ಪುಟ್ಟ ಹುಡುಗನೊಬ್ಬ ಚಿಟ್ಟೆಯೊಂದನ್ನ ಹಿಡಿದ....

ಪುಟ್ಟ ಹುಡುಗನೊಬ್ಬ ಚಿಟ್ಟೆಯೊಂದನ್ನ ಹಿಡಿದ. ಬಣ್ಣ ಬಣ್ಣದ ಮುದ್ದಾದ ರೆಕ್ಕೆ ಹುಡುಗನ ಬೆರಳ ಮಧ್ಯೆ ಒದ್ದಾಡುತಿತ್ತು.
ಹುಡುಗ ಚಿಟ್ಟೆಯನ್ನ ಬಂಧಿಸಲು ಬೆಂಕಿ ಪೊಟ್ಟಣಒಂದನ್ನ ಹುಡುಕುತ್ತಿದ್ದ. ಚಿಟ್ಟೆ ಹೇಳಿತು "ಹಾರಾಡದೇ ಬದುಕಿರಲಾರೆ 
ಬಿಟ್ಟು ಬಿಡು ನನ್ನ. ನಿನ್ನ ಕಣ್ಣ ಮುಂದೆ ಹಾರಾಡಿ ಕೊಂಡಿರುತ್ತೇನೆ , ನೋಡಿ ಆನಂದಿಸು." ಹುಡುಗ ಕೇಳಲಿಲ್ಲ 
ಬೆಂಕಿ ಕಡ್ಡಿಗಳ ಎಸೆದು ಖಾಲಿ ಡಬ್ಬದಲ್ಲಿ ಚಿಟ್ಟೆಯನ್ನಿಟ್ಟ. ದಿನವೂ ಚಿಟ್ಟೆಯ ಬಣ್ಣವ ನೋಡುವ ಕನಸ ಹೊತ್ತು ಮಲಗಿದ.
ಬೆಳಗೆದ್ದು ನೋಡಿದರೆ ಹೊರ ಹೋಗುವ ಪ್ರಯತ್ನದಲ್ಲಿ ಚಿಟ್ಟೆಯ ರೆಕ್ಕೆ ಪುಟ್ಟ ಡಬ್ಬದಲ್ಲಿ ಚೆಲ್ಲಾ ಪಿಲ್ಲಿಯಾಗಿತ್ತು!!


ಸಣ್ಣ ಕಥೆ:ಹುಡುಗ ಹುಡುಗಿ ನದಿಯ ಬದಿಯಲ್ಲಿ ಆಡುತ್ತ ಇರುತ್ತಾರೆ ....

ಸಣ್ಣ ಕಥೆ :
ಹುಡುಗ ಹುಡುಗಿ ನದಿಯ ಬದಿಯಲ್ಲಿ ಆಡುತ್ತ ಇರುತ್ತಾರೆ . ಹುಡುಗನ ಹತ್ತಿರ ಸಿಹಿ ತಿಂಡಿ ಇತ್ತು . ಹುಡುಗಿ ಹತ್ತಿರ ಚಂದದ ಸಣ್ಣ ಸಣ್ಣ ಮಾರ್ಬಲ್ಸ್ ಕಲ್ಲುಗಳು ಇತ್ತು ... ಹುಡುಗಿ ಹೇಳಿದಳು ನನಗೆ ಸ್ವೀಟ್ಸ್ ಕೊಡು ನಿನಗೆ ಮಾರ್ಬಲ್ಸ್ ಕೊಡುತ್ತೇನೆ ಎಂದು . ಹುಡುಗ ಒಪ್ಪಿದ .. ಹುಡುಗಿ ಚಂದ ಚಂದದ ಮಾರ್ಬಲ್ಸ್ ಇಡ್ಕೊಂಡು ಉಳಿದದು ಹುಡುಗನಿಗೆ ಕೊಟ್ಟಳು. ಆದರೆ ಹುಡುಗ ಅವನಲ್ಲಿದ್ದ ಎಲ್ಲ ಸ್ವೀಟ್ಸ್ ಅನ್ನು ಅವಳಿಗೆ ಕೊಟ್ಟನು ಮೊದಲೇ ಕೊಟ್ಟ ಮಾತಿನ ಪ್ರಕಾರ . ಆದರೆ ಹುಡುಗಿ ಮಾತು ತಪ್ಪಿದಳು . ಆ ದಿನ ರಾತ್ರಿ ಹುಡುಗ ಖುಷಿಲಿ ನಿದ್ರೆ ಮಾಡಿದ ಆದರೆ ಹುಡುಗಿಗೆ ನಿದ್ರೇನೆ ಬರಲಿಲ್ಲ . ಹುಡುಗಿ ಯೋಚಿಸ್ತಿದ್ಲು ತಾನು ಮಾರ್ಬಲ್ಸ್ ಅಡಗಿಸಿದಾಗೆ ಅವನು ಸ್ವೀಟ್ಸ್ ಅಡಗಿಸಿ ಇರಬಹುದ ಎಂದು ....
[ಇಲ್ಲಿ ಸಿಹಿತಿಂಡಿ ಪ್ರೀತಿ ಆಗಿದ್ರೆ ಮಾರ್ಬಲ್ಸ್ ಪ್ರೀತಿಗೆ ಬದಲಿಗೆ ಒಬ್ಬರಿಗೆ ತೋರಿಸೋ ಕಾಳಜಿ ]
ನೀತಿ : ನೀವು ಪ್ರೀತಿಲಿ ೧೦೦ ಪ್ರತಿಸತ ಕೊಡದಿದ್ರೆ ನಿಮ್ಮ ಪ್ರೀತಿಸಿದೊರು ೧೦೦ ಪ್ರತಿಸತ ಪ್ರೀತಿ ಕೊಡ್ತಾರೆ ಎಂದು ಡೌಟ್ ಮೂಡುತ್ತದೆ . ಅದರಿಂದ ಪ್ರೀತಿಲಿ ಮೋಸ , ಸುಳ್ಳು , ಯಾವುದು ಇರಬಾರದು . ಇದರಲ್ಲಿ ಯಾವುದಕಾದ್ರು ಅವಕಾಶ ಕೊಟ್ಟರೆ ಅಂತ್ಯವಿಲ್ಲದ ಪ್ರೀತಿಯ ಅಂತ್ಯ ನೀವೇ ಮಾಡಿಕೊಂಡಾಗೆ ಆಗುತ್ತೆ ... ಅದರಿಂದ ಪ್ರೀತಿನ ಕೊಟ್ಟು ತಗೊಳ್ಳಿ ಆಗ ಮಾತ್ರ ಪ್ರೀತಿ ಅನ್ನೋದು ಪ್ರೀತಿಸಿದವರ ಮದ್ಯ ಖುಷಿ ತರುತ್ತೆ ...
ನೀವೇ ನಿರ್ಧರಿಸಿ ಪ್ರೀತಿ ನಿಮ್ಮ ನಡುವೆ ಅಮ್ರತವಾಗಿರಬೇಕ ಅಥವಾ ವಿಷವಾಗಿರಬೇಕ ಎಂದು ?....

ನಾ ಬಯಸಿದ್ದು ಅವಳ ಪ್ರೀತಿ



ನಾ ಬಯಸಿದ್ದು ಅವಳ ಪ್ರೀತಿ
ಅವಳು ಬಯಸಿದ್ದು ನನ್ನ ಬಿಟ್ಟು ಬೇರೆಲ್ಲರ ಪ್ರೀತಿ
ನನಗಿಷ್ಟ ಆಗಿರಲಿಲ್ಲ ನಿನ್ನ ಆ ರೀತಿ
ನನಗೆ ಬೇಕಿತ್ತು ನನ್ನನ್ನೇ ಇಷ್ಟ ಪಡೋ ಪ್ರೀತಿ
ನನ್ನನ್ನು ಬಿಟ್ಟು ಬೇರೆ ಕಡೆ ವಾಲದ ಪ್ರೀತಿ 
ನನ್ನ ಕನಸಾಗಿತ್ತು ಅವಳಾಗಿರಬೇಕು ಸತಿ ಸಾವಿತ್ರಿ
ಆ ಗುಣ ನಿನ್ನಲ್ಲಿದ್ದರೆ ಮಾತ್ರ ಮಾಡು ನನ್ನ ಪ್ರೀತಿ
ಯಾರಲ್ಲೂ ಆ ಗುಣ ಕಾಣದಕ್ಕೆ ಮಾಡಿಲ್ಲ ನಾ ಪ್ರೀತಿ
ನಿನಗಾಗಿ ಕಾದಿದೆ ನನ್ನ ಪ್ರೀತಿ ನನ್ನ ಪುಟ್ಟ ಹ್ರದಯದ ಪ್ರೀತಿ

ಯಾರನ್ನಾದರೂ ಮೂರ್ಖನಾಗಿಸಿ ನೀವು ಮಹಾ ಸಂತೋಷಪಡಬೇಡಿ !!



ಯಾರನ್ನಾದರೂ ಮೂರ್ಖನಾಗಿಸಿ ನೀವು ಮಹಾ ಸಂತೋಷಪಡಬೇಡಿ !!
ಯಾಕೆಂದರೆ ಅವರು ನಿಮ್ಮ ಮೇಲೆ ಇಟ್ಟ ಭರವಸೆಯಿಂದಾಗಿ ಮೂರ್ಖನಾಗಿದ್ದಾರೆ !!!
ಒಂದು ವೇಳೆ ಅಂತಹ ಜನರತ್ರ ನೀವು ಗೆದ್ದರೂ ನಿಮ್ಮಂತ ಶತಮೂರ್ಖ ಇನ್ನೊಬ್ಬರಿಲ್ಲ ,
ಇರಲಿ ಬಿಡಿ, ಚಪ್ಪಲಿ ನಮ್ಮ ಕಾಲು ಕಡಿಯುತ್ತೆ ಎಂದು ನಾವು ಚಪ್ಪಲಿಯ ಕಡಿಯುದೇ ???
ಬೇರೆಯವರ ಜೀವನ ಹಾಳು ಮಾಡಿ ದೇವರಿಗೆ ಕೈ ಮುಗಿದರೇನು ಫಲ ????

ನಂಬಿಕೆಯೇ ಪ್ರೀತಿಯ ತಳಹದಿ.

ನಂಬಿಕೆಯೇ ಪ್ರೀತಿಯ ತಳಹದಿ. ನಂಬಿಕೆ ಇಲ್ಲದೆ ಪ್ರೀತಿ ಇಲ್ಲ, ಪ್ರೀತಿ ಇಲ್ಲದೆ ನಂಬಿಕೆ ಇಲ್ಲ. ನಾವು ನಂಬಿದವರನ್ನು ಪ್ರೀತಿಸುತ್ತೇವೆ, ಪ್ರೀತಿಸಿದವರನ್ನು ನಂಬುತ್ತೇವೆ. ನಂಬಿಕೆ ಮತ್ತು ಪ್ರೀತಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ನಂಬಿಕೆ, ವಿಶ್ವಾಸವೇ ಜೇವನ. ನಂಬಿಕೆಯೇ ಮಾನವ ಜೀವನದ ಬೆನ್ನೆಲುಬು. ಇದನ್ನು ಅನುಸರಿಸಿ ಬಾಳುವುದೇ ಸದಾಚಾರ ಸಂಪನ್ನ ಜೀವನ ಶೈಲಿ. ಇದುವೇ ಮಾನವೀಯ ಗುಣಗಳು. ಮಾನವೀಯ ಮೌಲ್ಯಗಳು. ಇದನ್ನು ಜೀವನದಲ್ಲಿ ಅಳವಡಿಸುವವನು ಆದರ್ಶ ಪುರುಷನಾಗುತ್ತಾನೆ.
ಮನುಷ್ಯ ಜೀವನಕ್ಕೆ ನಂಬಿಕೆಯೇ ಮೂಲ ಆಧಾರ. ನಂಬಿಕೆ ಇಲ್ಲದೆ ಮಾನವ ಜೀವಿಸಲಾರ. ಒಬ್ಬರನ್ನೊಬ್ಬರು ಪರಸ್ಪರ ನಂಬುವ ಮೂಲಕವೇ ಜಗತ್ತಿನ ಎಲ್ಲಾ ಸಂಭಂಧವು, ವ್ಯವಹಾರಗಳು ನಿಂತಿರುವುದು. ಒಟ್ಟಿನಲ್ಲಿ ನಂಬಿಕೆ ಇಲ್ಲದ ಬದುಕಿಲ್ಲ. ನಂಬಿ ಬಾಳುವುದೇ ಬದುಕು.
ಅಂತಹ ನಂಬಿಕೆಗೆ ಒಂದು ಉತ್ತಮ ಉದಾಹರಣೆ ಎಂದರೆ ಇಂದು ಮುಳುಗಿದ ಸೂರ್ಯ ನಾಳೆ ಮತ್ತೆ ಉದಯಿಸುತ್ತಾನೆ ಎಂಬ ನಂಬಿಕೆಯಲ್ಲೇ ನಾವು ಬದುಕಿದ್ದೇವೆ. ಸುಂದರವಾದ ನಾಳೆಗಳು ನಮಗಾಗಿ ಕಾದಿದೆ ಎಂಬ ನಂಬಿಕೆ, ವಿಶ್ವಾಸದಲ್ಲೇ ನಮ್ಮ ಬದುಕು ಸಾಗುತ್ತಿರುವುದು. ಆ ನಂಬಿಕೆ ಸುಳ್ಳಾದರೆ ಬದುಕು ನಾಶವಾಗುವುದು ಖಚಿತ. ಹುಡುಗ ಹುಡುಗಿಯರ ನಡುವೆ ಪ್ರೀತಿ ಬೆಳೆಯಬೇಕಾದರೆ ನಂಬಿಕೆ ಇರಬೇಕು, ತಾಯಿ ಮಗುವನ್ನು ನಂಬುತ್ತಾಳೆ, ಮಗು ಹೆತ್ತವರನ್ನು ನಂಬಿ ಬದುಕುತ್ತದೆ. ಹೀಗೆ ಒಬ್ಬರು ಮತ್ತೊಬ್ಬರನ್ನು ನಂಬಿಯೇ ಬಾಳುತ್ತಾರೆ. ಯಾರನ್ನೂ ನಂಬದೆ, ಯಾವುದನ್ನೂ ನಂಬದೆ ಬಾಳಿದವರು ಯಾರೂ ಇಲ್ಲ. ಒಂದಲ್ಲಾ ಒಂದನ್ನು ಜೀವನದಲ್ಲಿ ನಂಬಲೇ ಬೇಕು.
ಜಗತ್ತಿನ ಎಲ್ಲಾ ಮಾನವ ಸಮುದಾಯವು ನಂಬಿಕೆಯ ಮೇಲೆ ನಿಂತಿದೆ. ಆ ನಂಬಿಕೆಯೇ ಎಲ್ಲಾ ವ್ಯವಹಾರಗಳು ಸುಗಮವಾಗಿ ಸಾಗುವಂತೆ ಮಾಡಿದೆ. ಬರುವ ನಾಳೆಯು ನಿರೀಕ್ಷೆಯು ನಿತ್ಯ ಸತ್ಯವಾಗಿ ನಂಬಿಕೆಯ ಮಹತ್ವವನ್ನು ಉಳಿಸಿದೆ.

ಹದಿಹರಿಯದ ಬಡಪಾಯಿ ಮನಸ್ಸಿನ ಕಣ್ಣುಗಳಿಗೆ ಕಾಣೋದೆಲ್ಲ ಸುಂದರವೇ....

ಹದಿಹರಿಯದ ಬಡಪಾಯಿ ಮನಸ್ಸಿನ ಕಣ್ಣುಗಳಿಗೆ ಕಾಣೋದೆಲ್ಲ ಸುಂದರವೇ,ಆ ವಯಸ್ಸಿನ ಮನಸುಗಳೇ ಹಾಗೆ ಏನೇ ಮಾಡಿದರು ಎಷ್ಟೇ ತಡೆ ಹಿಡಿದರು ಒಲವ ಬಳ್ಳಿಯ ಎಳೆಗಳ ಮೇಲೆ ಇಬ್ಬನಿಯಂತೆ ತಬ್ಬಲು ಹಾತೊರಿಯುತ್ತವೆ, ಎಲ್ಲೊ ಒಂದು ಕಡೆ ಅವಳ /ಅವನ ಅತಿಯಾದ ಕ್ಲೊಸೆನೆಸ್, ಮಾತು, ಮಾತಿನ ಶೈಲಿ, ನಗು, ಸ್ಪರ್ಶ, ಉಡುಗೆ, ತುಂಟತನ ಇವುಗಳಿಂದ ಮನಸ್ಸು ಆಕರ್ಷಣೆಗೆ ಒಳಗಾಗುತ್ತದೆ ಇಂತಹ ಸಣ್ಣ ಸಣ್ಣ ಕ್ರಷ್ ಗಳನ್ನ ನಾವು ಸರಿಯಾಗಿ ಅರ್ಥೈಸಿಕೊಳ್ಳದೆ ಮುಂದೆ ಒಂದು ದಿನ ಐ ಆಮ್ ಇನ್ ಲವ್ ಎಂದು ನಿರ್ಧರಿಸಿ ಬಿಡುತ್ತೇವೆ.. ಇಂತಹ ಎಷ್ಟೋ ಕ್ರಷ್ ಗಳು ನಮ್ಮಲ್ಲಿ ಮೂಡಿ ಹೇಳ ಹೆಸರಿಲ್ಲದೆ ಹೋಗಿರುತ್ತವೆ ಇಲ್ಲಿ ಎಲ್ಲಿಯೂ ನಮಗೆ ನಿಜವಾದ ಪ್ರೀತಿ ಸಿಗುವುದಿಲ್ಲ ಅದು ಕೇವಲ ಆಕರ್ಷಣೆಯ ಸೆಳೆತ ಅಷ್ಟೇ.. ಹಾಗಾದ್ರೆ ನಿಜವಾದ ಪ್ರೀತಿ ಅಂತ ಗೊತ್ತಾಗುವುದು ಹೇಗೆ ಇದಕ್ಕೆ ಉತ್ತರ ಹುಡುಕುವುದು ಕಷ್ಟಸಾದ್ಯ...
ನಿಜವಾದ ಪ್ರೀತಿ ತನ್ನ ಛಾಯೆಯನ್ನ ಹಾಗೆ ಉಳಿಸಿರುತ್ತದೆ ಅದನ್ನ ಸೂಕ್ಷ್ಮವಾಗಿ ಗಮನಿಸುವ ಮನಸು ಬೇಕು, ಒಮ್ಮೆ ಈ ಕೆಳಗಿನ ಅಂಶಗಳನ್ನು ಓದಿ
ನಿಜವಾದ ಪ್ರೀತಿಯೆಂದರೆ ಅವಳ/ಅವನ ಮೇಲೆ ಅವನು/ಅವಳು ಇಟ್ಟಿರುವ ಅಪಾರವಾದ ನಂಬಿಕೆ
ನಿಜವಾದ ಪ್ರೀತಿಯಲ್ಲಿ ಮೋಹಕ್ಕಿಂತ ಆಸರೆಯ ನೆರಳು ಹೆಚ್ಚಾಗಿರುತ್ತದೆ
ನಿಜವಾದ ಪ್ರೀತಿಯಲ್ಲಿ ಅಧಿಕಾರದ ಬದಲು ಪ್ರಾಮಾಣಿಕತೆ ಇರುತ್ತದೆ.
ನೀನಿಲ್ಲದೆ ಬದುಕಲಾರೆ ಅನ್ನೋವುದಕ್ಕಿಂತ ಬದುಕಿದರೆ ನಿನ್ನೊಂದಿಗೆ ಮಾತ್ರ ಬದುಕುವೆ ಅನ್ನೋ ಭಾವಲಹರಿಯೇ ನಿಜವಾದ ಪ್ರೀತಿ.
ಅತಿಯಾದ ವ್ಯಾಮೋಹಕ್ಕಿಂತ ಮುಕ್ತವಾದ ಸ್ವಾತಂತ್ರವೇ ನಿಜವಾದ ಪ್ರೀತಿ.
 ಆಡುವ ಮಾತಿಗಿಂತ ನೀವು ತೆಗೆದುಕೊಳ್ಳುವ ಜವಾಬ್ದಾರಿ ಕೆಲಸಗಳಲ್ಲಿ ನಿಮ್ಮ ನಿಜ ಪ್ರೀತಿ ಕಾಣುತ್ತದೆ.
ನಿಜವಾದ ಪ್ರೀತಿ ನಿಮ್ಮನ್ನು ಯಾವುದರಿಂದಲೂ ಬಂದಿಸುವುದಿಲ್ಲ.
ಎಲ್ಲದಕ್ಕೂ ಮಿಗಿಲಾಗಿ ಪೋಸೆಸಿವ್ ನೆಸ್ ನಿಜ ಪ್ರೀತಿಯಲ್ಲಿ ಇರುವುದಿಲ್ಲ
ನಿಮ್ಮಲ್ಲಿ ಯಾವುದೇ ಬದಲಾವಣೆಯನ್ನು ಅಪೇಕ್ಷಿಸದೆ ಪ್ರೀತಿಸುವುದು ನಿಜ ಪ್ರೀತಿ.
ಕಾಮುಕತೆಯಿಲ್ಲದೆ ಮಮತೆ ವಾತ್ಸಲ್ಯ ತೋರುವ ಪ್ರೀತಿ ನಿಜವಾದ ಪ್ರೀತಿ.
ಹೀಗೆ ನೀವೇ ಹುಡುಕುತ್ತ ಹೋಗಿ ನಿಮಗೆ ಆಗಿ ಹೋಗಿರುವ ಕ್ರಷ್ ಗಳಲ್ಲಿ ನಿಜವಾದ ಪ್ರತಿ ಯಾವ್ದು ಅಂತ ಗೊತ್ತಾಗುತ್ತದೆ..

