ಇದೊಂದು ಪ್ರೀತಿಯ ಪ್ರಾರಂಭವೇ ಕಾಣದ ಕಥೆ

ಇದೊಂದು ಪ್ರೀತಿಯ ಪ್ರಾರಂಭವೇ ಕಾಣದ ಕಥೆ. ಹುಡುಗ ಕೆಲಸವನ್ನು ಹುಡುಕಿಕೊಂಡು ತನ್ನ ಚಿಕಪ್ಪನ ಊರಿಗೆ ಬಂದಿರುತ್ತಾನೆ. ಅವನಿಗೆ ಫೋಟೋಗ್ರಫಿ ಅಂದರೆ ತುಂಬಾನೇ ಇಷ್ಟ ಊರಿಗೆ ಬಂದು ಸುಮ್ಮನೆ ಕೂರದೆ ತನ್ನ ಕ್ಯಾಮೆರಾ ವನ್ನು ಹಿಡಿದುಕೊಂಡು ಫೋಟೋ ತೆಗೆಯಲು ಸ್ಥಳವನ್ನು ಹುಡುಕಿಕೊಂಡು ಹೋಗುತ್ತಾನೆ ಒಂದು ರಸ್ತೆಬದಿಯ ಸೇತುವೆ ಸುಂದರವಾದ ಮರ,ಹೂವುಗಳು ಅಲ್ಲೇ ಫೋಟೋ ತೆಗೆಯಲು ಸುರುಮಾಡುತ್ತಾನೆ. ಸ್ವಲ್ಪ ಹೊತ್ತಲ್ಲೇ ಆಚೆ ಕಡೆಯಿಂದ ಒಬ್ಬಳು ಸುಂದರವಾದ ಹುಡುಗಿ ಮೊಬೈಲ್ ಲಿ ಮಾತಾಡುತ್ತ ಸೇತುವೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ. ಫೋಟೋ ತೆಗೆಯುವಾಗ ಆ ಸುಂದರ ಹುಡುಗಿ ಅವನ ಕ್ಯಾಮೆರಾದ ಕಣ್ಣಿಗೆ ಬಿಳುತ್ತವೆ. ಅವನು ಆ ಸುಂದರವಾದ ಹುಡುಗಿಯನ್ನು ಕಂಡು ಮನಸೋಲುತ್ತಾನೆ ಮತ್ತು ಅವಳ ಫೋಟೋ ತೆಗಿಯಲು ಸುರುಮಾಡುತ್ತಾನೆ. ಅವಳ ಕಣ್ಣಿಗೆ ಅವನು ತನ್ನ ಫೋಟೋ ತೆಗೆಯುದು ಕಾಣುತ್ತೆ ಮತ್ತು ಸ್ವಲ್ಪ ಸಿಟ್ಟಾಗುತ್ತಾಳೆ. ಅವನು ತುಂಬಾ ಸುಂದರನಾಗಿದ್ದ. ಅವಳು ಅವನನ್ನು ನೋಡುತ್ತಾ ಕೊಳಚೆಗೆ ಕಾಲಾಕುತ್ತಾಳೆ. ಅವನು ಅವಳನ್ನು ನೋಡಿ ನಗಾಡುತ್ತಾನೆ. ಅವಳು ಸಣ್ಣ ನಗುಬಿರುತ್ತಾಳೆ. ತಕ್ಷಣ ಅವನು ಅವಳ ಕಾಲಿಗೆ ನೀರಿನ ಬಾಟಲ್ನಿಂದ ನೀರು ಹಾಕುತ್ತಾನೆ ಕಾಲು ತೊಳೆಯುವಾಗ ಬಸ್ ಬರುತ್ತೆ ಹುಡುಗಿ ನಗುತ್ತ ಬಸ್ ಹತ್ತಿ ಹೋಗುತ್ತಾಳೆ. ಹುಡುಗ ಮನೆಗೆ ಬಂದು ಅವಳ ಫೋಟೋ ನೋಡುತ್ತಾ ಕುಳಿತುಕೊಳ್ಳುತ್ತಾನೆ. ಮರುದಿನ ಅದೇ ಸ್ಥಳದಲ್ಲಿ ಮತ್ತೆ ನಿಲ್ಲುತ್ತಾನೆ ಆ ಹುಡುಗಿ ಮತ್ತೆ ಅಲ್ಲಿ ಬರುತ್ತಾಳೆ ಅವನು ಅವಳಲ್ಲಿ ಮಾತಾಡಬೇಕೆಂದು ಯೋಚಿಸಿ ಬಂದಿರುತ್ತಾನೆ. ಆದರೆ ಅವನಿಗೆ ಮಾತೆ ಹೊರಡಲಿಲ್ಲ. ಇನ್ನೊಂದು ದಿನಾನು ಹಾಗೆ ಯೋಚಿಸಿ ಬರುತ್ತಾನೆ ಆದರೆ ಅವತ್ತು ಅವನು ಯೋಚಿಸಿದಾಗೆ ಮಾತಾಡಲು ಆಗೋದೇ ಇಲ್ಲ. ಹೀಗೆ ಅವಳಬಗ್ಗೆ ಯೋಚಿಸಲು ಸುರು ಮಾಡಿದ, ಕನಸಲ್ಲೇ ಮನೆ ಮಾಡಲು ಶುರುಮಾಡಿದ. ಕನಸಲ್ಲೇ ಪ್ರೀತಿ ಮಾಡಿದ. ಮರುದಿನ ಅವಳನ್ನು ಬೈಕ್ ಅಲ್ಲಿ ಕೂರಿಸಿಕೊಂಡು ಹೋಗಬೇಕೆಂದುಕೊಂಡು ಯೋಚಿಸಿದ್ದ. ಮರುದಿನ ಮತ್ತೆ ಅದೇ ಸ್ಥಳದಲ್ಲಿ ನಿಂತಿದ್ದ ಆದರೆ ಹುಡುಗಿ ಬೇರೆ ಯಾರೋ ಹುಡುಗನ ಜೊತೆ ಬೈಕ್ ಅಲ್ಲಿ ಹೋಗುತ್ತಿದ್ದಳು. ಆದರೆ ಅವನಿಗೆ ತುಂಬಾ ಶಾಕ್ ಆಯಿತು ಬೇಸರನು ಆಯಿತು ಆದರೆ ಹುಡುಗಿ ಹೋಗೋವಾಗ ಒಂದು ಚೀಟಿಯನ್ನು ಬಿಸಾಡಿದಳು ತಕ್ಷಣ ಹುಡುಗ ಓದಿದ ಅದರಲ್ಲಿ ಇವನು ನನ್ನ ಅಣ್ಣ ಅಂತ ಬರೆದಿತ್ತು. ಹುಡುಗನಿಗೆ ಅದ ಖುಷಿ ಅಷ್ಟಿಷ್ಟಲ್ಲ ಅವನ ಖುಷಿಗೆ ಪಾರವೇ ಇರಲಿಲ್ಲ. ಆದರೆ ಅವತ್ತು ಅವನು ಯೋಚಿಸಿದ್ದು ಆಗಲೇ ಇಲ್ಲ. ಅವಳು ಹೋಗೋವಾಗ ಬಾಯ್ ಮಾಡಿ ಹೋದಳು. ಮರುದಿನ ಹುಡುಗ ಮತ್ತದೇ ಸ್ಥಳದಲ್ಲಿ ಆದರೆ ಒಂದು ಗುಲಾಬಿಯೊಂದಿಗೆ. ಇವತ್ತು ಹುಡುಗ ಆ ಗುಲಾಬಿಯನ್ನು ಕೊಟ್ಟು ತನ್ನ ಪ್ರೀತಿಯನ್ನು ಹೇಳಬಯಸಬೇಕೆಂದಿದ್ದ. ಸ್ವಲ್ಪ ಹೊತ್ತಲ್ಲೇ ಬಸ್ ಬಂತು ಆದರೆ ಹುಡುಗಿ ಬರಲಿಲ್ಲ. ಅವನು ಪ್ರಾರಂಭದಿಂದ ಯೋಚಿಸಿದ್ದು ಯಾವುದು ಆಗಲೇ ಇಲ್ಲ. ಹೀಗೆ ವಾರಗಟ್ಟಲೆ ಗುಲಾಬಿಯೊಂದಿಗೆ ಹುಡುಗ ಅದೇ ಸ್ಥಳದಲ್ಲಿ ಕಾಯುತ್ತಿದ್ದ ಆದರೆ ಹುಡುಗಿ ಬರಲೇ ಇಲ್ಲ ಒಂದು ದಿನವು. ಪ್ರತಿ ದಿನ ತಂದ ಗುಲಾಬಿಯು ಕೊನೆಗೆ ಅವನ ಕೈಯಿಂದ ಉದುರಿ ಅಲ್ಲೇ ಬೀಳುತ್ತಿತ್ತು. ಹೀಗೆ ಎರಡು ವಾರ ಪ್ರತಿ ದಿನ ಬಂದು ಕಾದ ಗುಲಾಬಿಯ ಬೊಕ್ಕೆ ಒಂದಿಗೆ ಆದರೆ ಅವಳು ಬರಲೇ ಇಲ್ಲ . ಪ್ರತಿ ದಿನ ಗುಲಾಬಿ ಅಲ್ಲೇ ರಸ್ತೆಯ ಬದಿಯಲ್ಲಿ ಬಿಳುತಿತ್ತು.
