪಾಯಿ, ಇದು ನಿಜವಾದ ಬೆಲೆ ನಿನ್ನ ತಮ್ಮನಿಗೆ ಬೇಕಾಗಿರುವ ಪವಾಡದ ಬೆಲೆ. ಅವನು ಅವಳಲ್ಲಿದ್ದ ಹಣವನ್ನು ತೆಗೆದುಕೊಂಡು ಅವಳನ್ನು ಎತ್ತಿಕೊಂಡನು. ನನ್ನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು ನನಗೆ ನಿನ್ನ ತಮ್ಮನನ್ನು ನೋಡಬೇಕು ಮತ್ತು ನಿನ್ನ ಹೆತ್ತವರಲ್ಲಿ ಮಾತಾಡಬೇಕು. ಮುಂದೆ ನೋಡುವ ನನ್ನಲ್ಲಿ ನೀನು ಕೇಳಿದ ಪವಾಡ ಇದೆಯಾ ಇಲ್ಲವ ಅಂತ.
ಆ ಚಿಕ್ಕ ಹುಡುಗಿಯ ಜೊತೆ ಮಾತಾಡಿದ ವ್ಯಕ್ತಿ ಒಬ್ಬ ಡಾಕ್ಟರ್ ಆಗಿದ್ದ ಮತ್ತು ನ್ಯೂರೋ-ಸರ್ಜರಿ ಸ್ಪೆಷಲಿಸ್ಟ್ ಆಗಿದ್ದ. ಅವನು ಅವಳ ತಮ್ಮನ ಓಪರಶನ್ ಅನ್ನು ಯಾವುದೇ ಹಣವನ್ನು ತೆಗೆದುಕೊಳ್ಳದೆ ಮಾಡಿದ. ಸ್ವಲ್ಪ ದಿನಗಳಲ್ಲಿ ಅವಳ ತಮ್ಮ ಮೊದಲಿನಂತೆ ಆಗಿಬಿಟ್ಟ. ಅವಳ ತಂದೆ ತಾಯಿ ತುಂಬಾ ಖುಷಿಲಿ ಇದ್ದರು. ಹೀಗೆ ಮಾತಾಡೋವಾಗ ಆ ಸರ್ಜರಿ ಒಂದು ನಿಜವಾದ ಪವಾಡವಾಗಿತ್ತು, ನನಗೆ ಆಶ್ಚರ್ಯ ಅದರ ಬೆಲೆ ಎಷ್ಟಾಗಿರಬಹುದೆಂದು? ಹೇಳಿದರು.
ಆ ಪುಟ್ಟ ಹುಡುಗಿ ನಕ್ಕು ಬಿಟ್ಟಳು. ಅವಳಿಗೆ ತಿಳಿದಿತ್ತು ಆ ಪವಾಡದ ಬೆಲೆ 143 ರುಪಾಯಿ ಮತ್ತು ಆ ಚಿಕ್ಕ ಹುಡುಗಿಯ ನಂಬಿಕೆ, ಪ್ರೀತಿ .
ನಿಮ್ಮ ನಂಬಿಕೆ, ನಿಮ್ಮ ಪ್ರೀತಿ, ನಿಮ್ಮ ಸುಂದರತೆ, ನಿಮ್ಮ ಸತ್ಯತೆ ಯು ನೂರು ಪಟ್ಟು ಶಕ್ತಿಶಾಲಿ ಅನುಮಾನಕ್ಕಿಂತ. ನಿಮ್ಮಲ್ಲಿ ನಂಬಿಕೆ ಇರಲಿ ಮತ್ತು ನಿರ್ಮಲವಾದ, ನಿಷ್ಕಲ್ಮಶವಾದ ಹ್ರದಯವಿರಲಿ. ಪ್ರೀತಿಸೋ ಹ್ರದಯವಿರಲಿ ಕಷ್ಟಕ್ಕೆ ಸಹಕರಿಸೋ ಮನಸಿರಲಿ... ನಿಮ್ಮ ಒಳ್ಳೆತನ ನಿಮಗೆ ಸಹಕರಿಸುತ್ತೆ. ಪ್ರೀತಿಯಿಂದ ನಿಮ್ಮ ಪುಟ್ಟಹಾರ್ಟ್ . 
By PuttaHeart



No comments:

Post a Comment