college love.....ಫೀಲ್ ಸಕತ್ ... ಪ್ರೊಪೋಸ್... ಪ್ರೀತಿ ನಿವೇಧನೆ

ನಾನು ಹೇಳಲು ಹೋಗ್ತಿರೋ ಕಥೆ ತುಂಬಾ ವಿಚಿತ್ರವಾಗಿದ್ದು ......

ನಾನು ಹೇಳಲು ಹೋಗ್ತಿರೋ ಕಥೆ ತುಂಬಾ ವಿಚಿತ್ರವಾಗಿದ್ದು ಸತ್ಯ, ನಂಬಿಕೆ ಮೇಲೆ ನಿಂತ ಪ್ರೀತಿಯದ್ದು. ಈ ಪ್ರೀತಿ ಶುರುವಾಗಿದ್ದು ಕಾಲೇಜ್ ಅಲ್ಲಿ ಹುಡುಗ ಹುಡುಗಿ ಒಬ್ಬರನೊಬ್ಬರು ನೋಡಿದ್ದು ಬೇಟಿ ಆಗಿದ್ದು ಅಲ್ಲಿಯೇ.. ಮೊದಲ ನೋಟದಲ್ಲಿ ಇಬ್ಬರಲ್ಲೂ ಪ್ರೀತಿ ಹುಟ್ಟಿತ್ತು. ಮುಂದೆ ಸಮಯ ಕಳೆದಂತೆ ಹುಡುಗ ಹುಡುಗಿ ಪ್ರೇಮ ನಿವೇಧನೆ ಮಾಡಿಕೊಂಡು ಪ್ರೇಮಿಗಳಾಗಿ ಬಿಡುತ್ತಾರೆ. ಹುಡುಗ ಸತ್ಯ ನಂಬಿಕೆಗೆ ತುಂಬಾನೇ ಬೆಲೆ ಕೊಡುತ್ತಿದ್ದ ಅದು ಯಾವುದೇ ವಿಷಯವಾಗಲಿ. ಇವರಿಬ್ಬರಷ್ಟು ಪ್ರೀತಿ ಯಾರು ಮಾಡುತ್ತಿರಲಿಲ್ಲ. ಅವರು ಸ್ನೇಹಿತರಗಿದ್ದಾಗಲೇ ಹುಡುಗಿ ಅವಳ ಮನೆಯವರಿಗೆ ಮತ್ತು ಅವಳ ಅಕ್ಕನಿಗೆ ಈ ಹುಡುಗನ ಪರಿಚಯ ಮಾಡಿದ್ದಳು. ತುಂಬಾನೇ ಒಳ್ಳೆ ರೀತಿಲಿ ಅವರ ಜೊತೆ ಇವನಿದ್ದನು. 
ಮುಂದೆ ಅವರನ್ನು ಕಾಲೇಜ್ ಅಲ್ಲಿ ರೋಮಿಯೋ ಜೂಲಿಯಟ್ ಅಂತಾನು ಹೆಸರಿಟ್ಟರು ಅವರ ಪ್ರೀತಿ ಸಾ ರೋಮಿಯೋ ಜೂಲಿಯಟ್ ಗಿಂತ ಕಮ್ಮಿಯೇನು ಇರಲಿಲ್ಲ. ಖುಷಿಯಲ್ಲೂ,ದುಃಖದಲ್ಲೂ ಇಬ್ಬರು ಒಂದಾಗಿದ್ದರು. ಎಲ್ಲ ಯೋಚಿಸಿದ್ದರು ಇವರ ಪ್ರೀತಿ ಸಾಯೋವರೆಗೂ ಕಡಿಮೆ ಆಗಲ್ಲ ಮುಗಿಯಲ್ಲ ಅಂತ. ವಿಧಿ ಆಟ ಅಂದ್ರೆ ಹಾಗೆ ನೋಡಿ. ಹುಡುಗಿಗೆ ಏನೇ ತೊಂದರೆ ಆಗಿದ್ರು ಅದನ್ನು ಹುಡುಗ ಸರಿ ಮಾಡುತ್ತಿದ್ದ. ಹುಡುಗಿ ದೂರದಲ್ಲಿ ಓದುತ್ತಿದ್ದಾಳೆ ಅನ್ನೋ ಹೆದರಿಕೇನೆ ಹುಡುಗಿಯ ಮನೆಯಲ್ಲಿ ಇಲ್ಲದಾಗಿಸಿದ. ಅವಳ ಮನೆಯವರ ಪ್ರೀತಿಗೆ ಪಾತ್ರನಾಗಿದ್ದ. ಯಾವುದೇ ತೊಂದರೆ ಬೇಡ ಅಂತ ತನ್ನ ಮನೆಯವರಿಗೂ ವಿಷಯ ಹೇಳಿದ. ಆದರೆ ವಿಷಯ ಹುಡುಗಿ ಮನೆಯಲ್ಲಿ ಗೊತ್ತಿರಲಿಲ್ಲ. ಈ ಪ್ರೇಮಿಗಳು ಎಣಿಸಿದ್ದರು ಅವರು ಒಪ್ಪಬಹುದಂತ. ಆದರೆ ವಿಷಯ ಗೊತ್ತಾದಾಗ ಇವರ ಯೋಚನೆಗೆ ವಿರುದ್ಧವಾದ ಸ್ಥಿತಿ ಏರ್ಪಟ್ಟಿತ್ತು. ತೊಂದರೆಗಳು ಶುರುವಾದವು. ಹುಡುಗಿಯ ಕೈಇಂದ ಮೊಬೈಲ್ ಕಸಿದುಕೊಂಡರು ಇಬ್ಬರನ್ನು ದೂರ ಮಾಡಿದರು. ಆದರೆ ಹುಡುಗ ಹೀಗೆ ಆಗುತ್ತೆ, ಅವರೆಲ್ಲ ಹೀಗೆ ಮಾಡುತ್ತಾರೆ ಅಂತ ಕನಸಲು ಯೋಚಿಸಿಯೂ ಇರಲಿಲ್ಲ. ಇವನ ನಂಬಿಕೆಗೆ ಮುರಿದು ಹೋಯಿತು. ಕೆಲವು ಸಮಯದ ನಂತರ ಒಂದು ಅಮಾಯಕ ನಂಬರ್ ಇಂದ ಕಾಲ್ ಬಂದ್ದಿತ್ತು ಹುಡುಗನಿಗೆ. ಎತ್ತಿದಾಗ ಅವನ ಪ್ರೀತಿಯ ಹುಡುಗಿ ಮಾತನಾಡಿದಳು ನಾನು ಮನೆ ಬಿಟ್ಟಿದ್ದೇನೆ ನನಗೆ ಮನೆಯವರು ಬೇಡ ಅಂತ ಹೇಳಿಬಿಟ್ಟಳು. ಅವಳು ಬರುತ್ತಿರುವುದಾಗಿ ಹೇಳಿ ಕಾಲ್ ಕಟ್ ಮಾಡಿದಳು. ಅವಳು ಇಟ್ಟ ಕೂಡಲೇ ಅವಳ ಮನೆ ಇಂದ ಕಾಲ್ . ಮನೆಯ ಎಲ್ಲಾರೂ ಅಳುತ್ತಿದ್ದರು. ಅವಳ ಅಕ್ಕ ಹೇಳಿದಳು ತಂಗಿ ಕಾಣುತ್ತಿಲ್ಲ ಮನೆ ಬಿಟ್ಟು ಹೋಗಿದಾಳೆ. ನಿನೆಗೆನಾದ್ರು ಗೊತ್ತ? ದಯವಿಟ್ಟು ಹೇಳು ನಮ್ಮ ಮನೆಯ ಮರ್ಯಾದೆ ಪ್ರಶ್ನೆ ನನ್ನ ಇನ್ನೊಂದು ತಂಗಿಯ ಮದುವೇ ಕೂಡ ಇದೆ ತಿಂಗಳಲ್ಲಿ ಇದೆ ಅವಳ ಜೀವನದ ಪ್ರಶ್ನೆ, ನಮ್ಮ ತಾಯಿ ಹಾಸಿಗೆ ಹಿಡಿದಿದ್ದಾರೆ ಅವರ ಅಳು ನೋಡಲು ಆಗಲ್ಲ ಅವರ ಜೀವದ ಪ್ರಶ್ನೆ. ನಮಗಿನ್ನು ಯಾರು ಇಲ್ಲ ನಾವೆಲ್ಲ ನಿನ್ನನ್ನೇ ನಂಬಿದೇವೆ. ನಮ್ಮಲ್ಲೆರ ಜೀವನ ನೀನೆ ಉಳಿಸಬೇಕು ಅಂತ ಅಳುತಿದ್ದರು. ಹುಡುಗನಿಗೆ ಏನನಿಸಿತೋ ಗೊತ್ತಿಲ್ಲ ಆದರೆ ಅವನು ಇತರ ಮನಸುಗಳನ್ನು ನೋವು ಮಾಡಿ ಮದುವೇ ಅಗುದಕಿಂತ ಎಲ್ಲರ ನಡುವೆ ಖುಷಿಲಿ ಮದುವೇ ಅಗುದೆ ಸರಿ. ಬೇರೆಯವರ ಕಣ್ಣಿರಿಗೆ ನಾವು ರೀಸನ್ ಆಗಬಾರದು ಅದು ಅವನ ವ್ಯಕ್ತಿತ್ವ ವು ಆಗಿರಲ್ಲ. ತಕ್ಷಣ ಹೇಳುತ್ತಾನೆ ದಯವಿಟ್ಟು ಎಲ್ಲಾರೂ ಅಳುವುದನ್ನು ನಿಲ್ಲಿಸಿ ನಿಮ್ಮ ತಂಗಿಯನ್ನು ಅಮ್ಮನಿಗೆ ಮಗಳನ್ನು ಸಿಗೊವಾಗೆ ನಾನು ಮಾಡುತ್ತೇನೆ ನನ್ನ ಮೇಲೆ ನಂಬಿಕೆ ಇಡಿ. ನಿಮ್ಮ ಮಗಳು ಮನೆಗೆ ಬರುತ್ತಾಳೆ ಅಂತ ಮಾತುಕೊಟ್ಟು ಅವರ ಅಳುವನ್ನು ನಿಲ್ಲಿಸಿದ. ಮತ್ತು ಅವಳನ್ನು ನಿಲ್ಲಿಸಿ ಅವಳಿಗೆ ಹೇಳಿದ ನೀನು ಮಾಡುತ್ತಿರುವದು ತಪ್ಪು ನನ್ನ ಪ್ರೀತಿಗೋಸ್ಕರ ನಿನ್ನ ಹೆತ್ತು ಹೊತ್ತ ಕುಟುಂಬವನ್ನು ಬಿಟ್ಟು ಬಂದು ಅವರ ಜೀವನಕ್ಕೆ ನೀನು ಫುಲ್ ಸ್ಟಾಪ್ ಆಗುತ್ತಿಯ. ಅವರಿಟ್ಟ ನಂಬಿಕೆಗೆ ಮೋಸ ಮಾಡಬೇಕ ? ಇದು ತಪ್ಪು ಆದರೆ ನನಗು ನಿನ್ನ ಬಿಟ್ಟು ಇರಲು ಆಗೋದಿಲ್ಲ ಆದರೆ ಇತರ ಮೋಸ ಮಾಡಿ ಓಡಿ ಬಂದದು ತಪ್ಪು.. ಆದರೆ ಹುಡುಗಿ ಇವನ ಯಾವ ಮಾತನ್ನು ಕೇಳಲು ತಯಾರಿರಲಿಲ್ಲ ಅವಳಿಗೆ ತುಂಬಾ ಹಿಂಸೆ ಮನೆಯಲ್ಲಿ ಕೊಟ್ಟಿದ್ದರು. ಹುಡುಗ ಹುಡುಗಿಯ ಅಕ್ಕನಿಗೆ ಬರಲು ಹೇಳಿದ. ಅವರು ಬಂದಾಗ ಅವರು ಮತುಕೊಟ್ಟರು ನಿಮ್ಮ ಪ್ರೀತಿಗೆ ನಾವು ಅಡ್ಡಿ ಬರಲ್ಲ ನಿಮ್ಮ ಮದುವೇ ನಾವು ಮಾಡಿಸ್ತೇವೆ ಅಂತ. ಆದರು ಹುಡುಗಿ ಒಪ್ಪಲಿಲ್ಲ. ಹುಡುಗ ಕೊನೆಗೊಂದು ಮಾತು ಹೇಳಿದ ನನ್ನಮೇಲೆ ನಂಬಿಕೆ ಇದ್ದರೆ ಮನೆಗೆ ಹೋಗು. ಅವರು ಹೇಳಿದ್ದಾರಲ್ಲ ಇನ್ನು ಎಲ್ಲಾನು ಸರಿ ಆಗುತ್ತೆ ಹೋಗು ಅಂತ ಸಮಾಧಾನ ಮಾಡಿ ಕಳುಹಿಸಿದ. ಹುಡುಗಿಯ ಅಕ್ಕ ಹುಡುಗನಿಗೆ ನೀನೆ ನಮ್ಮ ದೇವರು ನಮ್ಮ ಜೀವ ಉಳಿಸಿದವ ಅಂದರು. ಹುಡುಗ ನಂಬಿಕೆ ಉಳಿಸಿಕೊಂಡ. ಆದರೆ ಕಥೆ ಮುಗಿಯಲಿಲ್ಲ. ಇಲ್ಲಿ ಮಾತು ಕೊಟ್ಟ ಕುಟುಂಬ ಪುನಃ ಇವನಿಗೆ ಮೋಸಾನೆ ಮಾಡಿತು. ಅವರ ನಂಬಿಕೆ ಉಳಿಸಿಕೊಂಡ ಇವನ ನಂಬಿಕೆ ಅವರು ಉಳಿಸಿಕೊಳ್ಳಲಿಲ್ಲ. ಇವನು ಕಾಲ್ ಮಾಡಿದಾಗ ಅವಳ ಅಕ್ಕ ಬೈದು ಇನ್ನು ಮಾಡಬೇಡ ಅಂದು ಕಾಲ್ ಇಟ್ಟರು. ಇವನ ನಂಬಿಕೆ ಅನ್ನೋ ಕಟ್ಟಡ ಕುಸಿದು ಬಿದ್ದಿತ್ತು. ವಿಧಿ ಆಟ ಏನು ನೋಡಿ ಹುಡುಗಿಯ ಮನೆಯವರು ಮೋಸದಾಟ ಆಡಿದರು. ಆದರೆ ಪ್ರೀತಿ ಮಾಡಿದ ಹುಡುಗಿ ಇವರ ಮೋಸವನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡಳು. ಹುಡುಗ ಕೊರಗುತ್ತ ಹಾಸಿಗೆ ಹಿಡಿದು ಕೊನೆಗೆ ಅವನು ಸತ್ತು ಹೋದನು. ಅವರ ಪ್ರೀತಿ ಮಾತ್ರ ಜೀವಂತವಾಗಿದ್ದು.. ಅಮರವಾಗಿದ್ದರು..