ಯೋಚಿಸಿದ್ದು ಯಾವುದು ಆಗದೆ ಮನೆ ಸೇರುತ್ತಿದ್ದ. ಕೊನೆಗೆ ತನ್ನ ಊರಿಗೆ ಹೋರಟು ಹೋದ.
ಕೊನೆಗೂ ಪ್ರೀತಿ ಪ್ರಾರಂಭವಾಗದೆ ಅಂತ್ಯವಾಹಿತು. ಇಷ್ಟಕ್ಕೂ ಹುಡುಗಿ ಎಲ್ಲಿ ಹೋದಳು ಅಂತ ಪ್ರಶ್ನೆ ಬರಬಹುದು ನಿಮಗೆ ಮತ್ತು ಹುಡುಗಿಯು ಹುಡುಗನನ್ನು ಪ್ರೀತಿ ಮಾಡುತ್ತಿದ್ದಾಳ? ಹುಡುಗಿ ಎಲ್ಲಿ ಹೋದಳು? ಹುಡುಗನಿಗೆ ಮೋಸ ಮಾಡಿದ್ಲಾ ಅನ್ನೋ ಪ್ರಶ್ನೆಗಳು ಮೂಡಬಹುದು.
ಆದರೆ ಉತ್ತರ ಇಲ್ಲಿದೆ ಅವಳು ಸಹ ಅವನನ್ನು ಪ್ರೀತಿ ಮಾಡುತ್ತಿದ್ದಳು. ಅವಳು ಹುಡುಗ ಯೋಚನೆ ಮಾಡಿದಾಗೆ ಮಾಡುತ್ತಿದ್ದಳು ಆದರೆ ಯೋಚಿಸಿದಾಗೆ ಮಾಡಲು ಆಗಲೇ ಇಲ್ಲ. ಆದರು ಒಂದು ದಿನ ಅವಳು ಪ್ರೀತಿಯನ್ನು ಹೇಳಬೇಕೆಂದು ಬರೋವಾಗ ಆಕ್ಸಿಡೆಂಟ್ ಆಗಿ ಸಾಯುತ್ತಾಳೆ. ಆದರೆ ಇದು ಹುಡುಗನಿಗೆ ಗೊತ್ತೇ ಆಗಲ್ಲ ದಿನಗಳು ಕಳೆದರು. ಆದರೆ ಅವನು ಪ್ರತಿದಿನ ಗುಲಾಬಿ ಹಿಡಿದು ಅವಳಿಗೆ ಕಾಯುತ್ತಿದ್ದ ಆದರೆ ಅವಳೇ ಇಲ್ಲ ಅಂದಮೇಲೆ ಅವಳು ಹೇಗೆ ಬರುತ್ತಾಳೆ. ಹುಡುಗನಿಗೆ ಇದು ಕೊನೆಗೂ ತಿಳಿಯಲೇ ಇಲ್ಲ.
ಇನ್ನೊಂದು ಮನಸಿಗೆ ತಟ್ಟೋ ವಿಷಯ ಏನೆಂದರೆ ಅವನು ಬಂದು ನಿಲ್ಲುತ್ತಿದ್ದ ರಸ್ತೆಯ ಬದಿಯಲ್ಲಿ ತುಂಬಾ ಪೋಸ್ಟರ್ಸ್ ಇತ್ತು ಕೆಳಗೆ ಆ ಹುಡುಗಿಯ ಫೋಟೋ ಮತ್ತು ಅವಳಿಗೆ ಶ್ರದ್ಧಾಂಜಲಿ ಕೋರಿದ ಪೋಸ್ಟರ್ ಸಹ ಇತ್ತು ಆದರೆ ಅದು ಅವನ ಕಣ್ಣಿಗೆ ಬಿಳಲೇ ಇಲ್ಲ. ಆದರೆ ಅವನು ಪ್ರತಿ ದಿನ ಗುಲಾಬಿಯನ್ನು ಅವಳ ಫೋಟೋದ ಕೆಳಗೆ ಬೀಳಿಸಿ ಹೋಗುತ್ತಿದ್ದ. ಆ ಗುಲಾಬಿ ಸೇರಬೇಕಾದವರಿಗೆ ಸೇರುತ್ತಿತ್ತು ಆದರೆ ಅದು ಕೂಡ ಹುಡುಗನಿಗೆ ತಿಳಿಯಲೇ ಇಲ್ಲ.
ಎಷ್ಟು ದುಃಖದ ಕಥೆ ಅಲ್ವ ? ಚಿಗುರಿದ ಪ್ರೀತಿ ಅರಳೋ ಮೊದಲೇ ದೇವರ ಪಾದ ಸೇರಿತ್ತು.
 By Putta Heart

No comments:

Post a Comment