ಹ್ರದಯಗಳೇ ಇದೊಂದು ನಿಜವಾದ ಪ್ರೇಮ ಕಥೆ...

ಹ್ರದಯಗಳೇ ಇದೊಂದು ನಿಜವಾದ ಪ್ರೇಮ ಕಥೆ ನಮ್ಮ ನಡುವೆ ಇರೋ ಒಬ್ಬ ಸ್ನೇಹಿತನದ್ದು. ಈ ಪ್ರೀತಿ 6 ವರ್ಷ ಗಟ್ಟಿ ಆಗಿದ್ದು ಮೊನ್ನೆ ಮೊನ್ನೆ ಕಣ್ಣಿರ ಕೊನೆಕಂಡದ್ದು. ಫೇಸ್ಬುಕ್ ಗೆಳೆಯರ ಸಾಕಷ್ಟು ಕಥೆಯನ್ನ ಬರೆದ ನನಗೆ ಇದೊಂದು ಸ್ವಲ್ಪ ವಿಚಿತ್ರವಾಗಿದೆ ಅನಿಸುತ್ತೆ.. ಏನೇ ಅಗಲಿ ಈ ವ್ಯಕ್ತಿಯ ಕಥೆಯನ್ನು ಇದ್ದ ಹಗೆ ಹೇಳಿಬಿಡುತ್ತೇನೆ ಏನು ಸೇರಿಸದೆ... 6 ವರ್ಷದ ಹಿಂದೆ ಈ ಪ್ರೀತಿ ಪ್ರಾರಂಭವಾಗಿದ್ದು ಹುಡುಗ ಹುಡುಗಿ ದೂರದ ಸಂಭಂಧಿಕರಾಗಿದ್ದು ಹೀಗೆ ಫ಼ಂಕ್ಸನ್ ಗಳಲ್ಲಿ ಸಿಕ್ಕಿ ಮುಂದೆ ಸ್ನೇಹವಾಗಿ ಸ್ನೇಹ ಪ್ರೀತಿ ಆಗಿ ತುಂಬಾನೇ ಪ್ರೀತಿ ಮಾಡುತ್ತಾರೆ.. ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿ ಬದುಕುತ್ತಾರೆ.. ಅವಳ ಖುಷಿ ಅವನ ಖುಷಿ ಅವನ ದುಃಖ ಅವಳ ದುಃಖ ಏನಾದರೂ ಹಂಚಿಕೊಳ್ಳುತ್ತಾರೆ.. ಏನಾದರೂ ಇದೆ ಪ್ರೀತಿ ಅಲ್ವ ಹ್ರದಯಗಳೇ.. ಹುಡುಗ ಆಗಾಗ ಬಿಯರ್ ಸಿಗರೆಟ್ ಅಂತ ಅಪರೂಪ ಇಂತ ಕೆಟ್ಟ ಅಬ್ಯಾಸಗಳನ್ನು ಹೊಂದಿದ್ದ. ಅದು ಹುಡುಗಿಗೆ ತಿಳಿದು ಅದನ್ನೆಲ್ಲ ಬಿಟ್ಟು ಬಿಡು ಅಂತ ಸಹ ಹೇಳಿದ್ದಳು. ಪ್ರೀತಿ ಅಂದ್ರೆ ಹಾಗೆ ನೋಡಿ ಹುಡುಗ ಹುಡುಗಿಯ ಮಾತನ್ನು ಕಡೆಗಣಿಸದೆ ಎಲ್ಲ ಕೆಟ್ಟ ಅಭ್ಯಾಸಗಳನ್ನ ಬಿಟ್ಟು ಬಿಟ್ಟ.. ಹೀಗೆ ಅವರ ಪ್ರೀತಿ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿತ್ತು. ಅವರ ಪ್ರೀತಿ ವಿಷಯ ಎರಡು ಮನೆಯವರಿಗೂ ತಿಳಿದಿತ್ತು ಅವರು ಇವರ ಪ್ರೀತಿಗೆ ಸಮ್ಮತಿಸಿದ್ದರು. ಅಂದರೆ ಇವರಿಗೆ ಯಾವುದೇ ತೊಂದರೆ ಇರಲಿಲ್ಲ. ಹುಡುಗ ಹುಡುಗಿಯ ಬಗ್ಗೆ ತುಂಬಾನೇ ಕಾಳಜಿ ವಹಿಸುತಿದ್ದ ತಾನೆಷ್ಟು ಬ್ಯುಸಿ ಇದ್ದರು ಅವಳಿಗೆ ಸಮಯವನ್ನ ಕೊಡುತಿದ್ದ. ಅವಳ ಓದಿಗೆ ಯಾವತ್ತು ಅಡಿ ಆಗಲಿಲ್ಲ ಬದಲು ಅವಳ ಓದಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದ. ಅವರ ಪ್ರೀತಿಗೆ 5 ವರ್ಷ ಕಳೆದು ಹೋಯಿತು. ಹುಡುಗಿಯ ಓದು ಸಹ ಮುಗಿಯಿತು. ಮುಂದೆ ಅವಳು ಕೆಲಸ ಮಾಡಬೇಕೆಂದು ಬೆಂಗಳೂರು ಹೊರಡಲು ನಿರ್ಧರಿಸದಳು. ಹುಡುಗ ಅದಕ್ಕೂ ಅವಳಿಗೆ ಅಡ್ಡಿ ಬರಲಿಲ್ಲ. ಹೋಗು ಅಂತ ಪ್ರೀತಿ ಇಂದಲೇ ಕಳುಹಿಸಿದ. ಆ 5 ವರ್ಷ ಅವನ ಪ್ರೀತಿಲಿ ಅವಳಿಗೆ ಕಾಳಜಿ ತೋರುತಿತ್ತು. ಮುಂದೆ ಬೆಂಗಳೂರು ಸೇರಿದ ಹುಡುಗಿಯನ್ನು ನೋಡಲು ಆಗಾಗ ಈ ಹುಡುಗ ದೂರದ ಬೆಂಗಳೂರಿಗೆ ಸಹ ಹೋಗುತ್ತಿದ್ದ. ಅವಳ ಮೇಲಿದ್ದ ಪ್ರೀತಿ ಅವಳ ನೋಡಲು ಬೆಂಗಳೂರಿಗೆ ಎಳೆದುಕೊಂಡು ಹೋಗುತ್ತಿತ್ತು. 2 ತಿಂಗಳು ಕಳೆಯಿತು ಹುಡುಗಿ ಬೆಂಗಳೂರು ಸೇರಿ.. ಮೊದಮೊದಲು ಒಬ್ಬರನೊಬ್ಬರು ಬಿಟ್ಟಿರಲಿಕ್ಕೆ ಆಗದ ಅವಳು ಯಾವಾಗಲು ಮೊಬೈಲ್ ಅಲ್ಲಿ ಸಂಪರ್ಕದಲ್ಲಿ ಇರುತಿದ್ದಳು. ಕಾಲಕ್ರಮೇಣ ಇವಳು ಹುಡುಗನಿಗೆ ಸಮಯ ನೀಡಲು ಮರೆತೇ ಬಿಟ್ಟಂತೆ ಇದ್ದಳು. ಅಪರೂಪ ಮೊಬೈಲ್ ಅಲ್ಲಿ ಸಂದೇಶ ಕಳುಹಿಸುತ್ತ ಇದ್ದಳು. ಆದರೆ ಹುಡುಗನಿಗೆ ಸಡನ್ ಆಗಿ ಅವಳ ಈ ವಿಚಿತ್ರ ರೀತಿಯು ತಲೆಯಲ್ಲಿ ನಾನ ರೀತಿಯ ನೋವುಗಳನ್ನು ಹುಟ್ಟಿಸಿದವು. ಅವಳ ಪ್ರೀತಿಯಲ್ಲಿ ಏನ ಕೊರತೆ ತೋರಲು ಸುರು ಆಯಿತು. ಇವನು ಅವಳನ್ನು ತುಂಬಾನೇ ಪ್ರೀತಿಸಿದ್ದ. ಅವಳೇ ಕೊನೆ ಪ್ರೀತಿ ಅಂದುಕೊಂಡಿದ್ದ. ಆದರು ಅವಳಿಗೆ ಕಾಳಜಿ ವಹಿಸುತ್ತ ಪ್ರೀತಿ ಇಂದಲೇ ಮಾತಾಡುತ್ತಿದ್ದ. ಆದರೆ ಅವಳಿಗೆ ಅವನ ಪ್ರೀತಿಯಾ ಕಾಳಜಿ ಕಿರಿಕಿರಿ ಆಗಲು ಸುರು ಆಯಿತು. ನೋಡಿ 5 ವರ್ಷದ ಮೊದಲು ಅದೇ ಪ್ರೀತಿ ಕಾಳಜಿ ಪ್ರೀತಿ ತರನೇ ತೋರುತ್ತಿದ್ದ ಅವಳಿಗೆ ಈಗ ಅವನ ಪ್ರೀತಿ ಕಿರಿಕಿರಿ ಆಗಲು ಶುರು ಆಯಿತು. ಅವನಿಗೆ ಅವನ ಪ್ರೀತಿ ಕಳೆದೊಗುತ್ತೆ ಅನ್ನೋ ಭಯ ಶುರು ಆಯಿತು. ಅವಳ ಮನ ವಲಿಸಲು ತುಂಬಾ ಪ್ರಯತ್ನ ಮಾಡಿದ... ಕೊನೆಗೆ ಅವಳು ಮಾತಾಡುವುದೇ ಬಿಟ್ಟಾಗ ಅವನು ಅವಳನ್ನು ಸಂಪರ್ಕಿಸಲು ಬೆಂಗಳೂರಿಗೆ ಹೋದನು.. ಅಲ್ಲಿ ಅವಳಲ್ಲಿ ಮಾತಾಡಲು ಸಮಯವನ್ನು ಕೇಳಿದಾಗ ಅವಳು ನನಗೆ ಸಮಯವಿಲ್ಲ.. ಮಾತಾಡಲು ಇಷ್ಟಾನು ಇಲ್ಲ.. ಕೊನೆಗೆ 2 ನಿಮಿಷ ಮಾತಾಡು ಅಂದಾಗ ಒಪ್ಪಿದ ಆಕೆಯಲ್ಲಿ ಇವನು ಕೇಳಿದ ಪ್ರಶ್ನೆ ಯಾಕೆ ಹೀಗೆ ಮಾಡುತ್ತಿದ್ದಿ ಅಂದಾಗ ಅವಳು ಕೊಟ್ಟ ಅರ್ಥವಿಲ್ಲದ ಉತ್ತರ ನನಗು ನಿನಗೂ ಒಂದಾಗಿ ಇರಲು ಆಗೋದಿಲ್ಲ ನಿನ್ನ ಕ್ಯಾರೆಕ್ಟೆರ್ ನನ್ನ ಕ್ಯಾರೆಕ್ಟೆರ್ ಬೇರೆ ಬೇರೆ ಇಬ್ಬರಿಗೂ ಸರಿ ಆಗಲ್ಲ.. ಇಲ್ಲಿಗೆ ಮುಗಿಸಿಬಿಡು.. ಇನ್ನೇನು ಇಲ್ಲ ಅಂತ ಹೇಳಿ ಹೊರಟು ಹೋದಳು. 6 ವರ್ಷ ಪ್ರೀತಿ ಮಾಡಿದ ಇವಳಿಗೆ ಮೊದಲೆಲ್ಲು ಅನಿಸದ ಹೊಂದಾಣಿಕೆ ಬಗ್ಗೆ 6 ವರ್ಷದ ಬಳಿಕ ಅನಿಸಿತು. 6 ವರ್ಷದಲ್ಲಿ ಇಬ್ಬರಿಗೂ ಸರಿ ಹೊಂದಲ್ಲ ಅನ್ನೋದು ತಿಳಿಯದ ಮೂಡದ ಇವಳಿಗೆ 6 ವರ್ಷದ ನಂತರ ಅನಿಸಿತು. ಇದಕ್ಕೆ ಉತ್ತರವೇ ಇಲ್ಲ... ಆ ಸ್ನೇಹಿತನ ಮನಸು ಒಡೆದೋಯಿತು.. ಕಣ್ಣೀರೆ ಜೊತೆಯಾಯಿತು ..

ಯಾರು ತುಂಬಾ ಖುಷಿಯಾಗಿದ್ದಾರೆ? ಕಾಗೆ ಮತ್ತು ನವಿಲು...

ಯಾರು ತುಂಬಾ ಖುಷಿಯಾಗಿದ್ದಾರೆ? ಕಾಗೆ ಮತ್ತು ನವಿಲು...
ಒಂದು ಕಾಗೆ ಕಾಡಿನ ಮಧ್ಯ ಜೀವಿಸುತ್ತಿತ್ತು. ತನ್ನ ಜೀವನದ ಬಗ್ಗೆ ತ್ರಪ್ತಿ ಇದ್ದಿತ್ತು. ಒಂದು ದಿನ ಅದು ಹಂಸವನ್ನ ನೋಡಿತು. ಆ ಹಂಸವು ತುಂಬಾ ಬಿಳಿಯಾಗಿ ಇತ್ತು. ಕಾಗೆ ಯೋಚಿಸಿತು ನಾನು ತುಂಬಾ ಕಪ್ಪು , ಆ ಹಂಸವೇ ಜಗತ್ತಿನ ಪಕ್ಷಿಗಳಲ್ಲೇ ತುಂಬಾ ಖುಷಿಯಗಿರೋ ಪಕ್ಷಿ ಅಂದುಕೊಂಡಿತು.
ಅದು ತನ್ನ ಮನಸಿನ ಮಾತುಗಳನ್ನು ಹಂಸದಲ್ಲಿ ಕೇಳಿತು. ಹಂಸವು ಅದಕ್ಕೆ ಉತ್ತರ ನೀಡುತ್ತ ಹೇಳಿತು, ನಾನು ತುಂಬಾ ಖುಷಿಯಗಿರೋ ಪಕ್ಷಿ ಆಗಿದ್ದೆ ಅದು ಗಿಳಿಯನ್ನು ನೋಡೋ ಮೊದಲು ಯಾಕಂದರೆ ಅದಕ್ಕೆ ಎರಡು ಬಣ್ಣಗಳಿವೆ. ಈಗ ನಾನು ಯೋಚಿಸುದು ಆ ಗಿಳಿಯೇ ಜಗತ್ತಿನ ಎಲ್ಲ ಪಕ್ಷಿಗಳಿಗಿಂತ ತುಂಬಾ ಖುಷಿಯಗಿರೋ ಪಕ್ಷಿ. ತಕ್ಷಣ ಕಾಗೆಯು ಗಿಳಿಯಲ್ಲಿಗೆ ಹೋಗಿ ಅದೇ ಮಾತನ್ನ ಕೇಳಿತು. ಗಿಳಿ ಹೇಳಿತು, ನಾನು ತುಂಬಾ ಖುಷಿ ಇಂದ ಜೀವಿಸುತ್ತಿದ್ದೆ ಆ ನವಿಲನ್ನು ನೋಡೋ ಮೊದಲು ತುಂಬಾ ಖುಷಿಯಾಗಿ. ನನಗೆ ಇರುವುದು ಎರಡೆ ಬಣ್ಣ ಆದರೆ ನವಿಲಿಗೆ ತುಂಬಾ ಬಣ್ಣ ಇದೆ. ಅವೆಲ್ಲರ ಮಾತು ಕೇಳಿ ಕೊನೆಗೆ ನವಿಲನ್ನು ಬೇಟಿ ಮಾಡಲು ಪಕ್ಷಿಧಾಮಕ್ಕೆ ಹೋಯಿತು. ಅಲ್ಲಿ ಸಾವಿರಾರು ಜನ ನವಿಲ್ಲನ್ನು ನೋಡಲು ನಿಂತಿದ್ದರು. ಎಲ್ಲರು ಹೋದಮೇಲೆ ನವಿಲಲ್ಲಿ ಕಾಗೆಯು ಮಾತಾಡಲು ಶುರುಮಾಡಿತು. ಓ ನವಿಲೇ ನೀನೆಷ್ಟು ಚಂದ ನಿನ್ನ ನೋಡಲು ದಿನಾಲೂ ಸಾವಿರಾರು ಜನ ಬರುತ್ತಾರೆ. ಆದರೆ ಜನರು ನನ್ನ ನೋಡಿದಾಕ್ಷಣ ಕಲ್ಲು ಎಸೆದು ಓಡಿಸುತ್ತಾರೆ. ನನಗನಿಸುತ್ತೆ ಪ್ರಪಂಚದಲ್ಲಿ ಅತಿ ಖುಷಿಯಗಿರೋ ಪಕ್ಷಿ ಅಂದರೆ ನೀನೆ ಅಲ್ಲವೇ ...
ಅದಕ್ಕೆ ನವಿಲು ಉತ್ತರಿಸಲು ಶುರು ಮಾಡಿತು, ನಾನು ಯಾವಾಗಲು ಯೋಚಿಸುದು ನಾನೆ ಅತೀ ಖುಷಿಯಗಿರೋ ಪಕ್ಷಿ ಅಂತ ಎಲ್ಲ ನನ್ನ ಅಂದ ಚಂದದಿಂದ. ಆದರೆ ನನ್ನ ಪಕ್ಷಿ ಸಂಗ್ರಹಾಲಯದಲ್ಲಿ ಕೂಡಿಹಾಕಿದ್ದಾರೆ. ನಾನು ಸಂಗ್ರಹಾಲಯವನ್ನು ತುಂಬಾ ಗಮನಿಸಿದಾಗ ಅರಿವಾದದ್ದು ಕಾಗೆಯನ್ನು ಯಾರು ಕೂಡಿಹಾಕೋದಿಲ್ಲ. ಅದರಿಂದ ಸ್ವಲ್ಪದಿನದಿಂದ ಯೋಚಿಸುದು ನಾನು ಕಾಗೆ ಆಗಿದ್ದರೆ ಸ್ವತಂತ್ರ ವಾಗಿ ಎಲ್ಲೂ ಹಾರಾಡಿಕೊಂಡು ಇರಬಹುದು ಅಂತ.
" ಇದು ನಮ್ಮ ಎಲ್ಲರ ಸಮಸ್ಯೆ ಕೂಡ. ನಾವು ಬೇರೆಯವರೊಂದಿಗೆ ಅಗತ್ಯವಿಲ್ಲದ ಹೋಲಿಕೆ ಮಾಡುತ್ತೇವೆ ಮತ್ತು ಧುಖಿಸಲು ಶುರುಮಾಡುತ್ತೇವೆ. ನಮಗೆ ದೇವರು ಏನು ಕೊಟ್ಟಿದ್ದಾನೆ ಅದಕೆ ಬೆಲೆ ಕೊಡುವುದನ್ನು ಮರೆಯುತ್ತೇವೆ. ಇದು ಎಲ್ಲ ತರದ ದುಃಖಕ್ಕೂ ಕಾರಣವಾಗುತ್ತೆ. ನಾವು ಯಾವಾಗಲು ನಮ್ಮಲ್ಲೆನಿದೆ ಅದಕ್ಕೆ ಖುಷಿಪಡಬೇಕು ನಮ್ಮಲ್ಲಿ ಇಲ್ಲದಕ್ಕೆ ದುಃಖ ಪಡೋ ಬದಲು. ಈ ಜಗತ್ತಲ್ಲಿ ಎಲ್ಲರು ನಮಗಿಂತ ಎಲ್ಲದರಲ್ಲೂ ಸ್ವಲ್ಪ ಹೆಚ್ಚು ಕಮ್ಮಿ ಹೊಂದಿರುತ್ತಾರೆ. ಯಾವ ಮನುಷ್ಯನು ತನ್ನಲ್ಲಿರುವುದಕ್ಕೆ ತಾನಿರುವುದಕ್ಕೆ ತ್ರಪ್ತಿ ಹೊಂದಿರುತ್ತನೋ ಅವನೇ ಜಗತ್ತಿನ ಅತೀ ಹೆಚ್ಚು ಖುಷಿಯಗಿರೋ ವ್ಯಕ್ತಿ ".

ಇದೊಂದು ದುಃಖದ ಲವ್ ಸ್ಟೋರಿ..



ಇದೊಂದು ದುಃಖದ ಲವ್ ಸ್ಟೋರಿ. ಈ ಸ್ಟೋರಿ ಲಿ ಹುಡುಗಿ ಹುಡುಗನಿಗೆ ಪ್ರಪೋಸ್ ಮಾಡುತ್ತಾಳೆ.ಹುಡುಗ ಒಪ್ಪಿಗೆಯನ್ನು ಸೂಚಿಸುತ್ತಾನೆ. ಹುಡುಗಿ ಯಾವಾಗಲು ಅವನಲ್ಲಿ ಮಾತನಾಡುವಾಗ ಹೇಳುತ್ತಿದ್ದಳು ನಿನ್ನಲಿರುವುದು ನನ್ನ ಹ್ರದಯ ನನ್ನಲ್ಲಿರುವುದು ನಿನ್ನ ಹ್ರದಯ ಅನ್ನುತ್ತಿದ್ದಳು. ಹುಡುಗನು ಅವಳ ಪ್ರೀತಿಯನ್ನು ತುಂಬಾನೇ ಮನಸಿಗೆ ಹಚ್ಚಿಕೊಂಡಿದ್ದನು.
ಹೀಗೆ ಒಂದು ವರ್ಷದ ಬಳಿಕ ಹುಡುಗಿ ಸಡನ್ ಆಗಿ ಹುಡುಗನ ಬಳಿ ಬಂದು ನಾವು ಮದುವೆ ಆಗಲು ಆಗೋದಿಲ್ಲ. ಮನೆಯಲ್ಲಿ ಸ ಯಾರು ಒಪ್ಪಲ್ಲ ನಾವು ಸ್ನೇಹಿತರಾಗೆ ಇರುವ ಅಂದುಬಿಟ್ಟಳು. ಹುಡುಗನಿಗೆ ಮಾತೆ ಹೊರಡಲಿಲ್ಲ ಯಾಕೆಂದರೆ ಅವನು ಅವಳನ್ನು ಇಷ್ಟಪಟ್ಟಷ್ಟು ಲೋಕದಲ್ಲಿ ಯಾರು ಅವಳನ್ನು ಇಷ್ಟಪಟ್ಟಿರಲಿಕ್ಕಿಲ್ಲ. ಆದರೆ ಹುಡುಗಿ ಹಾಗೆ ಹೇಳಿ ಸಿದಾ ಹೋದಳು. ಹುಡುಗ ಕುಸಿದು ಬಿದ್ದು ಅಲ್ಲೇ ಅತ್ತುಬಿಟ್ಟ.
ಕೆಲವೇ ತಿಂಗಳಲ್ಲಿ ಆ ಹುಡುಗಿಯ ಮದುವೆ ಇನ್ನೊಂದು ಹುಡುಗನ ಜೊತೆ ಆಯಿತು. ಮದುವೆಯ 2 ದಿನದ ನಂತರ ಹುಡುಗಿ ಮದುವೇಲಿ ಬಂದ ಗಿಫ್ಟ್ ಗಳನ್ನು ನೋಡಲು ಶುರು ಮಾಡಿದಳು. ಒಂದು ಗಿಫ್ಟ್ ನೋಡಿ ಅಳಲು ಪ್ರಾರಂಬಿಸಿದಳು. ಆ ಗಿಫ್ಟ್ ಅಲ್ಲಿ ಒಂದು ಗಾಜಿನ ಬಾಕ್ಸ್ ಒಳಗೆ ಒಂದು ಹ್ರದಯ ರಕ್ತದ ಮಡುವಿನಲ್ಲಿ ಇತ್ತು. ಮತ್ತು ಆ ಗಾಜಿನ ಗ್ಲಾಸ್ ಹೊರಗೆ ಒಂದು ಚಿಟಿ ಅಂಟಿತ್ತು. ಅದನ್ನು ಅವಳು ಓದಿದಾಗ ಅದರಲ್ಲಿ ಹೀಗಿತ್ತು "ಕತ್ತೆ ನಿನ್ನ ಹ್ರದಯ ನನ್ನಲ್ಲಿ ಇದೆ ಅಲ್ವ ಮತ್ತೆ ನಿನ್ನ ಗಂಡನಿಗೆ ಏನನ್ನ ಕೊಡುತ್ತಿಯಾ..?" ನಿನ್ನ ಹ್ರದಯ ನಿನಗೆ ಕಳುಹಿಸಿದ್ದೇನೆ ನನ್ನದನ್ನ ನನಗೆ ಹಿಂದೆ ಕೊಡಲು ನಿನ್ನಲ್ಲಿ ಆಗುತ್ತ ?? by Puttaheart.

Ondu Hrudayada Kathe

ಒಬ್ಬ ಹುಡುಗ ಒಂದು ಹುಡುಗಿಯನ್ನ ತುಂಬಾನೇ ಪ್ರೀತಿ ಮಾಡುತ್ತಿರುತ್ತಾನೆ. ಮುಂದೆ ಅವರು ಪ್ರೀತಿನು ಮಾಡುತ್ತಾರೆ. ಒಂದೆರಡು ವರ್ಷದ ಬಳಿಕ ಒಂದು ದಿನ ಹುಡುಗಿ ತನ್ನ ಹುಡುಗನಲ್ಲಿ ಕೇಳುತ್ತಾಳೆ ನನ್ನ ಮುಂದಿನ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡುತ್ತಿಯ ಅಂತ. ಅದಕ್ಕೆ ಹುಡುಗ ತುಂಬಾ ಸಿಲ್ಲಿ ಆಗಿ ಇನ್ನು ಸಮಯವಿದೆಯಲ್ಲ ಈಗೇಕೆ ಅದು ಬಂದ ದಿನ ನೋಡುವ ಅನ್ನುತ್ತಾನೆ. ಹುಡುಗಿಗೆ ತುಂಬಾನೇ ಬೇಸರವಾಗುತ್ತೆ. ಮತ್ತೇನು ಕೇಳಲು ಹೋಗಲ್ಲ. 
ಹುಡುಗಿಯ ಹುಟ್ಟುಹಬ್ಬಕ್ಕೆ 3 ದಿನ ಬಾಕಿ ಇದ್ದಾಗ ಹುಡುಗಿ ಅನಾರೋಗ್ಯದ ಕಾರಣ ಆಸ್ಪತ್ರೆ ಸೇರುತ್ತಾಳೆ. ಡಾಕ್ಟರ್ ಎಲ್ಲವನ್ನು ಪರೀಕ್ಷಿಸಿ ಹೊರಬಂದು ಅವಳ ಕುಟುಂಬದವರಲ್ಲಿ ಈ ರೀತಿ ಹೇಳುತ್ತಾರೆ,"ನಿಮ್ಮ ಮಗಳ ಹ್ರದಯದಲ್ಲಿ ಚಿಕ್ಕ ತೂತಿದೆ ಅವಳು ಬದುಕೋದು ತುಂಬಾನೇ ಡೌಟ್" ಅಂದರು . ಈ ವಿಷಯ ಹುಡುಗನಿಗೆ ತಿಳಿಯಿತು ಅವನು ತುಂಬಾನೇ ಬೇಸರದಲ್ಲಿ ಮುಳುಗಿದ. ತನ್ನ ಪ್ರೀತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕು ಅಂತ ಅಂದುಕೊಂಡ. ತಕ್ಷಣ ಅದೇ ಡಾಕ್ಟರ್ ಗೆ ಕಾಲ್ ಮಾಡಿ ತನ್ನ ಹ್ರದಯವನ್ನು ಅವಳಿಗೆ ಜೋಡಿಸಿ ಅಂತ ಹೇಳಿದ ಆದರೆ ಡಾಕ್ಟರ್ ಒಪ್ಪಲ್ಲ ಕಾರಣ ಒಂದು ಜೀವನ ಕೊಂದು ಇನ್ನೊಂದು ಜೀವನ ಉಳಿಸೋದು ಅವರ ಕರ್ತವ್ಯ ಆಗಿರಲ್ಲ. ಆದರೆ ಹುಡುಗ ಬೇಸರದಲ್ಲಿ ಎರಡು ಲೆಟರ್ ಬರೆಯುತ್ತಾನೆ ಒಂದನ್ನ ಹುಡುಗಿಯ ಮನೆಯಲ್ಲಿ ಇನ್ನೊಂದನ್ನ ತನ್ನ ಜೇಬಿನಲ್ಲಿ ಇಡುತ್ತಾನೆ. ತಕ್ಷಣ ಅಲ್ಲಿಂದ ಹಾಸ್ಪಿಟಲ್ ಹೊರಡುತ್ತಾನೆ. ಆಸ್ಪತ್ರೆಯ ಹತ್ತತ್ರ ಬರೋವಾಗ ಅವನಿಗೆ ಆಕ್ಸಿಡೆಂಟ್ ಆಗಿಬಿಡುತ್ತೆ. ಅವನು ಸಾಯೋ ಸ್ಥಿತಿಲಿದ್ದ. ಅಂತ ಸ್ಥಿತಿಲು ಅವನು ಜೇಬಿಂದ ಲೆಟರ್ ತೆಗೆದು ಕೈಲಿ ಹಿಡಿದು ದಾರಿಲಿ ಹೋಗುತಿದ್ದ ಒಬ್ಬರು ಅವನತ್ರ ಬಂದಂತೆ ಅವರಿಗೆ ಆ ಲೆಟರ್ ಕೊಟ್ಟು ಸರ್ ಪ್ಲೀಸ್ ನಾನ್ ಸಾಯೋ ಮುಂಚೆ ಈ ಹಾಸ್ಪಿಟಲ್ ಗೆ ಸೇರಿಸಿ ಅವರಿಗೆ ಈ ಲೆಟರ್ ಕೊಡಿ ಪ್ಲೀಸ್ ಸರ್ ಅಂದುಬಿಟ್ಟ. ತಕ್ಷಣ 108 ಅಂಬುಲೆನ್ಸ್ ಮೂಲಕ ತಕ್ಷಣ ಆ ಆಸ್ಪತ್ರೆಗೆ ಕರೆತರಲಾಯಿತು. ಡಾಕ್ಟರ್ ಅಲ್ಲಿ ಹುಡುಗ ಹೇಳಿದ "ಡಾಕ್ಟರ್ ದಯವಿಟ್ಟು ಅವಳಿಗೆ ನನ್ನ ಹ್ರದಯ ಜೋಡಿಸಿ ಅಂತ ಆ ಲೆಟರ್ ಕೊಟ್ಟ. ಡಾಕ್ಟರ್ ಇವನು ಸಾಯೋ ಸ್ಥಿತಿಲಿ ಇರೋದರಿಂದ ತಕ್ಷಣ ಒಪರೆಷನ್ ಥಿಯೇಟರ್ ಗೆ ಹೋದರು ಅವನಿಗೆ ಮಾತು ಕೊಟ್ಟರು. ಮತ್ತು ಅವನ ಹ್ರದಯವನ್ನ ಹುಡುಗಿಗೆ ಕಷಿ ಮಾಡಿದರು. ಹುಡುಗ ಕಣ್ಣು ಮುಚ್ಚಿದ ಉಸಿರಾರಿಹೋಗಿತ್ತು. ಸ್ವಲ್ಪ ದಿನದ ನಂತರ ಹುಡುಗಿಗೆ ಡಿಸ್ಚಾರ್ಜ್ ಆಯಿತು ಅವಳು ಮನೆಗೆ ಬಂದಾಗ ಅವಳ ಕೈಗೆ ಆ ಲೆಟರ್ ಸಿಕ್ಕಿತು. ಅದರಲ್ಲಿ ಹೀಗೆ ಬರೆದಿತ್ತು " ಗೆಳತಿ ಅಂದು ನೀನು ನಿನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ಏನು ಕೊಡುತ್ತಿಯ ಕೇಳಿದ್ದಿ. ಆದರೆ ಅಂದು ನನಗೆ ಅತ್ಯುತ್ತಮ ಉಡುಗೊರೆ ಆಗಿ ಏನನ್ನ ಕೊಡಲಿ ಅನ್ನೋ ತಿಳುವಳಿಕೆಯು ಇರಲಿಲ್ಲ. ಆದರೆ ಇಂದು ಕಂಡಿತವಾಗಿ ಒಂದು ಅತ್ಯಮೂಲ್ಯ ಉಡುಗೊರೆ ಕೊಡುತ್ತಿದ್ದೇನೆ ಅದೇ ನನ್ನ ಹ್ರದಯ ನಿನಗಾಗಿ.. ನಾನು ನನ್ನ ಹ್ರದಯವನ್ನು ನಿನಗಾಗಿ ಕೊಡುತ್ತಿದ್ದೇನೆ ಜೋಪನವಾಗಿರಿಸಿಕೋ ಮತ್ತು ಖುಷಿಖುಷಿಯಾಗಿರು ಮುಂದೆಂದು... ಇಂತೀ ನಿನ್ನ ಪ್ರೀತಿಯ ಗೆಳೆಯ"

Arthavillada Preethi...



ಇದೊಂದು ದುಃಖದ ಲವ್ ಸ್ಟೋರಿ. ಈ ಸ್ಟೋರಿ ಲಿ ಹುಡುಗಿ ಹುಡುಗನಿಗೆ ಪ್ರಪೋಸ್ ಮಾಡುತ್ತಾಳೆ.ಹುಡುಗ ಒಪ್ಪಿಗೆಯನ್ನು ಸೂಚಿಸುತ್ತಾನೆ. ಹುಡುಗಿ ಯಾವಾಗಲು ಅವನಲ್ಲಿ ಮಾತನಾಡುವಾಗ ಹೇಳುತ್ತಿದ್ದಳು ನಿನ್ನಲಿರುವುದು ನನ್ನ ಹ್ರದಯ ನನ್ನಲ್ಲಿರುವುದು ನಿನ್ನ ಹ್ರದಯ ಅನ್ನುತ್ತಿದ್ದಳು. ಹುಡುಗನು ಅವಳ ಪ್ರೀತಿಯನ್ನು ತುಂಬಾನೇ ಮನಸಿಗೆ ಹಚ್ಚಿಕೊಂಡಿದ್ದನು.
ಹೀಗೆ ಒಂದು ವರ್ಷದ ಬಳಿಕ ಹುಡುಗಿ ಸಡನ್ ಆಗಿ ಹುಡುಗನ ಬಳಿ ಬಂದು ನಾವು ಮದುವೆ ಆಗಲು ಆಗೋದಿಲ್ಲ. ಮನೆಯಲ್ಲಿ ಸ ಯಾರು ಒಪ್ಪಲ್ಲ ನಾವು ಸ್ನೇಹಿತರಾಗೆ ಇರುವ ಅಂದುಬಿಟ್ಟಳು. ಹುಡುಗನಿಗೆ ಮಾತೆ ಹೊರಡಲಿಲ್ಲ ಯಾಕೆಂದರೆ ಅವನು ಅವಳನ್ನು ಇಷ್ಟಪಟ್ಟಷ್ಟು ಲೋಕದಲ್ಲಿ ಯಾರು ಅವಳನ್ನು ಇಷ್ಟಪಟ್ಟಿರಲಿಕ್ಕಿಲ್ಲ. ಆದರೆ ಹುಡುಗಿ ಹಾಗೆ ಹೇಳಿ ಸಿದಾ ಹೋದಳು. ಹುಡುಗ ಕುಸಿದು ಬಿದ್ದು ಅಲ್ಲೇ ಅತ್ತುಬಿಟ್ಟ.
ಕೆಲವೇ ತಿಂಗಳಲ್ಲಿ ಆ ಹುಡುಗಿಯ ಮದುವೆ ಇನ್ನೊಂದು ಹುಡುಗನ ಜೊತೆ ಆಯಿತು. ಮದುವೆಯ 2 ದಿನದ ನಂತರ ಹುಡುಗಿ ಮದುವೇಲಿ ಬಂದ ಗಿಫ್ಟ್ ಗಳನ್ನು ನೋಡಲು ಶುರು ಮಾಡಿದಳು. ಒಂದು ಗಿಫ್ಟ್ ನೋಡಿ ಅಳಲು ಪ್ರಾರಂಬಿಸಿದಳು. ಆ ಗಿಫ್ಟ್ ಅಲ್ಲಿ ಒಂದು ಗಾಜಿನ ಬಾಕ್ಸ್ ಒಳಗೆ ಒಂದು ಹ್ರದಯ ರಕ್ತದ ಮಡುವಿನಲ್ಲಿ ಇತ್ತು. ಮತ್ತು ಆ ಗಾಜಿನ ಗ್ಲಾಸ್ ಹೊರಗೆ ಒಂದು ಚಿಟಿ ಅಂಟಿತ್ತು. ಅದನ್ನು ಅವಳು ಓದಿದಾಗ ಅದರಲ್ಲಿ ಹೀಗಿತ್ತು "ಕತ್ತೆ ನಿನ್ನ ಹ್ರದಯ ನನ್ನಲ್ಲಿ ಇದೆ ಅಲ್ವ ಮತ್ತೆ ನಿನ್ನ ಗಂಡನಿಗೆ ಏನನ್ನ ಕೊಡುತ್ತಿಯಾ..?" ನಿನ್ನ ಹ್ರದಯ ನಿನಗೆ ಕಳುಹಿಸಿದ್ದೇನೆ ನನ್ನದನ್ನ ನನಗೆ ಹಿಂದೆ ಕೊಡಲು ನಿನ್ನಲ್ಲಿ ಆಗುತ್ತ ?? by Puttaheart.

Ondu Sanna Munisu Beku...


ಪ್ರೀತಿ ಅಮರ...

ಒಂದು ಹುಡುಗ ಒಂದು ಹುಡುಗಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ವಿಧಿಯಾ ಆಟ ಅವರನ್ನು ದೂರ ಮಾಡಿತ್ತು. ಹುಡುಗಿಯಾ ಆಯುಷ್ಯ ಮುಗಿದಿತ್ತು ಅವಳ ಪ್ರಾಣ ಹಾರಿ ಹೋಗಿತ್ತು. ಹುಡುಗನ ತಲೆಯ ಮೇಲೆ ಆಕಾಶವೇ ಬಿದ್ದಹಾಗೆ ಇತ್ತು. ಆ ಶಾಕ್ ಅಲ್ಲಿ ಹುಡುಗ ಬದುಕಿ ಸತ್ತಂತಿದ್ದ. ಪ್ರತೀ ಕ್ಷಣ ಯೋಚಿಸುತ್ತ ಅಳುತ್ತ ನೋವಲ್ಲಿ ಮುಳುಗಿದ್ದ ಹಗಲು ರಾತ್ರಿ ಸಹಿತ. ಅವನು ಯಾರ ಮಾತುಗಳನ್ನು ಕೇಳಲು ತಯ್ಯಾರಿರಲಿಲ್ಲ. ಅವನಿಗೆ ಯಾರು ಸಂತೈಸಲು ಆಗುತ್ತಿರಲಿಲ್ಲ. ಯಾರ ಮಾತುಗಳು ಅವನ ಕಣ್ಣಿರನ್ನು ನಿಲ್ಲಿಸುತ್ತಿರಲಿಲ್ಲ. ಒಂದು ರಾತ್ರಿ ಅವನು ಮಲಗಿದ್ದಾಗ ಅವನಿಗೆ ಒಂದು ಕನಸು ಬಿದ್ದಿತು.
ಅವನು ತನ್ನ ಪ್ರೇಯಸಿಯನ್ನು ಸ್ವರ್ಗದಲ್ಲಿ ಹಲವು ತನ್ನದೇ ಏಜ್ ನ ಹುಡುಗಿಯರ ಮಧ್ಯ ಇದ್ದಳು.
ಅವನಿಗೆ ಸಮಾಧಾನವಾಯಿತು. ಆದರೆ ಅವನು ನೋಡಿದ ಎಲ್ಲಾ ಹುಡುಗಿಯರು ಸ್ವರ್ಗದ ಕಿನ್ನರಿಯರಂತೆ ಬಟ್ಟೆಯನ್ನು ತೊಟ್ಟಿದ್ದರು ಮತ್ತು ಉರಿಯುತ್ತಿರುವ ಮೇಣದ ಬತ್ತಿಯನ್ನು ಕೈಯಲ್ಲಿ ಹಿಡಿದಿದ್ದರು, ಆದರೆ ಅವನ ಹುಡುಗಿಯು ಕಿನ್ನರಿಯಾಗಿದ್ದಳು ಆದರೆ ಅವಳ ಕೈಯಲ್ಲಿರೋ ಮೇಣದ ಬತ್ತಿ ಉರಿಯುತ್ತಿರಲಿಲ್ಲ. ಅವನು ತಕ್ಷಣ ಕೇಳಿದ ಗೆಳತಿ ನಿನ್ನ ಕೈಯಲ್ಲಿರೋ ಮೇಣದಯನ್ನು ಯಾಕೆ ಹಚ್ಚಿಲ್ಲ ನೀನು ? ಅವಳು ಹೇಳಿದಳು ನಾನಂತು ಸಾಕಷ್ಟು ಪ್ರಯತ್ನಪಟ್ಟೆ ಯಾವಾಗ ನಾನು ಮೇಣದ ಬತ್ತಿ ಹಚ್ಚುತ್ತೇನೋ ನಿನ್ನ ಆ ಕಣ್ಣಿರ ಹನಿಗಳು ಅದರ ಮೇಲೆ ಬಿಳುತ್ತೆ. ದಯವಿಟ್ಟು ನೀನು ಅಳುವುದನ್ನು ನಿಲ್ಲಿಸುತ್ತಿಯಾ...
"ಪ್ರೀತಿ ಅಮರ, ಅದರ ರೀತಿ ಮಧುರ. ನಿಜವಾದ ಪ್ರೀತಿ ಒಂದನ್ನೊಂದು ಬಿಟ್ಟಿರಲ್ಲ ಮತ್ತು ಪ್ರೀತಿಯ ಕಣ್ಣಲ್ಲಿ ಕಣ್ಣಿರು ಬೀಳುವುದನ್ನು ತಡೆಯೋಲ್ಲ. ಇದು ಮನಸುಗಳ ಮಿಲನ. ಹ್ರದಯಗಳ ಕಥನ.... "